ಸುದ್ದಿ

ಕೊನೆಗೂ ಐಟಿ ಉದ್ಯೋಗಿಗಳಿಗೆ ಎದುರಾದ ಸಂಕಷ್ಟ..! ಯಾಕೆ ಗೊತ್ತಾ?

38

ಐಷಾರಾಮಿ ಜೀವನ ನಡೆಸ್ತಿದ್ದ ಟೆಕ್ಕಿಗಳಿಗೆ ಇದೀಗ ಹೆಚ್​ಆರ್​ ಕಡೆಯಿಂದ ಬರ್ತಿರೋ ಪಿಂಕ್ ಸ್ಲಿಪ್ ಆತಂಕಕ್ಕೀಡು ಮಾಡಿದೆ. ಯಾವಾಗ ಯಾರಿಗೆ ಪಿಂಕ್ ಸ್ಲಿಪ್ ಬರುತ್ತೋ ಅನ್ನೋಟೆನ್ಶನ್ ಶುರುವಾಗಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲೂ ಇದೇ ಆತಂಕ ಶುರುವಾಗಿದ್ದು, ಆಯಾಗಿ ನಿದ್ದೆ ಮಾಡ್ತಿದ್ದ ಟೆಕ್ಕಿಗಳು ಈಗ ನಿದ್ದೆಗೆಡುವಂತಾಗಿದೆ.

ಆರ್ಥಿಕ ಸಂಕಷ್ಟ ಅನ್ನೋದು ಐಟಿ ಕಂಪನಿಗಳಿಗೆ ತುಂಬಾ ಹೊಡೆತ ಕೊಟ್ಟಿದೆ. ಕಾಸ್ಟ್ಕಟಿಂಗ್​ ಹೆಸರಲ್ಲಿ ಕೆಲಸಕ್ಕೆ ಕತ್ತರಿ ಹಾಕ್ತಿವೆ. ಇದರಿಂದ ಸಾವಿರಾರು ಉದ್ಯೋಗಿಗಳಿಗೆ ಅಭದ್ರತೆ ಎದುರಾಗಿದೆ. ಯಾವುದೇ ರೀತಿಯ ಕನಿಕರ ತೋರಿಸದೆ ಪಿಂಕ್ಸ್ಲಿಪ್ ಕೈಗಿಟ್ಟು ಮನೆಗೆ ಕಳಿಸ್ತಿವೆ. ನಿಮ್ಮಸೇವೆ ನಮಗೆ ಸದ್ಯಕ್ಕೆ ಅಗತ್ಯವಿಲ್ಲ. 3 ತಿಂಗಳಲ್ಲಿ ಕೆಲಸದಿಂದ ತೆಗೆಯಲಾಗುವುದು ಎಂದು ನೋಟಿಸ್ ನೀಡ್ತಿವೆ.

ಸ್ವಇಚ್ಛೆಯಿಂದ ರಿಸೈನ್ ಮಡಿದರೆ, ನಿಮಗೆ ಬರಬೇಕಾದ ಬಾಕಿ ಸೆಟಲ್​​ಮೆಂಟ್ ಮಾಡ್ತೀವಿ.ಇಲ್ಲದಿದರೆ ಸರಿಯಾಗಿ ಕೆಲ್ಸ ಮಾಡಲ್ಲ ಅಂತ ಕೆಲಸದಿಂದ ಕಿತ್ತಾಕ್ತೀವಿ. ಇದ್ರಿಂದ ನಿಮ್ಮ ಮುಂದಿನ ಕೆರಿಯರ್​​ಗೂ ತೊಂದರೆ ಆಗುತ್ತೆ. ಯಾವುದ್ಕೂ ನೀವೇ ಮುಂದೆ ಬಂದು ರಿಸೈನ್ ಮಾಡಿದರೆ ಒಳ್ಳೇದು ಅಂತ ಐಟಿ ಕಂಪನಿಗಳು ಹೇಳ್ತೀವೆ.

ಕಾಗ್ನಿಜೆಂಟ್ ಕಂಪನಿಯು ಬರೋಬ್ಬರಿ 7 ಸಾವಿರ ನೌಕರರಿಗೆ ಕೊಕ್‌ಕೊಟ್ಟಿದೆ. ದೇಶದ ಅತೀ ದೊಡ್ಡ ಸಾಫ್ಟ್‌ವೇರ್‌ ಕಂಪನಿ ಇನ್ಫೋಸಿಸ್‌ನಲ್ಲೂ 12 ಸಾವಿರ ಉದ್ಯೋಗಿಗಳಿಗೆ ಅಭದ್ರತೆ ಎದುರಾಗಿದೆ. ಹೆಚ್‌ಪಿ ಕಂಪನಿಯಲ್ಲೂ 7ರಿಂದ 9 ಸಾವಿರ ಉದ್ಯೋಗ ಕಡಿತಕ್ಕೆ ಚಿಂತಿಸಲಾಗಿದೆ ಎಂದು ತಿಳಿದುಬಂದಿದೆ. ಐಬಿಎಂ ಕಂಪನಿಯಲ್ಲಿ ಈಗಾಗಲೇ 15 ಸಾವಿರ ಉದ್ಯೋಗಿಗಳು ಮನೆಗೆ ಹೋಗಿದ್ದಾರಂತೆ. ಬೆಂಗಳೂರು ಬ್ರಾಂಚ್ ಮೂಲಕವೇ ಕಾಸ್ಟ್​​ ಕಟಿಂಗ್ ಶುರುವಾಗಿದೆಯಂತೆ. ಮೊದಲೆಲ್ಲಾ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ ಅಂದರೆ ಅಚ್ಚರಿಯಿಂದ ನೋಡ್ತಿದ್ದ ಜನರು ಈಗ ಅಯ್ಯೋ. ಪಾಪ ಅಂತ ಕನಿಕರ ಪಡ್ತಿದ್ದಾರೆ. ಇದು ವಿಪರ್ಯಾಸವೇ ಸರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉದ್ಯೋಗ

    ಡಿಆರ್‌ಡಿಒ ನೇಮಕಾತಿ 2020-21:

    ಚಂಡೀಗ .ದಲ್ಲಿ ಡಿಆರ್‌ಡಿಒ ನೇಮಕಾತಿ 2020-21ರಲ್ಲಿ 11 ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಹೊಸ drdo.gov.in ನೇಮಕಾತಿ 2020-21 ಡಿಆರ್‌ಡಿಒ ನೇಮಕಾತಿಯಲ್ಲಿ ಸ್ನಾತಕೋತ್ತರ ಅಪ್ರೆಂಟಿಸ್‌ಗಾಗಿ ಪ್ರಕಟಿಸಲಾದ ಉದ್ಯೋಗ ಅಧಿಸೂಚನೆ 2020-21 ನಂತರದ ತಂತ್ರಜ್ಞ ಅಪ್ರೆಂಟಿಸ್‌ಗಾಗಿ ಡಿಆರ್‌ಡಿಒ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳನ್ನು ಓದಿ. ಸ್ನೋ ಮತ್ತು ಅವಲಾಂಚೆ ಸ್ಟಡಿ ಎಸ್ಟಾಬ್ಲಿಷ್‌ಮೆಂಟ್ ನೇಮಕಾತಿ 2020 ರಲ್ಲಿ ಜೂನಿಯರ್ ರಿಸರ್ಚ್ ಫೆಲೋ ಖಾಲಿ ಹಿಮ ಮತ್ತು ಅವಲಾಂಚೆ ಅಧ್ಯಯನ ಸ್ಥಾಪನೆ 2020 ನೇಮಕಾತಿ…

  • ಸಿನಿಮಾ

    ‘ಬಾಹುಬಲಿ’ಗಿಂತುಲೂ “ಕುರುಕ್ಷೇತ್ರ” ಅದ್ದೂರಿ, ದರ್ಶನ್ ಫೋಟೋ ಸೃಷ್ಟಿಸಿದ ಸಂಚಲನ !!!

    ಕುರುಕ್ಷೇತ್ರ ಚಿತ್ರಕ್ಕೆ ಅಂತೂ ಚಾಲನೆ ಸಿಕ್ಕಿದೆ. ದರ್ಶನ್ ದುರ್ಯೋಧನನಾಗಿ ಬರಲಿದ್ದಾರೆ ಎನ್ನುವ ಮಾತೀಗ ನಿಜವಾಗಿದೆ. ಮುನಿರತ್ನ ನಿರ್ಮಾಣದ ಈ ಸಿನಿಮಾ ಯಾವಾಗ ಕೆಲಸ ಸೆಟ್ಟೇರಲಿದೆ ಎನ್ನುವ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿತ್ತು. ಮಲ್ಟಿ ಸ್ಟಾರ್ ಸಿನಿಮಾ ನಿಜಕ್ಕೂ ತಯಾರಾಗುತ್ತಾ ಅನ್ನುವ ಪ್ರಶ್ನೆ ಹಲವರಿಗಿತ್ತು. ಆ ಎಲ್ಲಾ ಪ್ರಶ್ನೆಗಳಿಗೂ ಮುನಿರತ್ನ ತಮ್ಮ ಕೆಲಸದ ಮುಖಾಂತರವೇ ಉತ್ತರ ಕೊಟ್ಟಿದ್ದಾರೆ.

  • ಉದ್ಯೋಗ

    ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ‘ಮೈಜಾಬ್’ ಆ್ಯಪ್ ಲೋಕಾರ್ಪಣೆ..!ತಿಳಿಯಲು ಈ ಲೇಖನ ಓದಿ..

    ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಮೈ ಜಾಬ್ ಆ್ಯಪ್ ಬಿಡುಗಡೆಗೊಳಿಸಲಾಯಿತು. ಉದ್ಯೋಗಕ್ಕಾಗಿ ಯುವಜನರು -ಕರ್ನಾಟಕ ವತಿಯಿಂದ ಬಿಡುಗಡೆಗೊಳಿಸಲಾಗಿರುವ ಈ ಆ್ಯಪ್‍ನಲ್ಲಿ ಉದ್ಯೋಗ ಕುರಿತು ಮಾಹಿತಿ ನೆರವು ಅರಿವು ನೀಡಲಾಗುತ್ತದೆ.

  • ಸುದ್ದಿ

    ಆನ್‌ಲೈನ್‌ನಲ್ಲಿ ಪಿಎಫ್‌ ಕ್ಲೇಮ್ ಮಾಡಿಕೊಳ್ಳಲು ಈಗ ಸುಲಭ ಅಂದ್ರೆ ಸುಲಭ..! ಹೇಗೆ ಅಂತಿರಾ..?

    ಉದ್ಯೋಗಿಗಳಿಗೆ ನಿವೃತ್ತಿ ನಂತರ ಅನುಕೂಲವಾಗಲೆಂದು ಬಹಳಷ್ಟು ಸಂಸ್ಥೆಗಳು ಪಿಎಫ್ ಸೌಲಭ್ಯವನ್ನು ತಮ್ಮ ಕಂಪನಿಯಲ್ಲಿ ನೀಡುತ್ತಿವೆ. ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಿಂದ ಪ್ರಾವಿಡೆಂಟ್‌ ಫಂಡ್‌ನ ಕಾರ್ಯಗಳು ನೆರವೇರುತ್ತಿದ್ದು, ಒಟ್ಟು ಮೊತ್ತಕ್ಕೆ ನಿಗದಿಪಡಿಸಿದ ಬಡ್ಡಿ ಸೇರಿಸಿ ಸರ್ಕಾರ ಹಣವನ್ನು ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿ ಸ್ಥಾಪನೆಯಾದ ಇಪಿಎಫ್‌ಒ ಉದ್ಯೋಗಿಗಳಿಗೆ ಪಿಎಫ್‌ ಸೌಲಭ್ಯವನ್ನು ನೀಡುತ್ತಿದೆ. ಉದ್ಯೋಗಿ ತನಗೆ ಅಗತ್ಯವಿದ್ದಾಗ ಅಥವಾ ನಿವೃತ್ತಿಯ ನಂತರ ಪಿಎಫ್‌ ಹಣವನ್ನು ಪಡೆಯಬಹುದಾಗಿದೆ. ಇನ್ನು, ಪಿಎಫ್‌ ಹಣವನ್ನು ಪಡೆಯುವುದು ಸಹ ಈಗ ಬಹಳಷ್ಟು ಸುಲಭ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ,ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….ಶೇರ್ ಮಾಡಿ…

    ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ….

  • ಸುದ್ದಿ

    ಇನ್ನು15 ದಿನ ಮಳೆ ಬರದಿದ್ದರೆ ಮಂಜುನಾಥಸ್ವಾಮಿಯ ಅಭಿಷೇಕಕ್ಕೂ ನೀರಿಲ್ಲ: ಡಾ. ವೀರೇಂದ್ರ ಹೆಗ್ಗಡೆ

    15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಕಳವಳವನ್ನು ಹೊರಹಾಕಿದ್ದಾರೆ.ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಘಟ್ಟದ ಭಾಗದಲ್ಲಿ ಮಳೆಯಾಗದ ಕಾರಣ ನೇತ್ರಾವತಿಯಲ್ಲಿ ನೀರಿಲ್ಲ. ಅಲ್ಲದೆ ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರಲ್ಲ ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕ್ಷೇತ್ರ ದರ್ಶನ ಮುಂದೂಡಿ…