ತನ್ನ ಹೆಂಡತಿಗಾಗಿ ರಸ್ತೆಯನ್ನೇ ನಿರ್ಮಿಸಿದ್ದ ಮಾಂಜಿಯ ಕಥೆ ನಮಗೆಲ್ಲಾ ಗೊತ್ತಿದೆ. ಇದೀಗ ಕೀನ್ಯಾದಲ್ಲೂ ಒಬ್ಬ ಮಾಂಜಿ ಇದ್ದಾರೆ. ಆದ್ರೆ, ಈತ ತನ್ನ ಹೆಂಡತಿಗಾಗಿ ಅಲ್ಲ, ಇಡೀ ಊರಿನ ಜನರಿಗೆ ನೆರವಾಗಲಿ ಅಂತ ತಾನೇ ರಸ್ತೆ ನಿರ್ಮಿಸಿ ಈಗ ಎಲ್ಲರ ದೃಷ್ಟಿಯಲ್ಲೂ ಹೀರೋ ಆಗಿದ್ದಾರೆ.
ಕೀನ್ಯಾದ ಕಗಂಡಾ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶವಿದೆ. ಅದರ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ಸರಿಯಾದ ರಸ್ತೆಯೇ ಇರಲಿಲ್ಲ. ಈ ಬಗ್ಗೆ ಗ್ರಾಮದ ನಿಕೋಲಸ್ ಮುಚಾಮಿ ಹಲವು ಬಾರಿ ಸರ್ಕಾರಕ್ಕೆ ಹಾಗೂ ಸ್ಥಳೀಯ ನಾಯಕರಿಗೆ ಮನವಿ ಮಾಡಿದ್ದರು.
ಊರಿನಿಂದ ಶಾಪಿಂಗ್ ಸೆಂಟರ್, ಚರ್ಚ್, ಬೇರೆ ಏನೇ ಬೇಕಂದ್ರೂ ಹೋಗೋಕೆ ಕಷ್ಟವಾಗುತ್ತೆ, ಸರಿಯಾದ ರಸ್ತೆ ನಿರ್ಮಿಸಿ ಕೊಡಿ ಅಂತ ಕೇಳಿದ್ರೂ ಯಾರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಮುಚಾಮಿ ತಾವೇ ಖುದ್ದು ಒಂದು ಕಿಲೋಮೀಟರ್ ದೂರ ರಸ್ತೆ ನಿರ್ಮಿಸಿದ್ದಾರೆ. ಕಡಿದಾದ ಗುಡ್ಡ, ಕಾಡು ಇರುವ ಮಾರ್ಗದಲ್ಲಿ ಮರಗಳನ್ನ ಕಡಿದು, ತನ್ನ ಬಳಿ ಇದ್ದ ಕೃಷಿ ಉಪಕರಣಗಳ ನೆರವಿನಿಂದಲೇ ಮುಚಾಮಿ 1 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಿಸಿದ್ದಾರೆ.
ಇದರಿಂದಾಗಿ ಈಗ ಇಲ್ಲಿನ ಜನ ಸುಲಭವಾಗಿ ರಸ್ತೆ ಬಳಸಿ ಕಗಂಡಾ ಶಾಪಿಂಗ್ ಸೆಂಟರ್ಗೆ ಹಾಗೂ ಚರ್ಚ್ಗೆ ಹೋಗಬಹುದು. ಜನರ ಸಮಯ ಉಳಿಸಲು ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗಲಿ ಅಂತ ನಾನು ಈ ರಸ್ತೆ ನಿರ್ಮಿಸಿದೆ ಅಂತ ಮುಚಾಮಿ ಹೇಳ್ತಾರೆ. ಇದಕ್ಕಾಗಿ 6 ದಿನಗಳ ಕಾಲ ಏಕಾಂಗಿಯಾಗಿ ಕಷ್ಟಪಟ್ಟಿದ್ದು, ಪ್ರತಿನಿತ್ಯ ಬೆಳಗ್ಗೆ 6ರಿಂದ ಸಂಜೆ 6ವರೆಗೂ ಶ್ರಮ ವಹಿಸುತ್ತಿದ್ದರಂತೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಇತಿಹಾಸ ಸೃಷ್ಟಿಸಿದ RRR ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್ ಮಿ ಅಪ್’, ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ರೇಸ್ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಮಾರ್ಚ್, 2019) ಇಂದು ನಿಮ್ಮ ಹೊಸ ಯೋಜನೆಗಳು ಹಾಗೂ ಆಲೋಚನೆಗಳ ಬಗ್ಗೆ ನಿಮ್ಮ ಪೋಷಕರನ್ನು ವಿಶ್ವಾಸಕ್ಕೆ…
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರಪದ್ಧತಿ, ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಧುನಿಕ ಜೀವನಶೈಲಿಯಲ್ಲಿ ಕಡಿಮೆ ದೇಹದಂಡನೆ ಹಾಗೂ ತಪ್ಪಾದ ಆಹಾರಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾದುದು ಹೊಟ್ಟೆಯ ಬೊಜ್ಜು. ಇದಕ್ಕೆ ಎರಡು ರೀತಿಯ ಕಾರಣಗಳನ್ನು ಕಾಣಬಹುದು. ಸಬ್ಕ್ಯುಟೆನಿಯಸ್ ಫ್ಯಾಟ್ – ಇದು ಸಾಮಾನ್ಯವಾಗಿ ಕೈ-ಕಾಲುಗಳ ಮೇಲ್ಭಾಗದಲ್ಲಿರುವ ಕೊಬ್ಬಿನಂಶ. ಇದು ಹೊಟ್ಟೆಯ ಚರ್ಮದ ಒಳಭಾಗದಲ್ಲಿ ಬಂದಲ್ಲಿ ಅಷ್ಟೆಲ್ಲ ತೊಂದರೆ ಆಗುವುದಿಲ್ಲ. ಶೇ. 80ರಷ್ಟು ಜನರಲ್ಲಿ ಇದಕ್ಕಿಂತ ಜಾಸ್ತಿ ಹೊಟ್ಟೆಯ ಬೊಜ್ಜಿಗೆ ಮುಖ್ಯ ಕಾರಣ ವಿಸರಲ್ ಫ್ಯಾಟ್. ಇದು ಹೊಟ್ಟೆಯ…
ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ. ಪಿತೋರ್ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು…
‘ನಮ್ಮ ಮುಂದೆ ಇರುವ ಅವಘಡಗಳಿಗೆ, ಹೆಚ್ಚು ಅಪಾಯ ತರುವ ಅಂಶಗಳಿಗೆಯಾವಾಗಲೂ ನಾವೇ ಕಾರಣರಾಗಿರುತ್ತೇವೆ’.ಶೇ.80 ರಷ್ಟು ಕ್ಯಾನ್ಸರ್ಗಳಿಗೆ ಕಾರಣ ನಮ್ಮ ಜೀವನಶೈಲಿ (ಧೂಮಪಾನ, ಮದ್ಯಪಾನ, ಆಹಾರಾಭ್ಯಾಸ) ಭಾರತದಲ್ಲಿ ಪುರುಷರಲ್ಲಿ ಶೇ.50ರಷ್ಟು ಮತ್ತು ಮಹಿಳೆಯರಲ್ಲಿ ಶೇ.20 ರಷ್ಟು ಕ್ಯಾನ್ಸರ್ಗಳಿಗೆ ತಂಬಾಕು ಬಳಕೆಯೇ ಕಾರಣ.
ಐಷಾರಾಮಿ ಜೀವನ ನಡೆಸ್ತಿದ್ದ ಟೆಕ್ಕಿಗಳಿಗೆ ಇದೀಗ ಹೆಚ್ಆರ್ ಕಡೆಯಿಂದ ಬರ್ತಿರೋ ಪಿಂಕ್ ಸ್ಲಿಪ್ ಆತಂಕಕ್ಕೀಡು ಮಾಡಿದೆ. ಯಾವಾಗ ಯಾರಿಗೆ ಪಿಂಕ್ ಸ್ಲಿಪ್ ಬರುತ್ತೋ ಅನ್ನೋಟೆನ್ಶನ್ ಶುರುವಾಗಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲೂ ಇದೇ ಆತಂಕ ಶುರುವಾಗಿದ್ದು, ಆಯಾಗಿ ನಿದ್ದೆ ಮಾಡ್ತಿದ್ದ ಟೆಕ್ಕಿಗಳು ಈಗ ನಿದ್ದೆಗೆಡುವಂತಾಗಿದೆ. ಆರ್ಥಿಕ ಸಂಕಷ್ಟ ಅನ್ನೋದು ಐಟಿ ಕಂಪನಿಗಳಿಗೆ ತುಂಬಾ ಹೊಡೆತ ಕೊಟ್ಟಿದೆ. ಕಾಸ್ಟ್ಕಟಿಂಗ್ ಹೆಸರಲ್ಲಿ ಕೆಲಸಕ್ಕೆ ಕತ್ತರಿ ಹಾಕ್ತಿವೆ. ಇದರಿಂದ ಸಾವಿರಾರು ಉದ್ಯೋಗಿಗಳಿಗೆ ಅಭದ್ರತೆ ಎದುರಾಗಿದೆ. ಯಾವುದೇ ರೀತಿಯ ಕನಿಕರ ತೋರಿಸದೆ ಪಿಂಕ್ಸ್ಲಿಪ್ ಕೈಗಿಟ್ಟು…