ಉಪಯುಕ್ತ ಮಾಹಿತಿ

ಯಾವುದೇ ಕೆಮಿಕಲ್ ಸೇರಿಸದೆ ಮನೆಯಲ್ಲೇ ಸಿಗುವ ಆರೋಗ್ಯಕರ ಪದಾರ್ಥಗಳಿಂದ ಲಿಪ್ ಬಾಮ್ ತಯಾರಿಸುವ ಅತಿ ಸರಳ ವಿಧಾನ..ಇದನ್ನು ತಯಾರಿಸಲು ಕೇವಲ ಎರಡು ವಸ್ತುಗಳು ಮಾತ್ರ ಸಾಕು

681

ಚಳಿಗಾಲದಲ್ಲಿ ತುಟಿಗಳು ವಿಪರೀತ ಹೊಡೆಯುತ್ತವೆ. ಕೆಲವೊಮ್ಮೆ ಬಿರುಕು ಬಂದು ರಕ್ತವೂ ಸುರಿಯುತ್ತದೆ. ಇದರ ಉಪಶಮನಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ನಿಂದು ತಯಾರಾದ ಕ್ರೀಮ್ ಗಳು ಲಿಪ್ ಬಾಮ್ ಗಳನ್ನು ಬಳಸಿದಷ್ಟೂ ಇದರ ತಿಂದರೆ ಹೆಚ್ಚಾಗುತ್ತದೆ.

ಅದರ ಬದಲು ಮನೆಯಲ್ಲಿಯೇ ಸಿಗುವ ನ್ಯಾಚುರಲ್ ಪದಾರ್ಥಗಳನ್ನು ಬಳಸಿ ಲಿಪ್ ಬಾಮ್ ತಯಾರಿಸಿ ಬಳಸಿದರೆ ತುಟಿಗಳನ್ನು ರಕ್ಷಿಸಬಹುದು ಮತ್ತು ಹಣವನ್ನೂ ಉಳಿಸ ಬಹುದು.

ಇದಕ್ಕಾಗಿ ಅಗತ್ಯವಿರುವ ಪದಾರ್ಥ ಗಳೆಂದರೆ ಕೇವಲ ನೀರು, ಬೀಟ್ ರೂಟ್ ಮತ್ತು ತುಪ್ಪ.

beets

ಮಾಡುವ ವಿಧಾನ.

ಒಂದು ಬೀಟ್ ರೂಟ್ ಅನ್ನು ಸಿಪ್ಪೆ ತೆಗೆದು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ತುರಿದುಕೊಳ್ಳಿ. ತುರಿದ ಬೀಟ್ ರೂಟ್ ನಿಂದ ರಸವನ್ನು ಸೋಸಿಕೊಳ್ಳಿ. ಅಥವಾ ಬೀಟ್ ರೂಟ್ ಸಣ್ಣಗೆ ಹೆಚ್ಚಿ ಮಿಕ್ಸರ್ ನಲ್ಲಿ ರುಬ್ಬಿ ರಸ ತೆಗೆದು ಕೊಳ್ಳಿ.

ಒಂದು ಬಟ್ಟಲಿನಲ್ಲಿ ಎರಡು ಟೇಬಲ್ ಸ್ಪೂನ್ ತುಪ್ಪ ತೆಗೆದುಕೊಳ್ಳಿ ಅದಕ್ಕೆ ಎರಡು ಟೇಬಲ್ ಸ್ಪೂನ್ ಬೆಟ್ ರೂಟ್ ರಸ ಹಾಕಿ ಕಲಸಿ.

ಇನ್ನೊಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಇದರ ಒಳಗೆ ಬೀಟ್ ರೂಟ್ ರಸ ಮತ್ತು ಜೇನು ತುಪ್ಪ ಮಿಶ್ರಣ ವಿರುವ ಬಟ್ಟ ಲನ್ನು ಇಡಿ. ಮತ್ತು ಅದ ಮಿಶ್ರಣವನ್ನು ಹಬೆಯಲ್ಲಿ ಇನ್ನೂ ಚೆನ್ನಾಗಿ ಕಲಸಿ.

ನಂತರ ಆ ರಸವನ್ನು ಒಂದು ಚಿಕ್ಕ ಡಬ್ಬಿ ಅಥವಾ ಗಾಜಿನ ಪಾತ್ರೆ ಅಥವಾ ಯಾವುದಾದರೂ ಬಟ್ಟಲಿನಲ್ಲಿ ಹಾಕಿ ರೆಫ್ರಿಜಿರೇಟರ್ ನಲ್ಲಿ ಇಟ್ಟು ಗಟ್ಟಿಗಾಗಲು ಬಿಡಿ. ಈಗ ನ್ಯಾಚುರಲ್ ಲಿಪ್ ಬಾಮ್ ದಿನ ನಿಮ್ಮ ತುಟಿಗಳಿಗೆ ಬಳಸಲು ಸಿದ್ದ.

ದಿನವೂ ಈ ಲಿಪ್ ಬಾಮ್ ಅನ್ನು ತುಟಿಗಳಿಗೆ ಅಚ್ಚುತ್ತಾ ಬಂದರೆ ತುಟಿಗಳು ಕೆಂಪಗೆ ಆಗುತ್ತವೆ. ಮತ್ತು ತುಟಿ ಹೊಡೆಯುವುದು, ಬಿರುಕು ಬಿಡುವುದನ್ನು, ಒಣಗುವುದು ಈ ಎಲ್ಲಾ ರೀತಿಯ ಸಮಸ್ಯೆ ಗಳೂ ದೂರವಾಗುತ್ತದೆ. ಇದು ನ್ಯಾಚುರಲ್ ಆಗಿರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಮತ್ತು ಹಣವನ್ನು ಉಳಿಸಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ