ಸುದ್ದಿ

ಆನಂದ್ ಸಿಂಗ್ ಬೆನ್ನಲ್ಲೇ 10 ಮಂದಿ ಶಾಸಕರು ರಾಜೀನಾಮೆ?– ದೋಸ್ತಿ ಸರ್ಕಾರಕ್ಕೆ ಆಷಾಢ ಕಂಟಕ…..!

60

ಸಿಎಂ ಅಮೆರಿಕ ಪ್ರವಾಸಕ್ಕೆ ತೆರಳಿದ್ದು ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆಷಾಢದ ಮೊದಲ ದಿನವೇ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾದಂತೆ ಕಾಣುತ್ತಿದೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಒಟ್ಟು 10 ಶಾಸಕರು ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಜಿಂದಾಲ್‍ಗೆ ಭೂಮಿ ನೀಡಿದ್ದನ್ನು ನೆಪವಾಗಿಟ್ಟುಕೊಂಡು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್ ಸಂಖ್ಯಾಬಲ 78ಕ್ಕೆ ಕುಸಿದಿದೆ. ಇತ್ತ ಮೂರು ದಿನಗಳಿಂದ ರಮೇಶ್ ಜಾರಕಿಹೊಳಿಯವರು ಎಲ್ಲೂ ಕಾಣಿಸುತ್ತಿಲ್ಲ. ಗೋಕಾಕ್ ನಲ್ಲೂ ಇಲ್ಲ. ಬೆಂಗಳೂರಿನಲ್ಲೂ ಇಲ್ಲ. ಈ ಮೂಲಕ ಆಪರೇಷನ್ ಕಮಲಕ್ಕೆ ಮುಹೂರ್ತ ಫಿಕ್ಸ್ ಮಾಡಿ ಗೌಪ್ಯ ಜಾಗಕ್ಕೆ ಹೋದ್ರಾ ಎಂಬ ಪ್ರಶ್ನೆ ಎದ್ದಿದೆ.

ಯಾರ್ಯಾರು ರಾಜೀನಾಮೆ?:

ಗಣೇಶ್, ಕಂಪ್ಲಿ ಶಾಸಕ
ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ
ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ
ಮಹೇಶ್ ಕುಮಟಳ್ಳಿ, ಅಥಣಿ ಶಾಸಕ
ಬಿಸಿ ಪಾಟೀಲ್, ಹಿರೆಕೇರೂರು ಶಾಸಕ
ಶ್ರೀಮಂತ್ ಪಾಟೀಲ್, ಕಾಗವಾಡ ಶಾಸಕ
ನಾರಾಯಣಗೌಡ, ಕೆಆರ್ ಪೇಟೆ ಶಾಸಕ
ಮಹಾದೇವ್, ಪಿರಿಯಾಪಟ್ಟಣ ಶಾಸಕ
ಪ್ರತಾಪ್ ಗೌಡ ಪಾಟೀಲ್, ಮಸ್ಕಿ ಶಾಸಕ
ಬಸವರಾಜ್ ದದ್ದಲ್- ರಾಯಚೂರು ಗ್ರಾಮೀಣ

ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಆನಂದ್ ಸಿಂಗ್ ರಾಜಿನಾಮೆ ಕೊಟ್ಟ ಮಾತ್ರಕ್ಕೆ ಸರ್ಕಾರ ಬೀಳಲ್ಲ. ಆನಂದ್ ಸಿಂಗ್ ಜಿಂದಾಲ್ ವಿಚಾರಕ್ಕೆ ಅಸಮಧಾನಗೊಂಡಿದ್ದರು. ಜಿಂದಾಲ್ ವಿಚಾರಕ್ಕೆ ಅವರು ರಾಜಿನಾಮೆ ಕೊಟ್ಟಿರಬಹುದು. ಅವರ ಜೊತೆ ಬೇರೆ ಯಾವ ಶಾಸಕರೂ ಇಲ್ಲ. ಇದ್ದಿದ್ದರೆ ಉಳಿದವರು ರಾಜೀನಾಮೆ ಕೊಡುತ್ತಿದ್ದರು ಎಂದು ಹೇಳಿದ್ದಾರೆ.

ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ. ಬೇರೆ ಯಾವ ಶಾಸಕರೂ ರಾಜೀನಾಮೆ ಕೊಡಲ್ಲ. ಅದು ಕೇವಲ ಊಹಾಪೋಹ. ಸರ್ಕಾರ ಬೀಳಿಸುವ ಉದ್ದೇಶದಿಂದ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿಲ್ಲ ಎಂದು ನಾಡಗೌಡ ಸ್ಪಷ್ಟಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಸೀಬೆಹಣ್ಣಿನಲ್ಲಿರುವ ಆರೋಗ್ಯದ ಗುಟ್ಟು ತಿಳಿದರೆ ನೀವು ಅಚ್ಚರಿ ಪಡುತ್ತೀರಿ! ಈ ಅರೋಗ್ಯ ಮಾಹಿತಿ ನೋಡಿ.

    ಸೀಬೆ ಹಣ್ಣು “ಬಡವರ ಸೇಬು” ಎಂದರೆ ಅತಿಶಯೋಕ್ತಿಯೇನಲ್ಲ. ಇದರಲ್ಲಿರುವ ಪೌಷ್ಟಿಕಾಂಶ ಗಳನ್ನು ಅವಲೋಕಿಸಿದಾಗ, ಸೇಬಿನ ಗುಣಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಹಣ್ಣಾಗಿದೆ. ಸೀಬೆ ಹಣ್ಣಿನ ತವರು ಅಮೆರಿಕ ಆದರೆ ಇದರ ಪ್ರಸ್ತುತ ಎಲ್ಲಾ ಕಡೆಗಳಲ್ಲೂ ಬೆಳೆಯಲಾಗುತ್ತದೆ. ಸೀಬೆ ಹಣ್ಣಿನ – ಬೇರು, ಎಲೆ, ಹೂವು, ಕಾಯಿ, ಹಣ್ಣು ಇವುಗಳೆಲ್ಲವೂ ಉಪಯುಕ್ತ ಭಾಗಗಳಾಗಿವೆ. ಪೋಷಕಾಂಶಗಳು(100 ಗ್ರಾಂ ಸೀಬೆಹಣ್ಣಿನಲ್ಲಿ ದೊರೆಯುವ ಪೌಷ್ಟಿಕಾಂಶಗಳು ಹೀಗಿವೆ) ತೇವಾಂಶ-85.3ಸಸಾರಜನಕ- 0.1 ಗ್ರಾಂಮೇದಸ್ಸು – 0.2 ಗ್ರಾಂಖನಿಜಾಂಶ – – 0.6 ಗ್ರಾಂಕಾರ್ಬೋಹೈಡ್ರೇಟ್ಸ್…

  • ಮನರಂಜನೆ

    ಸಿಕ್ಕ ಸಿಕ್ಕ ಹುಡುಗಿಯರಿಗೆ ಮುತ್ತಿಟ್ಟು ಲಕ್ಷ ಲಕ್ಷ ಹಣ ಸಂಪಾದನೆ ಮಾಡುವ ಸಖತ್ ಆಸಾಮಿ..!

    ಹಣ ಸಂಪಾದನೆಗೆ ಅನೇಕ ವಿಧಾನಗಳಿವೆ. ಆದ್ರೆ ಕೆಲವರು ಹಣ ಗಳಿಸುವ ವಿಧಾನ ವಿಚಿತ್ರ ಹಾಗೂ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಈ ಯುವಕ ಹಣ ಸಂಪಾದನೆ ಮಾಡುವ ವಿಧಾನ ದಂಗಾಗಿಸುತ್ತದೆ. ಆತ ಯಾವುದೇ ಸೆಲೆಬ್ರಿಟಿಯಲ್ಲ. ಆದ್ರೆ ಸಿನಿಮಾ ತಾರೆಯರಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದಾನೆ. ನಟರು ಸಿನಿಮಾದಲ್ಲಿ ನೀಡುವ ಮುತ್ತಿಗಿಂತ ದುಪ್ಪಟ್ಟು ಮುತ್ತನ್ನು ಹುಡುಗಿಯರಿಗೆ ನೀಡಿದ್ದಾನೆ. ಮುತ್ತು ಕೊಟ್ಟು ಹಣ ಗಳಿಸುವುದು ಇವ್ನ ಕೆಲಸ. ಈತನ ಹೆಸ್ರು ಕ್ರಿಸ್ ಮೆನ್ರೋ. ಈತ ಪ್ರಾಂಕ್ ಸ್ಟಾರ್. ದಾರಿಯಲ್ಲಿ ಹೋಗುವ ಹುಡುಗಿಯರಿಗೆ ಮುತ್ತು ನೀಡಿ…

  • ಉಪಯುಕ್ತ ಮಾಹಿತಿ

    ಬ್ಯಾಂಕ್’ಗಳಿಂದ ಸಾಲ ಪಡೆದುಕೊಂಡ ಗ್ರಾಹಕರಿಗೆ ಸಿಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ..

    ಸಾಲಗಳಿಗೆ ವಿಧಿಸುವ ಬಡ್ಡಿ ದರವನ್ನು ನಿಗದಿಪಡಿಸಲು ವಾಣಿಜ್ಯ ಬ್ಯಾಂಕ್ ಗಳು ಏಪ್ರಿಲ್ 1 ರಿಂದ ಹೊಸ ವಿಧಾನ ಅಳವಡಿಸಿಕೊಂಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದ ಸಂದರ್ಭದಲ್ಲಿ ಬ್ಯಾಂಕ್ ಗಳು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣದಿಂದ ಆರ್.ಬಿ.ಐ. ಸೂಚನೆಯಂತೆ ಏಪ್ರಿಲ್ 1, 2016 ರಿಂದ ಎಂ.ಸಿ.ಎಲ್.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಆಧಾರದ ಮೇಲೆ ಬದಲಾಗುವ ಬಡ್ಡಿದರದ ಸಾಲಗಳನ್ನು ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚವನ್ನಾಧರಿಸಿದ ಬಡ್ಡಿದರಕ್ಕೆ(MCLR) ಜೋಡಿಸಲಾಗುತ್ತದೆ. ಮೂಲ ದರ ಆಧರಿಸಿ…

  • ಸುದ್ದಿ

    ಟಿಕ್ ಟಾಕ್ ಖಾತೆ ಡಿಲಿಟ್ ಮಾಡಿ ದೇಶಪ್ರೇಮ ತೋರಿದ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳು ಖಾತೆ ಡಿಲೀಟ್.

    ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….

  • ಸುದ್ದಿ

    ಬೆಂಗಳೂರಲ್ಲಿ ಬಿದ್ದ ಮಳೆಗೆ, ಬಿದ್ದಿದ್ದು ಬರೋಬ್ಬರಿ 83 ಮರಗಳು…!

    ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು…