ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪಾರ ಔಷಧ ಗುಣ ಹೊಂದಿರುವ ನುಗ್ಗೆ ಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದ, ತಾಲೂಕಿನ ತಾವರಗೇರಾ ಪ್ರದೇಶದ ರೈತರೊಬ್ಬರು, ಸೊಪ್ಪಿನಿಂದ ತಯಾರಿಸಿದ ಪುಡಿಯನ್ನು ವಿದೇಶಗಳಿಗೆ ರಫ್ತುಮಾಡಿ ಗಮನಸೆಳೆದಿದ್ದಾರೆ.
ಮೂಲತಃ ಗಂಗಾವತಿ ತಾಲೂಕಿನವರಾದ ಬಸಯ್ಯ ಹಿರೇಮಠ, ತಾವರಗೇರಾ ಪ್ರದೇಶದಲ್ಲಿ 30ಎಕರೆ ಜಮೀನು ಖರೀದಿಸಿ, ನುಗ್ಗೆ ಬೇಸಾಯದಲ್ಲಿ ತೊಡಗಿದ್ದಾರೆ. ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ನುಗ್ಗೆ ಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್ ಆಗಿ ಪರಿವರ್ತಿಸಿದರೆ 2 ವರ್ಷಗಳವರೆಗೆ ದಾಸ್ತಾನು ಮಾಡಬಹುದು. ಆಹಾರವಸ್ತುವಾಗಿ ಬಳಸಬಹುದಾಗಿದೆ ಎಂಬ ಅಂಶ ಅವರ ಗಮನಸೆಳೆದಿದೆ. 20ಎಕರೆ ಪ್ರದೇಶದಲ್ಲಿ ನುಗ್ಗೆ ಸಸಿಗಳನ್ನು ನಾಟಿ ಮಾಡಿದ್ದಾರೆ. ತಮ್ಮ ಹೊಲಕ್ಕೆ ಹೊಂದಿಕೊಂಡಿರುವ ಇತರ ರೈತರ 15 ಎಕರೆಯನ್ನು ಲೀಸ್‌ಗೆ ಪಡೆದು ಅಲ್ಲೂ ನುಗ್ಗೆ ಸಸಿಗಳನ್ನು ಬೆಳೆಸಿದ್ದಾರೆ.
ಪೌಡರ್ ತಯಾರಿಸುವ ವಿಧಾನ:
ನುಗ್ಗೆ ಸಸಿಗಳಲ್ಲಿ ಕಾಯಿಯಾಗುವವರೆಗೆ ಈ ರೈತ ಕಾಯುವುದಿಲ್ಲ. ಗಿಡಗಳಲ್ಲಿನ ಸೊಪ್ಪನ್ನು ಆಗಾಗ್ಗೆ ಕೊಯ್ಲು ಮಾಡುತ್ತಾರೆ. ಎಲೆಗಳ ಬಣ್ಣ ಕೆಡದಂತೆ ಪಾಲಿ ಡ್ರೈಯಿಂಗ್ ವಿಧಾನದ ಮೂಲಕ ಕನಿಷ್ಠ 26 ಡಿಗ್ರಿ, ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಎಲೆಗಳನ್ನು ಒಣಗಿಸಲಾಗುತ್ತದೆ. ನಂತರ ಪೌಡರ್‌ಮಾಡಿ ಪ್ಯಾಕ್ ಮಾಡಲಾಗುತ್ತದೆ.
ಹಸಿ ಎಲೆಗಳನ್ನು ನೇರವಾಗಿ ಅಡುಗೆಗೆ ಅಥವಾ ಸೇವನೆಗೆ ಬಳಸಲು ಜನರು ಹಿಂದೇಟು ಹಾಕುತ್ತಾರೆ. ನಿಗದಿತ ಉಷ್ಣಾಂಶದಲ್ಲಿ ಎಲೆಗಳನ್ನು ಒಣಗಿಸಿ ಪೌಡರ್ ತಯಾರಿಸಿ ಮಾರಾಟ ಮಾಡಿದರೆ ಬೇಡಿಕೆಯ ಜತೆಗೆ ಬೆಲೆಯೂ ಹೆಚ್ಚು ಎಂಬುದು ರೈತ ಬಸಯ್ಯ ಹಿರೇಮಠ ಅವರ ಅನುಭವದ ಮಾತಾಗಿದೆ. ಹೀಗೆ ಸ್ಥಳೀಯವಾಗಿ ತಯಾರಿಸಿದ ನುಗ್ಗೆ ಪೌಡರ್‌ಗೆ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಂದ ಆರ್ಡರ್ ಬಂದಿರುವುದೇ ಅವರ ಉತ್ಸಾಹ ಇಮ್ಮಡಿಗೊಳಿಸಿದೆ.
ನುಗ್ಗೆ ಎಲೆಯಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದು ಪ್ರಯೋಗಗಳಿಂದ ರುಜುವಾತಾಗಿದೆ. ಇದರಲ್ಲಿ ಪೊಟ್ಯಾಷಿಯಂ, ಅಮಿನೋ ಆ್ಯಸಿಡ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಕ್ಲೊರೊಫೆರಿಲ್ ನಾರಿನಾಂಶ ಇದೆ. ಮಧುಮೇಹ ರೋಗಿಗಳಿಗೆ ಇದು ಸೂಕ್ತ ಆಹಾರ. ಬಿ.ಪಿ. ನಿಯಂತ್ರಿಸುವ, ಕ್ಯಾನ್ಸರ್‌ಕಾರಕ ಅಂಶಗಳನ್ನು ನಾಶಮಾಡುವ ಗುಣವನ್ನು ನುಗ್ಗೆ ಸೊಪ್ಪು ಹೊಂದಿದೆ. ಸೊಪ್ಪನ್ನು ಸಾಂಬರ್‌ಗೆ ಹಾಕಬಹುದಾಗಿದೆ.
ನುಗ್ಗೆ ಸೊಪ್ಪಿನಿಂದ ಪೌಡರ್ ತಯಾರಿಸುವ ಘಟಕ ಆರಂಭಿಸುವುದಾಗಿ ಬಸಯ್ಯ ಹಿರೇಮಠ ಹೇಳಿದಾಗ ಆ ಬಗ್ಗೆ ಅಧ್ಯಯನ ನಡೆಸಲಾಯಿತು. ವೈಜ್ಞಾನಿಕವಾಗಿ ಇದು ಎಷ್ಟು ಸರಿ ಎಂಬುದನ್ನು ನಾನಾ ಆಕರಗಳ ಮೂಲಕ ತಿಳಿದು, ನುಗ್ಗೆ ಬೆಳೆ ಮತ್ತು ಪ್ರೊಸೆಸಿಂಗ್ ಯುನಿಟ್‌ಗೆ ಇಲಾಖೆಯಿಂದ ನೆರವು ನೀಡಲು ಪ್ರಸ್ತಾವನೆ ಕಳುಹಿಸಲಾಗಿತ್ತು. ಇದೀಗ ಅದು ಸಾಕಾರಗೊಂಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಶಕಗಳ ಕಾಲ ಕೋರ್ಟ್ ನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯಾ ಭೂ ವಿವಾದ ಪ್ರಕರಣ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಮಾನದ ನಂತರ ಭೂ ವಿವಾದ ಕೊನೆಗೊಂಡಿದೆ. ಈ ಪ್ರಕರಣದ ಕುರಿತಾಗಿ ಅಂದರೆ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂದು ಕೋರ್ಟ್ ನಲ್ಲಿ ವಾದ ಮಾಡಿ ಸಾಬೀತು ಪಡಿಸಿ ಇಗಿನ ಈ ತೀರ್ಪಿಗೆ ಪೂರಕವಾದ ವಾದ ಮಂಡನೆ ಮಾಡಿದ ಆ ವಕೀಲರು ಯಾರು ಎನ್ನುವುದನ್ನು ನಾವು ತಿಳಿಯಲೇಬೇಕು. ಅಯೋಧ್ಯಾ ಭೂ ವಿವಾದ ಪ್ರಕರಣ ಕುರಿತಾಗಿ ವಾದ ಮಂಡಿಸಿದ ವಕೀಲರ ಪ್ರಸ್ತುತ ವಯಸ್ಸು…
ದುಬಾರಿ ಟ್ರಾಫಿಕ್ ದಂಡದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ದಂಡ ಕಟ್ಟೋ ಬದಲು ಟ್ರಾಫಿಕ್ ರೂಲ್ಸನ್ನ ಫಾಲೋ ಮಾಡಿಬಿಡೋಣ ಎಂದು ಜನರು ನಿರ್ಧರಿಸಿದಂತಿದೆ ಎನ್ನುತ್ತಿದೆ ಇತ್ತೀಚೆಗೆ ಬಂದ ಮಾಹಿತಿ. ನೂತನ ಟ್ರಾಫಿಕ್ ನಿಯಮದಿಂದ ವಾಹನ ಸವಾರರು ಎಚ್ಚೆತ್ತಿದ್ದು, ದಂಡದಿಂದ ತಪ್ಪಿಸಿಕೊಳ್ಳಲು ಟ್ರಾಫಿಕ್ ನಿಯಮ ಪಾಲಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಲ್ಲದೇ, ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ಅಪಘಾತ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ನೂತನ ಟ್ರಾಫಿಕ್ ದಂಡ ಸಂಹಿತೆ ಜಾರಿಯಾಗಿ ಇಂದಿಗೆ ಒಂದು ತಿಂಗಳಾಗಿದ್ದು, ಸಂಗ್ರಹಿಸಿದ ದಂಡದ ಮೊತ್ತ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(4 ಡಿಸೆಂಬರ್, 2018) ನೀವು ಏನು ಮಾಡಬೇಕೆಂದುಆಜ್ಞೆ ನೀಡಿದಲ್ಲಿ ನಿಮ್ಮ ಪ್ರೇಮಿಯ ಜೊತೆ ಗಂಭೀರ ಸಮಸ್ಯೆಗಳನ್ನು ಹೊಂದುತ್ತೀರಿ. ನೀವು ಇಂದು ಪ್ರೀತಿಮಾಡುವ ಅವಕಾಶವನ್ನುಕಳೆದುಕೊಳ್ಳದಿದ್ದಲ್ಲಿ,…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ…
ಮನುಷ್ಯ ಮರಣಿಸಿದ ನಂತರ ಆತನ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ ಆತ್ಮ ಈ ಲೋಕದಲ್ಲೇ ತಿರುಗಾಡುತ್ತಿರುತ್ತದೆ ಎಂದು ಹಿಂದು ಪುರಾಣಗಳು ನಂಬುತ್ತವೆ.
ವಿಶ್ವದಲ್ಲಿ ಅನೇಕ ಶಾಲೆಗಳು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿವೆ. ವಿದ್ಯಾಭ್ಯಾಸ ಹೇಳುವ ವಿಧಾನ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಂದ ಶಾಲೆ ಹೆಸರು ಮಾಡಿರುತ್ತದೆ. ಆದ್ರೆ ಈ ಶಾಲೆ ಎಲ್ಲಕ್ಕಿಂತ ಭಿನ್ನವಾಗಿದೆ. ಇಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಹೇಳುವ ಜೊತೆಗೆ ಅವ್ರ ಮದುವೆ ಜವಾಬ್ದಾರಿಯನ್ನೂ ಶಾಲೆಯೇ ಹೊರುತ್ತದೆ. ಹೌದು, ಭಿನ್ನವಾಗಿರುವ ಈ ಶಾಲೆ ಗುಜರಾತಿನ ಅಹಮದಾಬಾದ್ ನಲ್ಲಿದೆ. ಈ ಶಾಲೆ ಹೆಸರು ‘ಬ್ಲೈಂಡ್ ಕನ್ಯಾ ಪ್ರಕಾಶ್ ಘರ್’. ನಾಲ್ಕು ಮಕ್ಕಳೊಂದಿಗೆ ಶಾಲೆ ತೆರೆಯಲಾಗಿತ್ತು. ಆದ್ರೀಗ ಶಾಲೆ ಹೆಸ್ರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದಿವ್ಯಾಂಗ…