ಸುದ್ದಿ

ಕುರುಕ್ಷೇತ್ರ ಚಿತ್ರದ ಹೊಸ ಪೋಸ್ಟರ್ ನಲ್ಲೊಂದು ವಿಶೇಷತೆ, ಏನೆಂದು ತಿಳಿಯಿರಿ?

44

ಕುರುಕ್ಷೇತ್ರ’ ಸಿನಿಮಾದ ಆಡಿಯೋ ಬಿಡುಗಡೆ ಇದೇ ಭಾನುವಾರ (ಜುಲೈ 7) ನಡೆಯಲಿದೆ. ಈ ವಿಶೇಷವಾಗಿ ಸಿನಿಮಾದ ಹೊಸ ಪೋಸ್ಟರ್ ಹೊರ ಬಂದಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮದ ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಆದರೆ, ಇದೀಗ ದರ್ಶನ್ ಪೋಸ್ಟರ್ ಮೂಲಕವೇ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಸ್ವಾಗತ ಮಾಡಲಾಗಿದೆ.

ಈ ಪೋಸ್ಟರ್ ನಲ್ಲಿ ಒಂದು ವಿಶೇಷ ಇದೆ. ಇದು ದರ್ಶನ್ ಅವರ 50 ಸಿನಿಮಾ. ಆದರೆ, ಈ ಹಿಂದೆ ಬಂದ ಪೋಸ್ಟರ್ ನಲ್ಲಿ ಅದನ್ನು ಬರೆದಿರಲಿಲ್ಲ. ಆದರೆ, ಈ ಪೋಸ್ಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಸಿನಿಮಾ ಎಂದು ಬರೆಯಲಾಗಿದೆ.

ಈ ಹಿಂದೆ ‘ಯಜಮಾನ’ ಅಥವಾ ‘ಕುರುಕ್ಷೇತ್ರ’ ಪೈಕಿ ಯಾವುದೇ ದರ್ಶನ್ 50ನೇ ಸಿನಿಮಾ ಎನ್ನುವ ಗೊಂದಲ ಇತ್ತು. ಹಾಗಾಗಿ ಹಳೆಯ ಪೋಸ್ಟರ್ ನಲ್ಲಿ 50ನೇ ಸಿನಿಮಾ ಎಂದು ಹಾಕಿರಲಿಲ್ಲ. ಇದರೊಂದಿಗೆ ಸಿನಿಮಾಗೆ ನಾಲ್ಕು ನಿರ್ದೇಶಕರು ಕೆಲಸ ಮಾಡಿದ್ದಾರೆ. ಹಾಗಾಗಿ, ನಾಗಣ್ಣ, ವಿ ನಾಗೇಂದ್ರ ಪ್ರಸಾದ್, ಎಸ್ ವಿ ಪ್ರಸಾದ್ ಹಾಗೂ ದೇವರಾಜ್ ಎಂದು ಹೆಸರು ಹಾಕಲಾಗಿದೆ.

ಈ ಸಿನಿಮಾವನ್ನು ಮುನಿರತ್ನ ನಿರ್ಮಾಣ ಮಾಡಿದ್ದಾರೆ. ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಶಶಿಕುಮಾರ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಇಲ್ಲೊಬ್ಬ ವಿಚಿತ್ರ ವ್ಯಕ್ತಿ, ಇವನ ದೇಹದಲ್ಲಿ ಯಾವ ಪಾರ್ಟೂ ಇರಬೇಕಾದ ಜಾಗದಲ್ಲಿ ಇಲ್ಲ! ಆದ್ರೂ ಇವನ ಜೀವಕ್ಕೆ ತೊಂದರೆ ಇಲ್ಲ,.!

    ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ದೇಹದ ವಿವಿಧ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿಇರುವ ವಿಚಾರ ಆತನ ದೇಹ ತಪಾಸಣೆಯಿಂದ ಬಯಲಾಗಿದೆ. ಇಲ್ಲಿನ ಖುಷಿನಗರದ ಜಮಾಲುದ್ದೀನ್‌ ಎಂಬುವವರು ಇತ್ತೀಚೆಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿಗೋರಖ್‌ಪುರ ಆಸ್ಪತ್ರೆಗೆ ತೆರಳಿದ್ದರು.  ವೈದ್ಯರು ರೋಗ ತಪಾಸಣೆಗಾಗಿ ಸ್ಕ್ಯಾ‌ನಿಂಗ್‌ ಮಾಡಿದಾಗ, ಅವರ ದೇಹದ ಎಲ್ಲಾ ಅಂಗಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲೇ ಇರಲಿಲ್ಲ. ಬದಲಿಗೆ ದೇಹದ ಮತ್ತೊಂದು ಬದಿಯಲ್ಲಿಇರುವುದು ಕಂಡು ವೈದ್ಯರೇ ಬೆರಗಾಗಿದ್ದಾರೆ. ಕನ್ನಡಿಯಲ್ಲಿ ನೋಡಿದರೆ ಕಾಣುವಂತೆ ಆತನ ದೇಹದ ಅಂಗಾಂಗಗಳು ‘ರಿವರ್ಸ್‌’ ಆಗಿ ಜೋಡಿಸಲ್ಪಟ್ಟಿದ್ದವು. ‘ಸೈಟಸ್‌ ಇನ್‌ವರ್ಸಸ್‌’ ಎಂದು ಕರೆಯಲಾಗುವ ಇದೊಂದು…

  • ಸುದ್ದಿ

    ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಕೊನೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ….

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲರಿಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊನೆಯ ಅವಕಾಶವನ್ನು ನೀಡಿದರು. ಮುಂಬೈನಿಂದ ಬಂದು ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲವೆ ಅನರ್ಹತೆಗೆ ದೂರು ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕಾಂಗ ಪಕ್ಷದ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು…

  • India, Sports, ಕ್ರೀಡೆ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇಟೆಸ್ಟ್‌ಗೆ ಮಳೆ ಕಾಟ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 4ದಿನ ಮಳೆ ಕಾಟದಿಂದಾಗಿ ದಿನದಾಟ ಆರಂಭ ವಾಗಿಲ್ಲ ಈ ಪಂದ್ಯದಲ್ಲಿ ಜಯವನ್ನು ಸಾಧಿಸಲು ದಕ್ಷಿಣ ಆಫ್ರಿಕಾಕ್ಕೆ  122ರನ್ ಅಗತ್ಯ ಇದೆ.ಮಳೆಯಿಂದಾಗಿ ಭಾರತ ತಂಡಕ್ಕೆ ಜಯಗಳಿಸುವ ಅವಕಾಶವನ್ನು ಒದಗಿಸುತ್ತದೆ.ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ 202ರನ್ ಗಳಿಸಿತು.ದಕ್ಷಿಣ ಆಫ್ರಿಕಾ 229ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 266ರನ್ಗಳಿಸಿತು.ಭಾರತ ದಕ್ಷಿಣ ಆಫ್ರಿಕಾಕ್ಕೆ 240ಗುರಿ ನೀಡಿದೆ.ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 118/2 ಗಳಿಸಿದೆ

    Loading

  • ಸುದ್ದಿ

    ಪತಿ ಕಣ್ಮುಂದೆಯೇ ಪತ್ನಿಯ ಮೇಲೆ ಗ್ಯಾಂಗ್ ರೇಪ್- ದೂರು ನಿರಾಕರಿಸಿದಂತಹ ಯುಪಿ ಪೊಲೀಸ್ ನವರು…!

    ಪತಿಯ ಎದುರೇ ಪತ್ನಿಯನ್ನು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮ್‍ಪುರ್ ಜಿಲ್ಲೆಯಲ್ಲಿ ಜೂನ್ 11ರಂದು ನಾಲ್ವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ದಂಪತಿ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಆದರೆ ಈಗ ಪತಿಯೊಂದಿಗೆ ಸೆಕ್ಸ್ ಮಾಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂತ್ರಸ್ತೆ ಪೊಲೀಸ್ ಮೆಟ್ಟಿಲೇರಿದ್ದಾಳೆ. ಪತಿಯೊಂದಿಗೆ ಬರುತ್ತಿದ್ದಾಗ ನಾಲ್ಕು ಜನರ ಗುಂಪು ನಮ್ಮನ್ನು ತಡೆಯಿತು. ಬಳಿಕ ಪತಿಯ ಮೇಲೆ ಹಲ್ಲೆ…

  • govt

    ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ

    ಗೃಹಲಕ್ಷ್ಮಿ ಹಣ ಬಾರದಿದ್ದಲ್ಲಿ ಏನು ಮಾಡಬೇಕು…? ಇಲ್ಲಿದೆ ಮಾಹಿತಿ   ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಕೆಲವೊಬ್ಬರ ಬ್ಯಾಂಕ್‌ ಖಾತೆಗೆ ಹಣ ಬಂದಿಲ್ಲ, ಹಾಗಿದ್ದರೆ ಹೇಗೆ ಚೆಕ್‌ ಮಾಡುವುದು? ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆ ಆಗಿದೆಯಾ? ಅಥವಾ ಇಲ್ಲ. ಸಲ್ಲಿಕೆ ಆಗಿದ್ದರೂ ಬ್ಯಾಂಕ್‌ ಖಾತೆಯ ಸಮಸ್ಯೆ ಇದೆಯಾ ಎಂಬುದನ್ನು ಮೊದಲಿಗೆ ತಿಳಿದು ಕೊಳ್ಳಬೇಕಾಗುತ್ತದೆ. ಲಕ್ಷಾಂತರ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿದ್ದರೂ ಕೂಡ ಇದುವರೆಗೂ ಅಸಂಖ್ಯಾತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. 1.1 ಕೋಟಿ…