ಭಾರತ ಎಂದರೆ ಪುಣ್ಯಭೂಮಿಯೇ ಸರಿ!! ಇಲ್ಲಿರುವ ಕೆಲವೊಂದು ನಿಗೂಢ ಸ್ಥಳಗಳು ಹಾಗೂ ಕೆಲವೊಂದು ವಿಚಾರಗಳು ಅಚ್ಚರಿಯನ್ನು ಮೂಡಿಸುತ್ತದೆ!! ಅದರ ಬಗ್ಗೆ ಎಷ್ಟೂ ಪರಿಶೀಲನೆ ನಡೆಸಿದರೂ ಏನೋ ದೈವೀ ಶಕ್ತಿ ಎಂಬುವುದನ್ನು ನಂಬಲೇ ಬೇಕಾಗುತ್ತದೆ!! ಇಂತಹ ಕೆಲವೊಂದು ಸಂಗತಿಗಳಿಗೂ ವಿಜ್ಞಾನಿಗಳಿಗೂ ಸವಾಲಾಗಿರುವುದಲ್ಲದೆ ಅಚ್ಚರಿಯನ್ನುಂಟು ಮಾಡಿಸುತ್ತದೆ..
ಈಗಾಗಲೇ ಭಾರತದಲ್ಲಿ ಹಲವಾರು ಕೋಟೆಗಳನ್ನು ನಾವು ಕಂಡಿದ್ದೇವೆ.. ಆದರೆ ಯಾವತ್ತಾದರೂ ತಲೆಕೆಳಗಾದ ರಹಸ್ಯ ಕೋಟೆಯ ಬಗ್ಗೆ ಯಾರಾದರೂ ಕೇಳಿದ್ದೀರಾ?! ತಲೆಕೆಳಗಾದ ಕೋಟೆ ಅಂದಾಗಲೇ ಅಚ್ಚರಿಯನ್ನುಂಟು ಮಾಡುತ್ತೆ ಅಲ್ವಾ?! ಹೌದು ಇಂತಹ ಕೋಟೆ ಉತ್ತರಖಂಡದ ಉದಮ್ ಸಿಂಗ್ ನಲ್ಲಿನ ಕಾಶಿಪುರದಲ್ಲಿದೆ. ಇಲ್ಲಿನ ಅಚ್ಚರಿಯೆಂದರೆ ಈ ಕೋಟೆಯ ಉಪ್ಪರಿಗೆ ಮೇಲೆ ನೆಲವಿದೆ. ಹಾಗೂ ಕೋಟೆಯ ಕೆಳಗಿನ ಭಾಗದಲ್ಲಿ ಆಕಾಶವಿದೆ.ಈ ವರೆಗೂ ಈ ಕೋಟೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆ ಸ್ಥಳದಲ್ಲಿ ಅವಶೇಷಗಳೂ ಸಿಗಲಾರಂಭಿಸಿದ ನಂತರ ಪುರಾತತ್ವ ವಿಭಾಗ ಇದರ ಪರಿಶೀಲನೆ ನಡೆಸಿದ್ದು ಇದು ಪಾಂಡವರಿಂದ ನಿರ್ಮಿಸಲ್ಪಟ್ಟಿದ್ದು ಈ ಕೋಟೆಯು ಮಹಾಭಾರತದ ಕಾಲದ್ದು ಎನ್ನಲಾಗುತ್ತದೆ. ಅದಲ್ಲದೆ ಪಾಂಡವರು ಶಿಕ್ಷಣ ಪಡೆದಿದ್ದು ಇಲ್ಲಿಯೇ ಎಂಬುದಕ್ಕೆ ಕೆಲ ಸಾಕ್ಷ್ಯಾಧಾರಗಳು ದೊರಕಿವೆ.. ದ್ರೋಣಾಚಾರ್ಯರು ಅರ್ಜುನನಿಗೆ ಬಿಲ್ಲುವಿದ್ಯೆ ಕಲಿಸಿದ್ದು ಇಲ್ಲೇ ಎನ್ನಲಾಗುತ್ತದೆ.
ಈ ಕೋಟೆಯು ತಲೆಕೆಳಗಾಗಿರುದಕ್ಕೆ ಯಾವುದೋ ಶಕ್ತಿ ಮೂಲಕ ಇದನ್ನು ತಲೆಗೆಳಗೆ ಮಾಡಲಾಗಿದೆ ಎನ್ನಲಾಗುತ್ತದೆ. ಯುಗ ಬದಲಾಗುವ ಜೊತೆಗೆ ಈ ಕೋಟೆಯು ನೆಲದೊಳಗೆ ಹುದುಗಿ ಹೋಗಿದೆ ಎನ್ನಲಾಗಿದ್ದು ಈ ನೆಲದೊಳಗೆ ಯುಗಪುರಾಣ ರಹಸ್ಯ ಅಡಗಿದೆ ಎನ್ನಲಾಗುತ್ತದೆ. ಪುರಾತತ್ವ ವಿಭಾಗವು ಈ ನೆಲವನ್ನು ಅಗೆದು ಪರೀಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಹಲವಾರು ರಹಸ್ಯ ವಿಚಾರಗಳು ದೊರಕಿವೆ..ಈಗಾಗಲೇ, ಶತಶತಮಾನಗಳಷ್ಟು ಹಿಂದಿನ ಸಂಗತಿಗಳು ಭೂಗರ್ಭದಲ್ಲಿ ಹುದುಗಿ ಹೋಗಿ ಅದೆಷ್ಟೋ ವಿಚಾರಗಳು ಉತ್ಖನನ ವೇಳೆಗೆ ಸಿಕ್ಕಿರುವ ವಿಚಾರಗಳ ಬಗ್ಗೆ ತಿಳಿದೇ ಇದೆ!! ಆದರೆ ರಾಮಾಯಣ, ಮಹಾಭಾರತಗಳು ನಡೆದೇ ಇಲ್ಲ, ಇದೊಂದು ಕಟ್ಟು ಕಥೆಯೆಂದು ಹೇಳಿ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದ ಬುದ್ಧಿಜೀವಿಗಳು ಇಲ್ಲಿ ಮತ್ತೆ ಉತ್ತರ ದೊರಕುವಂತಾಗಿದೆ!!
ಮಹಾಭಾರತದ ಕಾಲದ ವಸ್ತುಗಳು ಪುರಾತತ್ವ ವಿಭಾಗ ಪರಿಶೀಲನೆಯಿಂದ ಅನೇಕ ಮೂರ್ತಿಗಳು ದೊರಕಿದ್ದು ಮಹಾಭಾರತದ ಕಾಲದ ವಸ್ತುಗಳು ಸಿಕ್ಕಿವೆ. ಈ ಕೋಟೆಯ ಬಗ್ಗೆ ಏನೋ ದೈವೀ ಶಕ್ತಿ ಅಡಗಿದೆ ಎಂದು ಹೇಳುತ್ತಾರೆ ಯಾಕೆಂದರೆ ಇಂತಹ ವಿಸ್ಮಯಕಾರಿ ಕೋಟೆ ಎಲ್ಲೂ ನಮಗೆ ಕಾಣ ಸಿಗುವುದಿಲ್ಲ!! ಹಿಂದೆ ಈ ಕೋಟೆ ಸರಿಯಾಗಿಯೇ ಇತ್ತು. ಆದರೆ ಯಾವುದೋ ಶಾಪದ ಕಾರಣದಿಂದ ಈ ಕೋಟೆ ತಲೆಕೆಳಗಾಗಿದೆ ಎನ್ನಲಾಗುತ್ತಿದ್ದು ಅದರ ರಹಸ್ಯ ಇನ್ನೂ ತಿಳಿದಿಲ್ಲ!! ಪುರಾತತ್ವ ಇಲಾಖೆಯ ಪರಿಶೀಲನೆ ಇನ್ನೂ ಮುಗಿಯದ ಕಾರಣ ಈಗ ಇಲ್ಲಿ ಜನರಿಗೆ ಪ್ರವೇಶ ನಿಷೇಧಿಸಲಾಗಿದ್ದು ಕಲ್ಲಿನ ಅವಶೇಷಗಳು ಸಿಗಲಾರಂಭಿಸಿದೆ…
ಅದಲ್ಲದೆ ಈ ಕೋಟೆಯ ಬಗ್ಗೆ ಇನ್ನೂ ಯಾರಿಗೂ ತಿಳಿದಿಲ್ಲ.. ಇದನ್ನು ತಲೆಕೆಳಗಾಗಿಯೇ ನಿರ್ಮಿಸಲಾಗಿತ್ತಾ ಅಥವಾ ಜನರು ಹೇಳುವಂತೆ ಯಾವುದೋ ಶಕ್ತಿಯಿಂದಾಗಿ ಈ ಕೋಟೆ ತಲೆಕೆಳಗಾಗಿದೆಯಾ ಎನ್ನುವುದು ತಿಳಿದಿಲ್ಲ. ಮತ್ತೊಂದು ವಿಚಾರವೆಂದರೆ ಈ ಕೋಟೆಯಿಂದ ಸ್ವಲ್ಪ ದೂರದಲ್ಲೇ ದ್ರೋಣ ಸಾಗರವಿದೆ. ಇದನ್ನು ದ್ರೋಣಾಚಾರ್ಯರ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಗಂಗಾ ನದಿಯಷ್ಟೇ ಪವಿತ್ರ ಎನ್ನಲಾಗುತ್ತದೆ. ಇಲ್ಲಿ ದ್ರೋಣಾಚಾರ್ಯರ ಶಿಷ್ಯರು ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ. ಅದಲ್ಲದೆ ಈ ಕೋಟೆಯ ಬಗ್ಗೆ ಇನ್ನೂ ಪುರಾತತ್ವ ಇಲಾಖೆಯಿಂದ ಪರಿಶೀಲನೆ ನಡೆಯುತ್ತಿದೆ..ಆದರೆ ಪ್ರಪಂಚದಲ್ಲಿ ನಡೆಯುವ ಅದೆಷ್ಟೋ ವಿಚಿತ್ರಗಳು ಒಂದು ಕ್ಷಣ ನಮ್ಮ ಕಣ್ಣು ತೆರೆಸುತ್ತವೆ. ಅಷ್ಟೇ ಅಲ್ಲದೇ, ಈ ವಿಚಿತ್ರಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಅದನ್ನೂ ಪರೀಕ್ಷಿಸಲೂ ಮುಂದಾಗುತ್ತೇವೆ ಕೂಡಾ!!! ದೇವರು ಇದ್ದಾನೆಯೇ ಅಥವಾ ಇಲ್ಲವೋ ಎಂಬ ಗೊಂದಲ ಇರುವವರಿಗೆ, ದೇವರು ಇಲ್ಲ ಎಂದು ವಾದಿಸುವವರ ಕಣ್ಣು ತೆರೆಸಬೇಕು ಎಂದು ಆ ಭಗವಂತನು ನಮಗೆ ಇಂತಹ ಅದ್ಭುತಗಳನ್ನು ಮಾಡಿ ತೋರಿಸುತ್ತಾನೋ ಏನೋ ಗೊತ್ತಿಲ್ಲ!!… ಇಂತಹ ವಿಸ್ಮಯಗಳನ್ನು ನಾವು ನಂಬಲೇ ಬೇಕು….
ಆದರೆ ಇಂತಹ ರಹಸ್ಯ ಕೋಟೆಗಳು ವಿಜ್ಞಾನಿಗಳಿಗೂ ಅಚ್ಚರಿಯನ್ನುಂಟು ಮಾಡುತ್ತಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವ ಹಾಗೆ ಆಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಈ ತಲೆಮಾರಿನ ಮಕ್ಕಳಿಗೆ ಒಂದರ್ಥದಲ್ಲಿ ಅಪರೂಪದ ವಸ್ತುವೇ ಆಗಿರುವ ಒಂದು ರೂಪಾಯಿಯ ನೋಟು ಚಲಾವಣೆಗೆ ಬಂದು ಇಂದಿಗೆ(ನ.30, 1917) ಸರಿಯಾಗಿ ನೂರು ವರ್ಷ ಸಂದಿದೆ. ಕಿಂಗ್ ಐದನೇ ಜಾರ್ಜ್ ಚಿತ್ರದೊಂದಿಗೆ ಹೊರಬಂದ ಈ ನೋಟಿನ ವಿಶೇಷತೆ ಎಂದರೆ ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ಮುದ್ರಿಸುವುದಿಲ್ಲ. ಬದಲಾಗಿ ಭಾರತೀಯ ಸರ್ಕಾರ ಮುದ್ರಿಸುತ್ತದೆ.
ರಾತ್ರಿ ಹೊತ್ತು ಕಾಲುಸೆಳೆತವುಂಟಾಗಿ ನಿಮಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಿದೆಯೇ..? ಹೀಗೆ ಸೆಳೆತ ಉಂಟಾಗಲು ಹಲವಾರು ಕಾರಣಗಳಿವೆ. ಮಧುಮೇಹ, ನರಗಳ ಬಲಹೀನತೆ, ಗರ್ಭಧಾರಣೆ ಹಾಗೂ ಡೀಹೈಡ್ರೇಶನ್(ನಿರ್ಜಲೀಕರಣ) ಮುಂತಾದ ಕಾರಣಗಳಿಂದ ಕಾಲುಗಳ ಸೆಳೆತ ಉಂಟಾಗಬಹುದು.
ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…
ಸಾಮಾನ್ಯವಾಗಿ ನಮ್ಮಲ್ಲಿ ಒಂದು ವಾಡಿಕೆಯಿದೆ, ಅದೇನಂದ್ರೆ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ನೀನು ಸತ್ತಾಗ ನರಕ್ಕೆ ಹೋಗೋದು ಅಂತ ಶಾಪ ಹಾಕ್ತಾರೆ. ಹಿಂದೂ ಧರ್ಮದ ಪ್ರಕಾರ ಮನುಷ್ಯರು ಮಾಡಿದ ಪಾಪ ಅಥವಾ ಪುಣ್ಯಗಳನ್ನು ಅನುಸರಿಸಿ ,ಅವರು ಸತ್ತನಂತರ ಅವರ ಆತ್ಮಗಳು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತವೆಂದು ಎಲ್ಲರ ವಿಶ್ವಾಸ.
ಕ್ಯಾರೆಟ್ಟುಗಳಲ್ಲಿ ಕ್ಯಾಲೋರಿ ಪ್ರೋಟೀನ್ ಹಾಗೂ ಕೊಬ್ಬಿನ ಅಂಶಗಳು ತುಂಬ ಕಡಿಮೆ ಇದ್ದು, ಸುಮಾರು 86-95 ಶೇಖಡಾದಷ್ಟು ನೀರಿನ ಅಂಶವನ್ನು ಒಳಗೊಂಡಿದೆ. ಒಂದು ಮಧ್ಯಮ ಗಾತ್ರದ ಕ್ಯಾರೆಟ್ ಸೇವಿಸುವುದರಿಂದ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಹಾಗೂ ಕೇವಲ ನಾಲ್ಕು ಗ್ರಾಂ ನಷ್ಟು ಜೀರ್ಣವಾಗುವ ಕಾರ್ಬೋಹೈಡ್ರೇಟುಗಳು ಲಭ್ಯವಾಗುತ್ತವೆ. ವಿವಿಧ ಪ್ರೋಟಿನ್, ವಿಟಮಿನ್ ಗಳನ್ನು ಹೇರಳವಾಗಿ ಹೊಂದಿರುವ ಕ್ಯಾರೆಟ್ ರೋಗ ನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ. ಇದು ತ್ವಚೆಗೆ ಸಹಕಾರಿಯಾಗಿದ್ದು, ಹಲವಾರು ರೋಗಗಳನ್ನು ದೂರವಿಡುತ್ತದೆ.ರಕ್ತದ ಶುದ್ಧತೆಗೆ ಹಾಗೂ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶಗಳನ್ನು…
ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್ ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು. ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ…