News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಸುದ್ದಿ

ಪರ ಪುರುಷನ ಜೊತೆ ಒಂದೇ ಸ್ಟ್ರೆಚರ್‌ನಲ್ಲಿ ಹೋಗುವಂತೆ ಮಹಿಳೆಗೆ ಒತ್ತಾಯ…….!

90

ಒಂದೇ ಸ್ಟ್ರೆಚರ್‌ನಲ್ಲಿ ಪುರುಷ ರೋಗಿ ಜೊತೆ ಎಕ್ಸ್ ರೇ ರೂಮಿಗೆ ಹೋಗುವಂತೆ ಮಹಿಳೆಗೆ ಒತ್ತಾಯಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ಇರುವ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನಡೆದಿದೆ.ಸಂಗೀತಾ ಪುರುಷ ರೋಗಿ ಜೊತೆ ಸ್ಟ್ರೆಚರ್ ಹಂಚಿಕೊಂಡ ಮಹಿಳೆ. ಸಂಗೀತಾ ಕಳೆದ 12 ದಿನಗಳ ಹಿಂದೆ ಬಲಗಾಲು ಫ್ರ್ಯಾಕ್ಚರ್ ಆಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಎಕ್ಸ್ ರೇ ರೂಮಿಗೆ ಕರೆದುಕೊಂಡು ಹೋಗಬೇಕಾದರೆ ಸ್ಟ್ರೆಚರ್ ಇಲ್ಲವೆಂದು ಪುರುಷ ರೋಗಿಯಿದ್ದ ಸ್ಟ್ರೆಚರ್‌ನಲ್ಲಿ ಹೋಗುವಂತೆ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ನನ್ನ ಪತ್ನಿ ಸಂಗೀತಾ ಆರ್ಥೋಪೆಡಿಕ್ ವಾರ್ಡ್‍ನಲ್ಲಿ ದಾಖಲಾಗಿದ್ದಳು. ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕಡಿಮೆ ಇದ್ದ ಕಾರಣ ಎಕ್ಸ್ ರೇ ರೂಮಿಗೆ ಆಕೆಯನ್ನು ಪುರುಷನ ಜೊತೆ ಕಳುಹಿಸಲಾಯಿತು. ಇದನ್ನು ನೋಡಿ ನಾನು ಅಸಹಾಯಕನಾಗಿದ್ದೆ. ನನ್ನ ಪತ್ನಿಗೆ ಚಿಕಿತ್ಸೆ ದೊರೆಯಬೇಕು ಎಂಬ ಒಂದೇ ಕಾರಣದಿಂದ ಆಕೆಯನ್ನು ಆ ಸ್ಟ್ರೆಚರ್‌ನಲ್ಲಿ ಹೋಗಲು ಅನುಮತಿ ನೀಡಿದೆ ಎಂದು ಸಂಗೀತಾ ಅವರ ಪತಿ ಧಮೇಂದ್ರ ತಿಳಿಸಿದ್ದಾರೆ.

ಒಂದೇ ಸ್ಟ್ರೆಚರ್‌ನಲ್ಲಿ ಏಕೆ ಇಬ್ಬರು ಇದ್ದೀರಿ ಎಂದು ಸಂಗೀತಾ ಅವರನ್ನು ಪ್ರಶ್ನಿಸಿದಾಗ “ವೈದ್ಯರು ಈ ರೀತಿ ಹೋಗುವಂತೆ ಆದೇಶ ನೀಡಿದ್ದರು. ಈ ರೀತಿ ಸ್ಟ್ರೆಚರ್‌ನಲ್ಲಿ ಹೋಗುವುದರಿಂದ ಕಷ್ಟವಾಗುತ್ತದೆ ಎಂದು ನಾವು ಅವರಿಗೆ ತಿಳಿಸಿದ್ದೆ” ಎಂದು ಹೇಳಿದ್ದಾರೆ.ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಅಧಿಕ್ಷಕ ಡಾ. ಪಿ.ಎಸ್ ಠಾಕೂರ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಗೆ, ನರ್ಸ್, ವಾರ್ಡ್ ಬಾಯ್‍ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಠಾಕೂರ್ ಅವರು, ಇಲ್ಲಿ ಸ್ಟ್ರೆಚರ್ ಹಾಗೂ ಇತರ ಸೌಲಭ್ಯಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ.ವೈದ್ಯರು ನಮಗೆ ಕೊಟ್ಟ ಸಮಯದಲ್ಲಿ ಮಾತ್ರ ಅವರು ವಾರ್ಡ್ ಗೆ ಭೇಟಿ ನೀಡುತ್ತಾರೆ. ಅವರ ಡ್ಯೂಟಿ ಸಮಯ ಮುಗಿದು ಹೋದರೆ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಸಂಗೀತಾ ಪತಿ ಧಮೇಂದ್ರ ವೈದ್ಯರ ವಿರುದ್ಧ ಆರೋಪಿಸಿದ್ದಾರೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ