ಸುದ್ದಿ

ಪ್ರೀತಿಯೇ ವಿಷವಾಯ್ತ..!ಪ್ರೇಯಸಿ ತಂದುಕೊಟ್ಟ ವಿಷ ಸೇವಿಸಿ ಪ್ರೇಮಿ ಸಾವು….

120

ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.ನಂಜನಗೂಡಿನ ಕಸುವಿನಹಳ್ಳಿ ಗ್ರಾಮ ನಿವಾಸಿ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ.ಈತ ಬೆಳವಾಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುವವನಾಗಿದ್ದು ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಸಿದ್ದರಾಜು ಬೆಳವಾಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಪೋಷಕರು ಈ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೆ ಯುವತಿ ಸಹ ಇತ್ತೀಚೆಗೆ ಆತನಿಂದ ದೂರಾಗಿ ಪೋಷಕರು ತೋರೊಸೊದ್ದ ಇನ್ನೊಬ್ಬ ಯುವಕನೊಡನೆ ಮದುವೆಗೆ ಸಿದ್ದವಾಗಿದ್ದಳು.

ಇದರಿಂದ ಸಿದ್ದರಾಜು ಮನನೊಂದಿದ್ದನು. ಇದೀಗ ತ್ಮಹತ್ಯೆ ಮಾಡಿಕೊಂಡಿರುವ ಸಿದ್ದರಾಜು ತಾನು ಸಾಯುವ ಮುನ್ನ ಸೆಲ್ಫಿ ವೀಡಿಯೋ ಮಾಡಿಟ್ಟು ಹೋಗಿದ್ದಾನೆ. ಆ ವೀಡಿಯೋದಲ್ಲಿರುವಂತೆ “ತನ್ನ ಪ್ರಿಯತಮೆಯೇ ನನಗೆ ವಿಷ ತಂದು ಕೊಟ್ಟು ಕುಡಿಯುವಂತೆ ಹೇಳಿದಳು. ಅಲ್ಲದೆ ತನ್ನ ಸಾವಿಗೆ ತಾನೇ ಕಾರಣವೆಂದು ಡೆತ್ ನೋಟ್ ಬರೆದಿಡುವಂತೆಯೂ ಹೇಳಿದ್ದಳು. ಎಂದು ವಿವರಿಸಿದ್ದಾನೆ. ಅಲ್ಲದೆ ತಾನು ಬರೆದ ಡೆತ್ ನೋಟ್ ಹಾಗೂ ಆಕೆ ತಂದಿದ್ದಳೆನ್ನಲಾದ ವಿಷದ ಬಾಟಲ್ ಸಹ ಪ್ರದರ್ಶಿಸಿದ್ದಾನೆ.

“ನನ್ನನ್ನು ಪ್ರೀತಿಸಿ ವಂಚಿಸಿದ ಆ ಯುವತಿ ಮದುವೆಯಾಗಬಾರದು, ಆಕೆ, ಆಕೆಯ ತಾಯಿ ಹಾಗೂ ಅಜ್ಜಿಯೇ ನನ್ನ ಸಾವಿಗೆ ನೇರ ಕಾರಣವಾಗಿದ್ದು ಆವರನ್ನೆಲ್ಲಾ ಜೈಲಿಗೆ ಹಾಕಬೇಕು” ಎಂದು ಯುವಕ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಘಟನೆ ಕುರಿತಂತೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸ್ಯಾಂಡಲ್ ವುಡ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ಗೌರವ. ಈ ನ್ಯೂಸ್ ನೋಡಿ.

    ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಕೂಡಾ ಸಾಹಸ ನಿರ್ದೇಶನ ಮಾಡಿ, ಸಿನಿಮಾ ರಂಗದಲ್ಲಿ ತನ್ನದೇ ಆದಂತಹ ಹೆಸರು, ಖ್ಯಾತಿ ಮತ್ತು ಸ್ಥಾನವನ್ನು ಪಡೆದಿರುವ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು. ದಶಕಗಳಿಂದ ಚಿತ್ರರಂಗದಲ್ಲಿ ಸಾಹಸ ನಿರ್ದೇಶನ ಮಾಡಿರುವ ಅವರು ನಟ ಹಾಗೂ ನಿರ್ದೇಶಕನಾಗಿ ಕೂಡಾ ಹೆಸರು ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಿನಿಮಾ ರಂಗದ ಈ ಸಾಧನೆ, ಅವರ ಶ್ರಮ ಹಾಗೂ ಪರಿಶ್ರಮಕ್ಕೆ ತಕ್ಕ ಫಲವಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಗಿದೆ. ಥ್ರಿಲ್ಲರ್ ಮಂಜು ಅವರಿಗೆ ಸಂದಿರುವ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಸಿಗರೇಟ್ ಚಟದಿಂದ ಹೊರಗೆ ಬರಲು ಈ ಜ್ಯೂಸ್ ಕುಡಿಯಿರಿ ಸಾಕು.

    ನಮ್ಮ ದೇಶದಲ್ಲಿ ಸಿಗರೇಟ್ ಸೇವನೆ ಮಾಡುವವರು ಬಹಳಷ್ಟು ಜನರು ಇದ್ದಾರೆ ಬರಿ ಗಂಡಸರು ಅಷ್ಟೇ ಅಲ್ದೆ ಮಹಿಳೆಯರು ಕೂಡ ಈ ಧೂಮಪಾನ ಸೇವನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆರೋಗ್ಯಕ್ಕೆ ಮಾರಕವಾಗಿ ಕಾಡುವಂತ ಈ ಧೂಮಪಾವನ್ನು ನಿಯಂತ್ರಿಸಲು ಹಲವು ವಿಧಾನಗಳಿವೆ ಆದ್ರೆ ಈ ಚಟದಿಂದ ಬೇಗನೆ ಮುಕ್ತಿ ಪಡೆಯಲು ಆಗೋದಿಲ್ಲ, ಅಂತವರಿಗೆ ಈ ನಿಂಬೆ ಜ್ಯುಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಧೈಲ್ಯಾಂಡ್ ನ ಸಂಶೋಧನೆ ಸಾಬೀತು ಪಡಿಸಿದೆ. ಧೂಮಪಾನದಿಂದ ಕಾನ್ಸರ್ ಮುಂತಾದ ಮಾರಕ ಕಾಯಿಲೆಗಳು ಬರುತ್ತವೆ ಅಂತಹ…

  • ಸುದ್ದಿ

    ಸಿಹಿ ಸುದ್ದಿ : ಗ್ಯಾಸ್ ಸಿಲಿಂಡರ್ ಜೊತೆ ಸಿಗುತ್ತೆ 50 ಲಕ್ಷ ರೂ. ಉಚಿತ ವಿಮೆ

    ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆಯುವವರಿಗೆ ಸಿಲಿಂಡರ್ ಜೊತೆ 50 ಲಕ್ಷ ರೂಪಾಯಿವರೆಗೆ ವಿಮೆ ಸಂಪೂರ್ಣ ಉಚಿತವಾಗಿ ಸಿಗಲಿದೆ. ಅಂದ್ರೆ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಿಸಿ ಅನಾಹುತ ಸಂಭವಿಸಿದ್ರೆ ಕುಟುಂಬಕ್ಕೆ 50 ಲಕ್ಷ ರೂಪಾಯಿಯವರೆಗೆ ಪರಿಹಾರ ಸಿಗಲಿದೆ. ಸರ್ವೆಯೊಂದರ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 100ಕ್ಕೂ ಹೆಚ್ಚು ಮಂದಿ ಸಿಲಿಂಡರ್ ಸ್ಫೋಟಿಸಿ ಸಾವನ್ನಪ್ಪುತ್ತಾರೆ. ಆದ್ರೆ ಅನೇಕ ಬಾರಿ ಜನರು ಇದ್ರ ಪರಿಹಾರವನ್ನು ಪಡೆಯುವುದಿಲ್ಲ. ಪರಿಹಾರದ ಬಗ್ಗೆ ಅವ್ರಿಗೆ ಮಾಹಿತಿಯಿಲ್ಲದಿರುವುದು ಇದಕ್ಕೆ ಕಾರಣ. ಈ…

  • karnataka

    ಇಂದು SSLC ಫಲಿತಾಂಶ: ರಿಸಲ್ಟ್ ಲಭ್ಯವಾಗೋ ವೆಬ್‍ಸೈಟ್ ಇಲ್ಲಿದೆ

    ಗುರುವಾರದಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇವತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ.

    ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಲ್ಲಿರುವ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಲಾಖೆಯ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ನಾಳೆ ಎಲ್ಲಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಾರ್ಚ್ 30 ರಿಂದ ಏಪ್ರಿಲ್ 12ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು.

  • ಸುದ್ದಿ

    ಚಳಿಗಾಲದಲ್ಲಿ ಚರ್ಮದ ಕಾಳಜಿಯನ್ನು ಎಂದಿಗೂ ನಿರ್ಲಕ್ಷಿಸಬಾರದು,ಯಾಕೆ ಗೊತ್ತಾ,?

    ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ನಮ್ಮ  ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಬನ್ನಿ, ಈ ಸ್ಥಿತಿ ಎದುರಾದರೆ ಯಾವ ಪರಿಹಾರ ಪಡೆಯಬಹುದು ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು…