ಸುದ್ದಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಇಲ್ಲಿದೆ ಶುಭ ಸುದ್ದಿ, ಇನ್ಮುಂದೆ ಖಾಸಗಿ ವಲಯದಲ್ಲೂ ಮೀಸಲಾತಿ…!

91

ಉದ್ಯೋಗದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಶುಭ ಸುದ್ದಿ ಇಲ್ಲಿದೆ. ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು ಅಧಿಸೂಚನೆ ಹೊರಬಿದ್ದಿದೆ.

ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿಂದಿನ ಸರ್ಕಾರದ ಬಜೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ನಂತರದಲ್ಲಿ ಚರ್ಚೆಗಳು ನಡೆದು ಅಧಿಸೂಚನೆ ಹೊರಡಿಸಲಾಗಿದೆ.

ಅನೇಕ ಕೈಗಾರಿಕೋದ್ಯಮಿಗಳೊಂದಿಗೆ ಸರ್ಕಾರ ಈಗಾಗಲೇ ಚರ್ಚೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಉದ್ಯೋಗ(ಸ್ಥಾಯಿ ಆದೇಶಗಳು) ನಿಯಮ 1969 ತಿದ್ದುಪಡಿ ತರುತ್ತಿದೆ. ಇದರ ಪ್ರಕಾರ ಸರ್ಕಾರದಿಂದ ವಿವಿಧ ಸೌಲಭ್ಯ, ತೆರಿಗೆ ಸೇರಿ ರಿಯಾಯಿತಿ ಪಡೆಯುತ್ತಿರುವ ಖಾಸಗಿ ಉದ್ದಿಮೆಗಳು ಅರ್ಹತೆ ಅನುಭವ ಹಾಗೂ ಇತರೆ ಅಗತ್ಯಗಳಿಗೆ ಒಳಪಟ್ಟು 15 ವರ್ಷಗಳಿಂದ ರಾಜ್ಯದಲ್ಲಿ ವಾಸವಾಗಿರುವ ಕನ್ನಡ ಓದಲು, ಬರೆಯಲು ಸಮರ್ಥವಾಗಿರುವವರನ್ನು ನೇಮಕಾತಿ ಮಾಡಿಕೊಳ್ಳಲು ತಿಳಿಸಲಾಗಿದೆ.

ವಿಕಲಚೇತನರಿಗೆ ಶೇ. 5ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ನಿಯಮವಳಿ ಸಿದ್ಧಪಡಿಸಿ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿದ್ದು, 30 ದಿನಗಳ ಕಾಲಾವಕಾಶ ನೀಡಲಾಗಿದೆ. ಮುಂದಿನ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪತಿಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಂತಹ ಮಹಿಳೆ.. ಕಾರಣ?

    ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಸೋನಿಟ್‍ಪುರ್ ಜಿಲ್ಲೆಯ ಮಜ್ಗಾಂವ್‍ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ…

  • National, News Paper, ಉಪಯುಕ್ತ ಮಾಹಿತಿ

    ಪಿಎಂ ಕಿಸಾನ್ ಸಮ್ಮನ್ ನಿಧಿಯೋಜನೆ

    ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಮೋದಿ ಸರ್ಕಾರವು ಫೆಬ್ರವರಿ 24, 2019 ರಂದು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ 6000 ರುಪಾಯಿ ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಎರಡನೇ ಕಂತನ್ನು ನೇರವಾಗಿ ಏಪ್ರಿಲ್ 1 ರಿಂದ ಜುಲೈ…

  • ಸಿನಿಮಾ

    ಒಳ್ಳೆ ಹುಡುಗ ಪ್ರಥಮ್’ನ ಹುಚ್ಚಾಟ!ಭುವನ್ ತೊಡೆ ಕಚ್ಚಿದ ಪ್ರಥಮ್! ಅಲ್ಲಿ ನಡೆದಿದ್ದಾದರು ಏನು ಗೊತ್ತಾ?

    ಒಳ್ಳೆ ಹುಡುಗ ಪ್ರಥಮ್ ಹಾಗೂ ನಟ ಭುವನ್ ನಡುವೆ ಖಾಸಗಿ ವಾಹಿನಿಯೊಂದರ ಧಾರಾವಾಹಿ ಚಿತ್ರೀಕರಣದ ವೇಳೆ ಜಗಳವಾಗಿದ್ದು, ಪ್ರಥಮ್ ನನ್ನ ತೊಡೆ ಕಚ್ಚಿದ್ದಾರೆಂದು ಭುವನ್ ಆರೋಪ ಮಾಡಿದ್ದಾರೆ.

  • ಸುದ್ದಿ

    ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ಸುಮಲತಾ ಅವರ ಮುಂದಿನ ಪ್ಲಾನ್ ಏನು?

    ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…

  • ವ್ಯಕ್ತಿ ವಿಶೇಷಣ

    ಈ 10 ಗುಣಗಳು ನಿಮ್ಮಲ್ಲಿದ್ರೆ ಜನರು ನಿಮ್ಮನು ಅಪರೂಪದ ವ್ಯಕ್ತಿ ಎಂದು ಕಾಣುತ್ತಾರೆ ..!ತಿಳಿಯಲು ಈ ಲೇಖನ ಓದಿ…

    ನಿಮಗೆ ನೀವು ಬೇರೆಯವರಿಗಿಂತ ವಿಭಿನ್ನ ಅಂತ ಅನಿಸುತ್ತೀರಾ? ನಿಮ್ಮನ್ನ ಅರ್ಥ ಮಾಡಿಕೊಳ್ಳೋರು ಯಾರು ಇಲ್ಲ ಅನ್ನಿಸುತ್ತಾ?
    ಕಾರ್ಲ್ ಜಂಕ್ ಸೈಕೋ ಅನಾಲಿಸಿಸ್ ಥಿಯರೀ ಅನುದಾರ ಮೇಯರ್ಸ್ ಅಂಡ್ ಬ್ರಿಗ್ಗರ್ಸ್ ಸಿಸ್ಟೆಮ್ ಪ್ರತಿ ಮನುಷ್ಯನನ್ನ ಬೇರೆ ಬೇರೆ ವ್ಯಕ್ತಿತ್ವದವರಾಗಿ ವಿಂಗಡಿಸಲಾಗಿದ್ಯಂತೆ.

  • ಉಪಯುಕ್ತ ಮಾಹಿತಿ

    ಮಕರ ಸಂಕ್ರಾಂತಿ ಹಬ್ಬಕ್ಕೆ ಸರಿಯಾದ ಕ್ರಮದಲ್ಲಿ ಎಳ್ಳು ಬೆಲ್ಲ ಮಾಡುವ ವಿಧಾನ.

    ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ. ಮಾಡುವ ವಿಧಾನಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.ಕೊಬ್ಬರಿ ಕಪ್ಪು ಭಾಗವನ್ನು…