ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನ ಪಡೆದು ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆ.
ಈ ಸಲದ ದ್ವಿತೀಯ ಪರೀಕ್ಷೆಯಲ್ಲಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಎಂಬುವವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಬಳ್ಳಾರಿಯ ಕೊಟ್ಟೂರಿನಲ್ಲಿ ಸೈಕಲ್ ಶಾಪ್ನಲ್ಲಿ ನಡೆಸುತ್ತಿದ್ದ ದೇವೇಂದ್ರಪ್ಪ ಮತ್ತು ಜಯಮ್ಮ ಎಂಬುವವರ ಪುತ್ರಿ ಕುಸುಮಾ ಸೈಕಲ್ ಶಾಪ್ನಲ್ಲಿ ಪಂಕ್ಚರ್ ಹಾಕುವ ಕೆಲಸ ಕೂಡ ಮಾಡುತ್ತಿದ್ದು, ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಅತ್ಯುತ್ತಮ ದರ್ಜೆ ಗಳಿಸಿದ್ದಾರೆ. ಆ ಮೂಲಕ ತನ್ನ ತಂದೆ ತಾಯಿಗಳಿಗೆ ಹೆಮ್ಮೆ ತಂದಿದ್ದಾರೆ.
ಕೊಟ್ಟೂರಿನ ಇಂದು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕುಸುಮ ಪ್ರತಿದಿನ ಕಾಲೇಜಿಗೆ ಹೋಗಿ ಬಂದು ತನ್ನ ವಿಧ್ಯಾಭ್ಯಾಸದ ಸಮಯದಲ್ಲೇ ತಂದೆಗೆ ಸಹಾಯ ಮಾಡುವ ಸಲುವಾಗಿ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಕಡಿಮೆ ಆದಾಯದಲ್ಲಿ ಸೈಕಲ್ ಶಾಪ್ ನಡೆಸಿಕೊಂಡು ಜೀವನ ಸಾಗುತ್ತಿರುವ ದೇವೇಂದ್ರಪ್ಪನವರಿಗೆ ೫ ಜನ ಪುತ್ರಿಯರಲ್ಲಿ ಕುಸುಮಾ ಕೂಡ ಒಬ್ಬರು. ಕಡಿಮೆ ಆದಾಯ ಒಂದಿದ್ದರೂ ಸಹ ಕುಸುಮಾರವರಿಗೆ ಓದಲು ಯಾವುದೇ ರೀತಿಯ ಬಡತನದ ಅಡ್ಡಿ ಬರಲಿಲ್ಲ.
ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಬಂದಿರುವುದರ ಬಗ್ಗೆ ಸಂತಸ ಹಂಚಿಕೊಂಡಿರುವ ಕುಸುಮಾ ಬಿಡುವಿನ ವೇಳೆಯಲ್ಲಿ ಸೈಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು ಸಮಯದ ಮಿತೀ ಇಲ್ಲದೆ ತನಗೆ ಇಷ್ಟವಾದ ವಿಷಯ ಓದುತ್ತಿದ್ದೆ.ಜೊತೆಗೆ ತಂದೆ ತಾಯಿ ಮತ್ತು ನನ್ನ ಗುರುಗಳ ಆಶಿರ್ವಾದದಿಂದ ಇದು ಸಾಧ್ಯವಾಗಿದೆ ಎಂದು ಕುಸುಮ ಹೇಳುತ್ತಾರೆ.
ಕಲಾ ವಿಭಾಗದಲ್ಲಿ 600 ಕ್ಕೆ ಬರೋಬ್ಬರಿ 594 ಅಂಕಗಳನ್ನು ಪಡೆದು ಪ್ರಥಮ rank ಪಡೆದಿದ್ದಾರೆ ಕುಸುಮ ಉಜ್ಜಿನಿ. ಇವರು ಪಿಯುಸಿ ಕಲಿತ ಇಂದು ಕಾಲೇಜಿನ ಒಟ್ಟು 9 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 rank ಪಟ್ಟಿಯಲ್ಲಿದ್ದಾರೆ. ಕಳೆದ ಕೆಲ ವರ್ಷದಿಂದಲೂ ಕಲಾ ವಿಭಾಗದಲ್ಲಿ ಇಂದು ಕಾಲೇಜಿನ ವಿದ್ಯಾರ್ಥಿಗಳೇ ರಾಜ್ಯಕ್ಕೆ ಟಾಪ್.
ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ ಸರ್ಕಾರಿ ಕಚೇರಿಗಳು ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…
ಒಂದು ಸಣ್ಣ ಕಾಯಿಲೆಗೆ ಹೆಚ್ಚು ಹೆಚ್ಚು ದುಡ್ಡು ಪೀಕಿಸುವ ಈಗಿನ ಆಸ್ಪತ್ರೆಗಳ ಮಂದಿಯನ್ನು ನೋಡಿದರೆ ಈಕೆ ಬಹಳ ಸಿಂಪಲ್ ಅನಿಸದೇ ಇರೋದಿಲ್ಲ , ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಆದರೂ ಈಕೆ ಆ ಊರಿನ ಹಳ್ಳಿಗರ ಪಾಲಿಗೆ ಡಾಕ್ಟರ್ ಯಾವ ಎಂಬಿಬಿಎಸ್ ಓದಿಲ್ಲ ಯಾವ ಸರ್ಜನ್ ಕೂಡ ಅಲ್ಲ ಅಷ್ಟೇ ಅಲ್ಲದೆ ಯಾವುದೇ ಫಾರಿನ್ಗೆ ಹೋಗಿ ಅಲ್ಲಿ ಓದಿಕೊಂಡು ಬಂದಿಲ್ಲ.ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಹಿಳೆಯ ಹೆಸರು ಜಡೇ ಮಾದಮ್ಮ…
ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ, ಅಖಂಡ ಪೂಜೆ ಮಾಡಿ ಅಂತಾರೆ.. ಆದರೆ 48 ಯಾಕೆ, 108 ಯಾಕೆ ಅಂತ ಕೇಳಿದ್ರೆ, ಹೇಳೋರು ತುಂಬಾ ಕಮ್ಮಿ… ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಹಾಗಾದ್ರೆ 48 ದಿನ ಪೂಜೆ ಮಾಡಿ,…
ಆಷಾ ಸಾಹ್ನಿ ಎನ್ನುವ ವೃದ್ದೆ ಮುಂಬೈ ನಗರದ ಒಂದು ಅಪಾರ್ಟ್ ಮೆಂಟ್ನಾ ಹತ್ತನೆ ಮಳಿಗೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಧಣಿಕರಾದ ಇವರ ಸ್ವಂತ ಮಹದಡಿ ಗಳಾಗಿದ್ದವು 10ನೆ ಮಹಡಿಯ 2 ಪ್ಲಾಟ್ಗಳು. ಮಗನನ್ನು ಪ್ರೀತಿಯಿಂದ ಬೆಳೆಸಿ ಓದಿಸಿ ಅಮೇರಿಕಾದಲ್ಲಿ ನೆಲೆಸುವ ಹಾಗೆ ಮಾಡಿದ್ದಾರೆ. ಮಗ ಅಮೇರಿಕಾದಲ್ಲಿಯೇ ನೆಲೆಸಿದ್ದಾನೆ. ಒಬ್ಬ ಸಾರಾಸರಿ ಭಾರತೀಯನಿಗೆ ಇರಬೇಕಾದ ಎಲ್ಲ ಸುಖ ಲೋಲುಪಗಳು ಅವರಿಗಿದೆ.
ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಜಾರಿಯಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿಯಮ ಉಲ್ಲಂಘನೆ, ದಂಡ ಹಾಗೂ ನೂತನ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು, ನೂತನ ಟ್ರಾಫಿಕ್ ನಿಯಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಯಾಗಿದೆ. ಸರ್ಕಾರದಿಂದ ಯಾವುದೇ ನೊಟಿಫಿಕೇಶನ್ ಬಾರದ ಹಿನ್ನಲೆಯಲ್ಲಿ ಆರಂಭಿಕ 4 ದಿನ ಹಳೆ ನಿಯಮ ಮುಂದುವರಿದಿತ್ತು. ಇದೀಗ…
ತನ್ನ ಮಕ್ಕಳು ಎಂದಿಗೂ ಸುಖವಾಗಿರಲಿ ಎಂಬುದಾಗಿ ಬಯಸುವ ತಾಯಿ. ಎಲ್ಲ ಕಷ್ಟವನ್ನು ತಾನೇ ಹೊತ್ತು ಕೊಳ್ಳುತ್ತಾಳೆ ಅಲ್ಲದೆ. ತನ್ನ ಮಕ್ಕಳಿಗೆ ಒಳ್ಳೇದನ್ನೇ ಬಯಸುತ್ತಾಳೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಕೆಲ ಮಕ್ಕಳು ತನ್ನ ತಾಯಿಯನ್ನು ಉತ್ತಮವಾಗಿ ನೋಡಿ ಕೊಂಡರೆ ಮತ್ತೆ ಕೆಲವರು ತಮ್ಮಿಂದ ದೂರ ಇಟ್ಟಿರುತ್ತಾರೆ. ಸತ್ತ ಮೇಲೆ ತಂದೆ ತಾಯಿಯರಿಗೋಸ್ಕರ ಏನೇನೋ ಮಾಡುವ ಬದಲು ಇದ್ದಾಗ ಅವರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಮಕ್ಕಳು. ತನ್ನ ತಾಯಿಯ ಕಷ್ಟ ನೋಡಲಾರದೆ ಈ ೧೫ ವರ್ಷದ ಪೋರ ಮಾಡಿದ್ದೇನು…
ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ 256 ವರ್ಷ ಬದುಕಿದ್ದ.