ಸಿನಿಮಾ

ಮತದಾನ ಮಾಡದ ಸಿಟಿ ಮಂದಿಗೆ ಬೆಂಡೆತ್ತಿದ ಜಗ್ಗೇಶ್ ಆಕ್ರೋಶದಿಂದ ಹೇಳಿದ್ದೇನು ಗೊತ್ತಾ..?

198

ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47% ಮತದಾನವಾದರೆ, ಬೆಂಗಳೂರು ಉತ್ತರದಲ್ಲಿ 54.63% ಹಾಗೂ ಬೆಂಗಳೂರು ಕೇಂದ್ರದಲ್ಲಿ 53.53% ಮತದಾನ ನಡೆದಿದೆ.

ಹೆರಿಗೆಗೆ ಇನ್ನೂ ಕೆಲವೇ ನಿಮಿಷಗಳು ಇರುವಾಗ ಮತಗಟ್ಟೆಗೆ ಬಂದು ಮತದಾನ ಮಾಡಿ ಬಳಿಕ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ಕೊಟ್ಟ ಮಹಿಳೆಯೊಬ್ಬರ ಬಗ್ಗೆ ಪತ್ರಿಕೆಯೊಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಅವರು, ಮತದಾನ ಮಾಡದ ನತದೃಷ್ಟರಿಗಿಂತ ಈ ಗರ್ಭಿಣಿ ಮಹಿಳೆ ಶ್ರೇಷ್ಠ ಭಾರತೀಯರು.

ತುಂಬು ಗರ್ಭಿಣಿಯೇ ಮತಗಟ್ಟೆಗೆ ಬಂದು ತನ್ನ ಹಕ್ಕು ಚಲಾಯಿಸಿದ್ದಾರೆ. ಆದ್ರೆ ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವ ಜನರು ಮತದಾನ ಮಾಡದೇ ಮೋಜು-ಮಸ್ತಿಯಲ್ಲಿಯೇ ಬದುಕುತ್ತಿದ್ದಾರೆ. ಮತದಾನ ಮಾಡದವರು ಬದುಕಿರುವ ಶವಗಳು ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರೇಕ್ಷಕರಿಗೆ ಮತ್ತೊಂದು ಗುಡ್​ ನ್ಯೂಸ್ ಕೊಡಲಿರುವ ಕಿಚ್ಚ ಸುದೀಪ್

    ಅಭಿನಯ ಚಕ್ರವರ್ತಿ ಬಾದ್​ಷಾ ಕಿಚ್ಚ ಸುದೀಪ್. ಬಹುಭಾಷೆಯಲ್ಲಿ ಬೇಡಿಕೆ ಇರುವ ಬಹುಮುಖ ಪ್ರತಿಭೆ. ಪೈಲ್ವಾನ್ ಸಕ್ಸಸ್ ಸಂಭ್ರಮ , ಪೈರಸಿ ಸಂಗ್ರಾಮವನ್ನು ಮುಗಿಸಿಕೊಂಡು ಈಗ ಪೋಲೆಂಡ್​ ದೇಶಕ್ಕೆ ಹಾರಿದ್ದಾರೆ. ಕಾರಣ ಕೋಟಿಗೋಬ್ಬ -3 ಸಿನಿಮಾದ ಶೂಟಿಂಗ್​​​. ಕಳೆದ ಎರಡು ವರ್ಷದಿಂದ ‘ಕೋಟಿಗೊಬ್ಬ-3’ ಚಿತ್ರದ ಕಾರ್ಯಗಳು ಪ್ರಗತಿಯಲ್ಲಿವೆ. ನಾಲ್ಕೈದು ಶೆಡ್ಯೂಲ್ ಶೂಟಿಂಗ್​ ಅನ್ನು ಕೂಡ ಚಿತ್ರತಂಡ ಮುಗಿಸಿಕೊಂಡಿದೆ. ಈಗ ಸೂರಪ್ಪ ಬಾಬು ನಿರ್ಮಾಣದ ಈ ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್ ದೂರದ ಪೋಲೆಂಡ್ ದೇಶದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ‘ಕೋಟಿಗೊಬ್ಬ-3’ ಸಿನಿಮಾದ…

  • ಆಧ್ಯಾತ್ಮ

    ನಿತ್ಯಜೀವನದಲ್ಲಿ ನವಗ್ರಹ ಪ್ರಭಾವ ಮನುಷ್ಯನ ಮೇಲೆ ಹೇಗೆ ಬೀರುವುದು ತಿಳಿದುಕೊಳ್ಳಬೇಕಾ? ಈ ಮಾಹಿತಿ ನೋಡಿ.

    ಓಂ ಶ್ರೀ ಕಾರ್ಯಸಿದ್ಧಿ ಗಣಪತಿ ಬನಶಂಕರಿ ದೇವಿ ಆರಾಧಕರು ಪಂಡಿತ್ ರಾಘವೇಂದ್ರ ಗುರೂಜಿ 9901077772 ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ…

  • Histrocial, inspirational, karnataka

    ನೆಲ್ಲಿತೀರ್ಥ ಗುಹಾಲಯ ಮಂದಿರಾ – ಮಂಡೀ ಉರೀ ಶಿವನ ದರ್ಶನ

    ನೆಲ್ಲಿತೀರ್ಥ ಗುಹಾಲಯ ಮಂದಿರಾ ಇರುವುದು  ಮಂಗಳೂರು  ಕಟೀಲ್  ದುರ್ಗಾ  ಪರಮೇಶವರೀ  ದೇವಸ್ಥಾನ  ಮೂಡಬಿದ್ರಿ. ಸುಮಾರು  ೫ ಕೆ.ಮ್ ಅಷ್ಟು  ದೂರದಲೇ  ಇರುವುಧು ಈ  ಮಂದಿರ. ಇತೀಹಾಸ : ಸುಮಾರು  ೧೪೮೭ ಇತೀಹಾಸವೀರುವ  ಗುಹಾಲಯದಲೇ ಶಿವನ  ಲಿಂಗ  ಇರುವುಧು.  ೬೬೦ ಅಡೀ  ಉದ್ದಾ  ಹಾಗೂ  ೨ ಅಡೀ ಯಥರ  ಇರುವ  ಗುಹೆಯ್ಯ್ಯ ಲೀ  ಭಕತದೀಗಳು ಮಂಡೀ ಉರೀ ದರ್ಶನವನ್ನು ಪಡಯ  ಬೇಕು . ಗುಹೆಯ್ಯ್ಯ ಲೀ  ನೀರುಹರಿಯುತದೆ.ಇಲೆಯೇ ನೆಲ್ಲಿಯಾ ಗಾತ್ರಧಲೀ ಹನೀ ಹನೀಯಾಗೀ ನೀರು ಬೀಳುತದೆ. ಹಾಗಾಗೀ  ಈ …

  • ಸುದ್ದಿ

    ಇನ್ನು ಎರಡೇ ದಿನಗಳ ಬಾಕಿ; ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಸಿದ್ದರಾಮಯ್ಯ,.!

    ಉಪಚುನಾವಣೆಗೆ ನಾವು ತಯಾರಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪಕ್ಷಾಂತರಿಗಳಿಗೆ ಜನ ಯಾವಾಗಲು ಕ್ಷಮಿಸುವುದಿಲ್ಲ. ಈ ಚುನಾವಣೆ ಮೂಲಕ ತಕ್ಕ ಪಾಠಕಲಿಸುತ್ತಾರೆ. ಉಪಚುನಾವಣೆಯನ್ನು ವಿಶ್ವಾಸದಿಂದ ನಡೆಸುತ್ತೇವೆ. ೧೫ ಕ್ಷೇತ್ರಗಲ್ಲಿ ಅಭ್ಯರ್ಥಿಗಳ ಗೆಲ್ಲಿಸುತ್ತೇವೆ. ಈ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು. ಕುಮಾರಸ್ವಾಮಿ ಪಾಪ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಆದರೆ ಮಾತನಾಡುವ ಮೊದಲು ಪ್ರಜ್ಞೆ ಇಟ್ಟುಗೊಂಡು ಮಾತನಾಡಲಿ. ಜಿಟಿ…