ಸಿನಿಮಾ

ಮುಂಬೈನ ರಸ್ತೆ ರಸ್ತೆಗಳಲ್ಲಿ ಕನ್ನಡದ KGF ಹವಾ..!

460

ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ.

ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ.

ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್ ಮಾಡಲಾಗಿತ್ತು. ಹಿಂದಿ ಅವತರಣಿಕೆ ಸಿನಿಮಾಗಾಗಿ 1989ರಲ್ಲಿ ಬಿಡುಗಡೆಯಾಗಿದ್ದ ತ್ರಿದೇವ್’ ಚಿತ್ರದಗಲಿ ಗಲಿ’ ಹಾಡನ್ನು ಬಳಸಲಾಗಿದೆ.

1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.

ಹಿಂದಿ ಅವತರಣಿಕೆಯನ್ನು ಎಕ್ಸೆಲ್ ಮೀಡಿಯಾ, ಎಎ ಮೂವೀಸ್ ನಲ್ಲಿ ಫರ್ಹಾನ್ ಅಖ್ತರ್, ರಿತೇಶ್ ಸಿದ್ವಾನಿ ರಿಲೀಸ್ ಮಾಡ್ತಿದ್ದು, ಈಗಾಗಲೇ ದೊಡ್ಡ ಮಟ್ಟದ ಕ್ರೇಜ್ ಶುರುವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಎಸ್ಸೆಸ್ಸೆಲ್ಸಿ ಓದಿದ್ದ ಭೂಪ… 7 ಸರಕಾರಿ ಹುದ್ದೆಗಳ ಕೆಲಸಕ್ಕೆ ಸೇರಿದ್ದು ಹೇಗೆ ಗೊತ್ತಾ…?ತಿಳಿಯಲು ಈ ಲೇಖನ ಓದಿ….

    ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್‌ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಎಸ್‌ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

  • Animals

    ಆನೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

    ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ  ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ  ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು…

  • ಆಧ್ಯಾತ್ಮ

    ಆಂಜನೇಯ ಸ್ವಾಮಿಯ ಮೊದಲ ಅವತಾರ, ವೃಶ ಕಪಿ ಅವತಾರದ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಮುಂದೆ ಓದಿ…

    ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ ವೃಶ ಕಪಿ ಅವತಾರ.

  • ಸುದ್ದಿ

    ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ: ತಿಂಗಳಿಗೆ 55 ಹೂಡಿಕೆ ಮಾಡಿ ಮಾಸಿಕ ಪಿಂಚಣಿ 3000 ಪಡೆಯುವುದು ಹೇಗೆ…?

    ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ ಧನ್ ಯೋಜನೆಯನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಐಆರ್ಡಿಎಐ…

  • Health

    ಮಂಡಿ ಮತ್ತು ಕೀಲು ನೋವು ಕಡಿಮೆ ಮಾಡುವ 9 ಆಹಾರಗಳು ಯಾವುದು ಗೊತ್ತಾ ,..!

    ಮಂಡಿನೋವು ಬಂದರೆ ಚಿಕಿತ್ಸೆ ಜತೆಗೆ ಆಹಾರಕ್ರಮದ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣಮುಖರಾಗಬಹುದು. ಇಲ್ಲಿ ಮಂಡಿ ನೋವು ಕಡಿಮೆ ಮಾಡುವ 9 ಆಹಾರಗಳ ಬಗ್ಗೆ ಹೇಳಿದ್ದೇವೆ, ಇವುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ ಆರೋಗ್ಯ ಮರಳಿ ಪಡೆಯಿರಿ.ಮಧ್ಯ ವಯಸ್ಸು ದಾಟುತ್ತಿದ್ದಂತೆ ಮಂಡಿ ನೋವು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಡೆಂಗೆ, ಚಿಕನ್‌ಗುನ್ಯಾ ಈ ರೀತಿಯ ಕಾಯಿಲೆಗಳು ಬಂದಾಗ ಕೂಡ ಮಂಡಿ ನೋವಿನ ಸಮಸ್ಯೆ ಕಾಡುವುದು. ಮಂಡಿ ನೋವಿನ ಸಮಸ್ಯೆ ಬಂದಾಗ ಚಿಕಿತ್ಸೆ ಜತೆ ಡಯಟ್‌ ಕಡೆ ಗಮನ ನೀಡಿದರೆ…

  • ಜ್ಯೋತಿಷ್ಯ

    ನಿಮ್ಮ ಉಗುರಿನ ಮೇಲೆ ಅರ್ಧ ಚಂದ್ರಾಕೃತಿ ಇದೆಯೇ?ಇದು ನಿಮ್ಮ ಜೀವನದಲ್ಲಿ ಏನನ್ನು ಸೂಚಿಸುತ್ತೆ ಗೊತ್ತಾ?

    ಮನುಷ್ಯನ ದೇಹದ ರಚನೆ ಆತನ ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ, ಕಾಲು ಸೇರಿದಂತೆ ದೇಹದ ಪ್ರತಿಯೊಂದು ಭಾಗವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಕೈ, ಕಾಲು, ಮಚ್ಚೆಯನ್ನೇ ನೋಡಿ ಪಂಡಿತರು ನಮ್ಮ ಭವಿಷ್ಯ ಹೇಳ್ತಾರೆ. ಸಾಮಾನ್ಯವಾಗಿ ಮನುಷ್ಯನ ಕೈ, ಕಾಲಿನ ಸೌಂದರ್ಯವನ್ನು ಉಗುರು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಉಗುರಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಉಗುರಿಗೆ ಚೆಂದದ ಆಕಾರ ನೀಡಿ, ಬಣ್ಣ ಹಚ್ಚಿಕೊಳ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಗುರಿನ ಬಗ್ಗೆ ಬೇರೆಯದೇ ನಂಬಿಕೆಯಿದೆ….