ಸುದ್ದಿ

12 ಕಿರು ಬಂದರುಗಳನ್ನು ಅಭಿವೃದ್ಧಿಪಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

33

ರಾಜ್ಯದ 12 ಕಿರುಬಂದರುಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಲೋಕೋಪಯೋಗಿ , ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು, ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮ್ಯಾರಿಟೈಮ್ ಮಂಡಳಿಗೆ ಶೀಘ್ರದಲ್ಲಿಯೇ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಭರವಸೆ ನೀಡಿದರು. ಕಾರವಾರ ಬಂದರಿನ 2 ನೇ ಹಂತದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಬಂದರಿನ ಉತ್ತರಕ್ಕೆ 1258 ಮೀ. ಉದ್ದದ ಬರ್ತ್ ನ್ನು ವಿಸ್ತರಿಸಲು ವಿಸ್ಕೃತಾ ಯೋಜನಾ ವರದಿಯನ್ನು ತಯಾರಿಸಿದ್ದು, ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಾಗರಮಾಲಾ ಕೋಸ್ಟಲ್ ಬರ್ತ್ ಯೋಜನೆಯಡಿ ಪ್ರಸಕ್ತ ಕಾಲಿಗೆ 54.10 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಹಾಗೂ ಕಾರವಾರ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಕರಾವಳಿ ಪ್ರದೇಶದಲ್ಲಿ ಕಡಲು ಕೊರೆತ ಪದೇ ಪದೇ ಉಂಟಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಧೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕು, ಕಡಲ ಬದಿಯಲ್ಲಿರುವ ಜನರಿಗೆ ಪುನವರ್ಸತಿ ಕಲ್ಪಿಸುವ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • corona

    ಕೋವಿಡ್-19 ಮಾರ್ಗಸೂಚಿ ಪಾಲನೆಗೆ ಸೂಚನೆ

    ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಪ್ರಪಂಚದ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮುಂಬರುವ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ, ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲೆಯ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ಪೂರ್ವಭಾವಿಯಾಗಿ ಸಾರ್ವಜನಿಕರು ಈ ಕ್ರಮಗಳನ್ನು ಪಾಲಿಸುವುದು ಅವಶ್ಯವಾಗಿದೆ. ಮುಚ್ಚಿದ ಸಂರಕ್ಷಣೆಗಳಾದ  (closed spaces) ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಛೇರಿಗಳು…

  • ಉಪಯುಕ್ತ ಮಾಹಿತಿ

    ಇಂತಹದೆನಾದ್ರು ನಿಮ್ಮ ಮನೆಯಲ್ಲಿ ಕಂಡುಬಂದ್ರೆ ಅವುಗಳಿಂದ ತುಂಬಾ ಹುಷಾರಾಗಿರಿ..!ತಿಳಿಯಲು ಮುಂದೆ ಓದಿ…

    ನಾವು ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ

  • ಆರೋಗ್ಯ

    ಒಣಕೆಮ್ಮು ಸಮಸ್ಯೆಯಿಂದ ಬೇಸತ್ತಿದ್ದೀರಾ.? ಇಲ್ಲಿದೆ ಪರಿಹಾರ.

    ಕೆಲವೊಮ್ಮೆ ನಮ್ಮಲ್ಲಿ ಕೆಲವರು ಆಸ್ಪತ್ರೆ ಸಿರಪ್‌ಗಳು ಹೀಗೆ ನಾನಾ ಔಷಧಿಗಳನ್ನು ತೆಗೆದುಕೊಂಡರು ಈ ಹಾಳದ ಕೆಮ್ಮು ನಿಲ್ಲೋಲ್ಲ ಅಂತಾ ಗೊಣಗುವುದನ್ನು ನಾವು ನೋಡಿರುತ್ತೇವೆ ಆದರೆ ನಮ್ಮ ಆಯುರ್ವೇದದಲ್ಲಿ ದಿನನಿತ್ಯ ನಮ್ಮ ಮನೆಯಲ್ಲಿಯೇ ಉಪಯೋಗಿಸುವ ವಸ್ತುಗಳಿಂದ ಸುಲಭವಾಗಿ ಈ ಒಣ ಕೆಮ್ಮಿನಿಂದ ಹೇಗೆ ಪಾರಾಗಬಹುದು ಎಂದು ಯೋಚಿಸುತ್ತಿರಾ ಇಲ್ಲಿದೆ ಓದಿ. ಮಳೆಗಾಲ ಚಳಿಗಾಲ ಅಥವಾ ಬೇಸಿಗೆಕಾಲ ಈ ಮೂರು ಕಾಲಗಳಲ್ಲೂ ನಮ್ಮನ್ನು ಸದಾ ಕಾಡುವ ರೋಗಗಳಲ್ಲಿ ಈ ಒಣಕೆಮ್ಮು ಒಂದು, ಪ್ರತಿಯೊಬ್ಬ ವ್ಯಕ್ತಿಯು ಈ ಕೆಮ್ಮಿನ ಸಮಸ್ಯೆಯಿಂದ ತೊಂದರೆ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಹಲವಾರು ರೋಗಗಳಿಗೆ ರಾಮಬಾಣ ಈ ಒಂದು ಡ್ರಾಗನ್ ಪ್ರುಟ್. ಈ ಅರೋಗ್ಯ ಮಾಹಿತಿ ನೋಡಿ.

    ಕೆಲವು ಹಣ್ಣುಗಳು ಕಂಡ್ ಕಂಡಲ್ಲಿ ಸಿಗೋಲ್ಲ. ವಿಪರೀತ ದುಬಾರಿ ಬೇರೆ. ಹಾಗಂತ ತಿನ್ನದೇ ಇರಬಹುದು. ಅದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತದೆ. ಅಂಥ ಹಣ್ಣುಗಳಲ್ಲಿ ಡ್ರಾಗನ್ ಫ್ರೂಟ್ ಒಂದು. ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್‌ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಡ್ರಾಗನ್ ಫ್ರೂಟ್.  ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ….

  • ಆರೋಗ್ಯ

    ನೆಲ್ಲಿಕಾಯಿಯಲ್ಲಿರುವ ಔಷದಿ ಗುಣಗಳ ಬಗ್ಗೆ ..! ತಿಳಿಯಲು ಈ ಲೇಖನ ಓದಿ…

    ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ. ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ. ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ…

  • ಸುದ್ದಿ

    ಭಾರತದೊಂದಿಗೆ ಪಾಕ್ ವ್ಯಾಪಾರ ಬಂದ್…..!

    ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ…