ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿರುದ್ಧ ಮತ ಹಾಕುವಂತೆ ಹೇಳಿ ಮಂಜುನಾಥ್ ಅವರು ಪ್ರತಿ ಬೂತ್ಗೆ 35 ಸಾವಿರ ರೂಪಾಯಿ ಹಂಚಿದ್ದಾರೆ. ಮುಖಂಡನ ಮಾತು ಕೇಳಿ ಜನರು ಕೂಡ ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಾಗಿ ಚಾಮರಾಜನಗರದ ಕಾಂಗ್ರೆಸ್ ಆರ್.ಧ್ರುವನಾರಾಯಣ್ಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮಂಜುನಾಥ್, ನನ್ನ ಮೇಲೆ ಸುಳ್ಳು ಆರೋಪ ಕೇಳಿಬರುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಜುನಾಥ್ ಅವರು ಹನೂರು ಅಸೆಂಬ್ಲಿಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಹೌದು. ಉತ್ತರ ಪ್ರದೇಶ ರಾಜ್ಯದ ಆಗ್ರಾ-ಜೈಪುರ ಹೆದ್ದಾರಿಯ ಆಗ್ರಾದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಅಚ್ನೇರಾ ಬ್ಲಾಕ್ನ ಕುರಾಲಿ ತೆಹ್ಸಿಲ್ಯಲ್ಲಿನ ಚಹ್ ಪೋಕರ್ ಎಂಬ ಗ್ರಾಮದಲ್ಲಿ ಸುಮಾರು 50 ಮುಸ್ಲಿಂ ಕುಟುಂಬಗಳಿವೆ. ಅವರೆಲ್ಲರೂ ತಮ್ಮ ಕುಟುಂಬಸ್ಥರು ಯಾರದರೂ ಸತ್ತರೆ ಅವರನ್ನು ತಮ್ಮ ಮನೆಯಲ್ಲಿಯೆ ಸಮಾಧಿ ಮಾಡುವುದನ್ನು ರೂಡಿಸಿಕೊಂಡು ಬಂದಿದ್ದಾರಂತೆ. ಇದು ಯಾವುದೇ ಪದ್ಧತಿಯಲ್ಲ, ಬಲವಂತ ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿರುವ 50 ಮುಸ್ಲಿಂ ಮನೆಗಳಲ್ಲಿ ಸುಮಾರು 300 ಜನಸಂಖ್ಯೆ ಹೊಂದಿದೆ. ಆದರೆ ಅವರಿಗೆ ಖಾಯಂ ಸ್ಮಶಾನ ಭೂಮಿ ಇಲ್ಲ….
ವಿಶ್ವ ಆರೋಗ್ಯ ಸಂಸ್ಥೆಯು ಮೇ 31ರಂದು ವಿಶ್ವ ತಂಬಾಕು ದಿನವನ್ನಾಗಿ ಆಚರಣೆ ಮಾಡುತ್ತದೆ. ತಂಬಾಕು ಬಳಕೆ ಮತ್ತು ಧೂಮಪಾನದಿಂದ ಆಗುವಂತಹ ಹಾನಿ ಬಗ್ಗೆ ತಿಳಿಸಲು ಈ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದ ದೇಹಕ್ಕೆ ಆಗುವಂತಹ ಹಾನಿಯನ್ನು ಈ ವೇಳೆ ಜನರಿಗೆ ವಿವರಿಸಲಾಗುತ್ತದೆ. ಇದರಿಂದ ಅವರು ತಂಬಾಕು ಸೇವನೆ ಕಡಿಮೆ ಮಾಡಲಿ ಮತ್ತು ಧೂಮಪಾನ ಮಾಡುವ ಜನರಿಂದಲೂ ದೂರವಿರಲಿ ಎನ್ನುವುದು ಇದರ ಉದ್ದೇಶವಾಗಿದೆ. ಪ್ರತೀ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಹೊಸ ಧ್ಯೇಯ ವಾಕ್ಯದೊಂದಿಗೆ ವಿಶ್ವದ…
ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಷನ್ ಸಹಯೋಗದಲ್ಲಿ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ರವರು ನಡೆಸುತ್ತಿರುವ ರಾಷ್ಟ್ರೀಯ ಮಟ್ಟದ 60ನೇ ಸೀನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಡಾ.ರಾಜ್ ಕುಮಾರ್ ಕಪ್ ಪಂದ್ಯಾವಳಿಗೆ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರು
ಈ ಹಣ್ಣನ್ನು ಸಾಮಾನ್ಯವಾಗಿ ಕೆಲವರು ತಿನ್ನುತ್ತಿರುತ್ತಾರೆ, ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಚಿರಪರಿಚಿತ, ಸಾಮಾನ್ಯವಾಗಿ ಈ ಹಣ್ಣು ಇದರ ಹೆಸರು ಚಳ್ಳೆಹಣ್ಣು ಎಂಬುದಾಗಿ ಇದನ್ನು ಅಡುಗೆಗೆ ಹಾಗೂ ಮತ್ತಿತರ ಕೆಲಸಕ್ಕೆ ಹಾಗೂ ಮನೆಮದ್ದುಗಳಿಗೆ ಔಷಧಿಯಾಗಿ ಕೂಡ ಬಳಸಲಾಗುತ್ತದೆ. ಅದ್ರಲ್ಲೂ ಇದರ ಉಪ್ಪಿನ ಕಾಯಿ ಸೇವನೆ ಅತಿ ಹೆಚ್ಚು ಬಳಕೆಯಲ್ಲಿದೆ ಕೆಲವು ಕಡೆ. ಈ ಚಳ್ಳೆಹಣ್ಣು ಯಾವೆಲ್ಲ ಉಪಯೋಗಕಾರಿ ಅಂಶಗಳನ್ನು ಹೊಂದಿದೆ ಹಾಗೂ ಇದರಿಂದ ದೇಹಕ್ಕೆ ಯಾವೆಲ್ಲ ಆರೋಗ್ಯಕಾರಿ ಅಂಶಗಳನ್ನು ಪಡೆಯಬಹುದಾಗಿದೆ,ಹಾಗೂ ಇದರ ಬಳಕೆಯನ್ನು ಹೇಗೆ ಮಾಡಬಹುದು ಯಾವ…
ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಂಬ ವದಂತಿ ಇಂದು ಬೆಳಗಿನಿಂದಲೂ ಹರಿದಾಡುತ್ತಿದ್ದು, ಇದೀಗ ಬಂದ ಮಾಹಿತಿಯಂತೆ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಖಚಿತವಾಗಿದೆ. ಐಜಿ-ಡಿಜಿಪಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿರುವ ಅಣ್ಣಾಮಲೈ, ಕಳೆದ ತಮ್ಮ ಹತ್ತು ವರ್ಷಗಳ ಸೇವಾವಧಿಯಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಸಾಧ್ಯವಾಗದ ಕಾರಣ, ತಮ್ಮ ರಾಜೀನಾಮೆ ಸ್ವೀಕೃತಗೊಂಡ ಬಳಿಕ ಕುಟುಂಬ ಸದಸ್ಯರೊಂದಿಗೆ ಇರಲಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಣ್ಣಾಮಲೈ ರಾಜಕೀಯ…