ಹೌದು. ಉತ್ತರ ಪ್ರದೇಶ ರಾಜ್ಯದ ಆಗ್ರಾ-ಜೈಪುರ ಹೆದ್ದಾರಿಯ ಆಗ್ರಾದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಅಚ್ನೇರಾ ಬ್ಲಾಕ್ನ ಕುರಾಲಿ ತೆಹ್ಸಿಲ್ಯಲ್ಲಿನ ಚಹ್ ಪೋಕರ್ ಎಂಬ ಗ್ರಾಮದಲ್ಲಿ ಸುಮಾರು 50 ಮುಸ್ಲಿಂ ಕುಟುಂಬಗಳಿವೆ. ಅವರೆಲ್ಲರೂ ತಮ್ಮ ಕುಟುಂಬಸ್ಥರು ಯಾರದರೂ ಸತ್ತರೆ ಅವರನ್ನು ತಮ್ಮ ಮನೆಯಲ್ಲಿಯೆ ಸಮಾಧಿ ಮಾಡುವುದನ್ನು ರೂಡಿಸಿಕೊಂಡು ಬಂದಿದ್ದಾರಂತೆ. ಇದು ಯಾವುದೇ ಪದ್ಧತಿಯಲ್ಲ, ಬಲವಂತ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿರುವ 50 ಮುಸ್ಲಿಂ ಮನೆಗಳಲ್ಲಿ ಸುಮಾರು 300 ಜನಸಂಖ್ಯೆ ಹೊಂದಿದೆ. ಆದರೆ ಅವರಿಗೆ ಖಾಯಂ ಸ್ಮಶಾನ ಭೂಮಿ ಇಲ್ಲ. ಸ್ಮಶಾನ ಭೂಮಿಯ ಕೊರತೆಯಿರುವುದರಿಂದ ಯಾರೇ ಸತ್ತರೂ ಕುಟುಂಬದವರು ಅವರನ್ನು ಅವರ ಮನೆಯಲ್ಲಿಯೇ ಸಮಾಧಿ ಮಾಡುತ್ತಾರೆ. ಇಲ್ಲಿರುವ ಬಹುಪಾಲು ಮುಸ್ಲಿಮರು ಸ್ವಂತ ಭೂಮಿ ಇರದ ಕೂಲಿ ಕೆಲಸ ಮಾಡುವ ಕಡುಬಡವರು. ತಮ್ಮದೇ ಭೂಮಿ ಅಥವಾ ಜಮೀನು ಹೊಂದಿರುವವರು ತಮ್ಮ ಜಮೀನಿನಲ್ಲಿ ಸಮಾಧಿ ಮಾಡಬಹುದು.
ಮಾಧ್ಯಮಗಳೊಂದಿಗೆ ಮಾತನಾಡಿದ ರಿಂಕಿ ಬೇಗಂ, ವಿಪರೀತ ಜ್ವರದಿಂದ ಸತ್ತ ನನ್ನ 10 ತಿಂಗಳ ಮಗುವಿನಿಂದ ಹಿಡಿದು ನಮ್ಮ ಕುಟುಂಬದ ಐವರನ್ನು ನಾವು ಹಿತ್ತಲಿನಲ್ಲಿ ಸಮಾಧಿಮಾಡಿದ್ದೇವೆ ಎಂದರು.
ಗುಡ್ಡಿ ಎಂಬವರ ಮಾತನಾಡಿ, ನಮ್ಮಂತಹ ಬಡವರಿಗೆ ಸಾವಿಗೆ ಬೆಲೆಯಿಲ್ಲ. ಮನೆಯಲ್ಲಿ ಜಾಗದ ಕೊರತೆಯಿಂದ ಸತ್ತವರ ಸಮಾಧಿ ಮೇಲೆಯೇ ದಿನನಿತ್ಯ ಓಡಾಡುತ್ತೇವೆ ಹಾಗೂ ಅದರ ಮೇಲೆ ಕೂರುತ್ತೇವೆ ಎಂದು ಹೇಳುತ್ತಾರೆ.
ಅಡುಗೆ ಕೋಣೆಗಳಲ್ಲಿ, ಕೊಠಡಿಗಳಲ್ಲಿ, ಅಂಗಳದಲ್ಲಿ, ಮನೆಯ ಇಕ್ಕೆಲಗಳಲ್ಲಿ ಹಾಗೂ ಹಿತ್ತಲಿನಲ್ಲಿ ನಿರ್ಮಿಸಿರುವ ಸಮಾಧಿಗಳಲ್ಲಿ ಶವಗಳು ಕೊಳೆಯುವಾಗ ಉಂಟಾಗುವ ದುರ್ವಾಸನೆ ಹಾಗೂ ಮಾಲಿನ್ಯತೆಯನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ಜೊತೆಗೆ ಇದರಿಂದ ಮಾನಸಿಕ ಆಘಾತಗಳು ಕೂಡ ಕಾಡುತ್ತವೆ. ಪಕ್ಕದ ಊರಿನ ಮುಸ್ಲಿಂರು ಈ ಗ್ರಾಮಕ್ಕೆ ಕಾಲಿಡುವುದನ್ನೆ ಬಿಟ್ಟಿದ್ದಾರೆ. ಮಳೆಗಾಲದಲ್ಲಿ ಈ ಸಮಾಧಿಯಲ್ಲಿನ ಅವಶೇಷಗಳು ಹೊರಬರುವ ಸಾಧ್ಯತೆಗಳೂ ಇರುತ್ತವೆ.ಮುನೀಮ್ ಖಾನ್ ಮಾತನಾಡಿ, ನಮ್ಮ ಪೂರ್ವಜರಿಗಾಗಿ ಸ್ವಲ್ಪ ಜಾಗ ಕೊಡಿ ಎಂದು ನಾವು ಕೇಳಿಕೊಂಡಿದ್ದೇವೆ. ಹಿಂದುಗಳಿಗೆ ಸ್ಮಶಾನ ಜಾಗವಿದೆ ಆದರೆ ನಾವು ಸಮಾಧಿಯೊಂದಿಗೆ ವಾಸಿಸುತ್ತಿದ್ದೇವೆ ಎನ್ನುತ್ತಾರೆ.
ಈ ಹಿಂದೆ ಹಳ್ಳಿಗರ ಸಮಾಧಿಗಾಗಿ ಕೆರೆ ಇರುವ ಸ್ಥಳವನ್ನು ಆಡಳಿತ ಮಂಡಳಿ ನೀಡಿತ್ತು. ಆದರೆ ಆ ಕೆರೆಯನ್ನು ತೆರವುಗೊಳಿಸಿ ಅಲ್ಲಿ ಸಮಾಧಿಗೆ ಭೂಮಿಯನ್ನು ಸಿದ್ಧಪಡಿಸುವುದು ದುಬರಿ ಕೆಲಸವಾದುದರಿಂದ ಹೊಸ ಜಾಗವನ್ನು ಗುರುತಿಸುವುದಾಗಿ ಸರ್ಕಾರ ಹೇಳಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹಲವು ಹೆಸರುಗಳಿಂದ ಕರೆಯಲ್ಪಡುವ ಆಂಜನೇಯನ ವಿಶೇಷತೆ ಮಹತ್ವ ಪೂರ್ಣವಾದದ್ದು. ರಾಮನ ಪರಮ ಭಕ್ತನಾದ ಹನುಮಂತನಿಗೆ ಅಪಾರ ಸಂಖ್ಯೆಯ ಭಕ್ತರು… ಮೊದಲಿಗೆ ಪಂಚಮುಖಿ ಆಂಜನೇಯನ ಅವತಾರವಾಗಿದ್ದು ಹೇಗೆ ಎಂದು ತಿಳಿಯೋಣ… ರಾಮಾಯಣದ ಯದ್ಧದಲ್ಲಿ ರಾಮ ರಾವಣರು ಯುದ್ದ ಮಾಡುತ್ತಿರುವಾಗ, ರಾವಣನು ಪಾತಾಳಲೋಕದ ದೊರೆಯಾದ ಅಹಿರಾವಣನ ಸಹಾಯ ಪಡೆಯುತ್ತಾನೆ ಹನುಮಂತನು ರಾಮ ಲಕ್ಷ್ಮಣರ ರಕ್ಷಣೆಗೆ ನಿಲ್ಲುತ್ತಾನೆ. ಹನುಮಂತನು ರಾಮ ಲಕ್ಷ್ಮಣರನ್ನು ರಕ್ಷಿಸಲು ಬೃಹತ್ ಆಕಾರ ತಳೆಯುತ್ತಾನೆ, ಅಹಿರಾವಣನು ರಾವಣನ ತಮ್ಮನಾದ ವಿಭೀಷಣನ…
ಹುಚ್ಚ ವೆಂಕಟ್…..ತಮ್ಮ ಯಡವಟ್ಟುಗಳಿಂದಲೇ ಫೇಮಸ್ ಆದವರು. ಜೊತೆಗೆ ಬಿಗ್ ಬಾಸ್ಗೆ ಹೋಗಿ ಮತ್ತಷ್ಟು ಹೆಸರು ಮಾಡಿದ್ರು. ಕಾವೇರಿ ನೀರು, ಕನ್ನಡ ಭಾಷೆ ಬಗ್ಗೆ ಹೇಳುತ್ತಾ, ಒಂದೆರಡು ಚಿತ್ರಗಳನ್ನೂ ಮಾಡಿ, ಮಾತ್ ಮಾತಿಗೂ ನನ್ನ ಎಕ್ಕಡ ಎಂದು ಡೈಲಾಗ್ ಡೆಲವರಿ ಮಾಡುತ್ತಿದ್ದವರು ಹುಚ್ಚಾ ವೆಂಕಟ್. ಒಂದಿಲ್ಲೊಂದು ಗಲಾಟೆ ಮಾಡಿಕೊಳ್ತಾ, ಸುದ್ದಿಯಲ್ಲಿದ್ದ ಹುಚ್ಚ ವೆಂಕಟ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಚೆನ್ನೈನ ಬೀದಿಗಳಲ್ಲಿ ಹುಚ್ಚ ವೆಂಕಟ್ ಬರಿಗಾಲಲ್ಲಿ ಓಡಾಡ್ತಿರೋ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಕಾಲಲ್ಲಿ…
ಈ ಕಪ್ಪು ಬಣ್ಣದ ಕೋಳಿಗಳು ಶುಭ ಸೂಚಕ ಹಾಗೂ ಲೈಂಗಿಕ ಬಯಕೆ ವೃದ್ಧಿ.? ಜತೆಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಭಾವನೆ ಜನರಲ್ಲಿದೆ. ರಕ್ತ, ಮಾಂಸ
ಸೇರಿದಂತೆ ಪ್ರತಿಯೊಂದೂ ಕಪ್ಪು ಬಣ್ಣದಿಂದ ಕೂಡಿರುವ ಖಡಕನಾತ ಕೋಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೆಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಕೇಂದ್ರ (ಸಿಪಿಡಿಒ)ವು ಖಡಕನಾತ ಕೋಳಿಯ ಫಾರಂ ತೆರೆಯಲು ಉದ್ದೇಶಿಸಿದೆ.
ಒಂದೆಲಗ ಅಥವಾ ಬ್ರಾಹ್ಮೀ ಎಲೆ ಇದಕ್ಕೆ ದಕ್ಷಿಣ ಕನ್ನಡದ ಕಡೆ ತಿಮರೆ ಎಂದು ಕರೆಯುತ್ತಾರೆ. ಒಂದೆಲಗ ಎಂದರೆ ಒಂದು ಎಲೆ ಉಳ್ಳ ಸಸಿ ಎಂದರ್ಥ. ಇದರಲ್ಲಿರುವ ಮದ್ದಿನ ಗುಣ ಅಸಾಮಾನ್ಯವಾದದ್ದು. ಅದು ಏನೆಂದು ತಿಳಿದರೆ ನಿಮಗೆ ಆಗುತ್ತೆ ನೋಡಿ ಆಶ್ಚರ್ಯ.
ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಲೆಯ ಎದುರು ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೆಲ ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲು ವಿಫಲವಾಗಿದೆ. ಇದರ ಮಧ್ಯೆ ಬಹು ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ ಐದು ಮತಗಳನ್ನು ಪಡೆದಿದ್ದಾರೆ. ಆ ಬಳಿಕ ಎಲ್ಲರ ಮನ ಕರಗುವಂತೆ ಅವರು ಕಣ್ಣೀರಿಟ್ಟಿದ್ದು, ಇದರ ನೈಜ ಕಾರಣ ತಿಳಿದ ಸಾರ್ವಜನಿಕರು ದಂಗಾಗಿದ್ದಾರೆ. ಪಂಜಾಬ್ ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ಈ…