ಈಗಂತೂ ರಾಜಕಾರಣಿಗಳು ತಾವು ಗೆಲ್ಲುವುದಕ್ಕಾಗಿ ಏನು ಬೇಕೋ ಮಾಡುತ್ತಾರೆ, ಹೇಗೆಂದರೆ ಹಾಗೆ ಮಾತನಾಡುತ್ತಾರೆ ಕೂಡ. ಕೊನೆಗೂ ರಾಜಕೀಯಕ್ಕೆ ದೇವರನ್ನು ಎಳೆದು ತಂದು ದೇವರಿಗೂ ಜಾತಿಯ ಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ.
ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ.
ಆದಿತ್ಯನಾಥ್ ಅವರ ಹೇಳಿಕೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಯೋಗಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಪಕ್ಷ ತೊರೆದಿದ್ದಾರೆ.
ಇದೆಲ್ಲದರ ಮಧ್ಯೆ ಶಿವಪಾಲ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ(ಲೋಹಿಯಾ) ವತಿಯಿಂದ ವಾರಣಾಸಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಹನುಮಂತ ದಲಿತ ಜಾತಿಗೆ ಸೇರಿದವನು ಎಂದು ಪ್ರಮಾಣೀಕರಿಸುವ ಜಾತಿ ಸರ್ಟಿಫಿಕೇಟ್ ನೀಡಬೇಕೆಂದು ಕೋರಿದೆ.
ಹನುಮಂತ ದಲಿತ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇವರನ್ನು ಜಾತಿ ರಾಜಕಾರಣಕ್ಕೆ ಎಳೆದು ತಂದಿದ್ದಾರೆ. ಹೀಗಾಗಿ ನಾವು ಹನುಮಂತನ ಜಾತಿ ಸರ್ಟಿಫಿಕೇಟ್ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿರುವ ಪಕ್ಷದ ಮುಖಂಡ ಹರೀಶ್, ವಾರದೊಳಗೆ ಈ ಪ್ರಮಾಣ ಪತ್ರ ನೀಡದಿದ್ದರೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…
ನಟ ಚಿರಂಜೀವಿ ಸರ್ಜಾ ಅವರ ಅಂತಿಯ ದರ್ಶನಕ್ಕೆ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ದರ್ಶನದ ನಡುವೆಯೇ ಅರ್ಚಕರು ಪೂಜಾ ವಿಧಿವಿಧಾನವನ್ನು ಆರಂಭಿಸಿದ್ದಾರೆ. ಈ ವೇಳೆ ಅಣ್ಣ ಚಿರಂಜೀವಿಗೆ ಪೂಜೆ ಸಲ್ಲಿಸುವಾಗ ಧ್ರುವ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಅಣ್ಣನನ್ನು ತಬ್ಬಿಕೊಂಡು ಗಳಗಳನೇ ಅತ್ತಿದ್ದಾರೆ. ಇತ್ತ ಚಿರಂಜೀವಿ ಪತ್ನಿ ಮೇಘನಾ ರಾಜ್ ಕೂಡ ಪತಿಯ ಕೆನ್ನೆ ಸವರಿದ್ದಾರೆ. ಸಮಯಾಭಾವದಿಂದ ಸಾರ್ವಜನಿಕರ ದರ್ಶನದ ನಡುವೆಯೇ ಪೂಜಾ ವಿಧಿವಿಧಾನ ಪ್ರಾರಂಭವಾಗಿದೆ. ಚಿರು ಅಂತಿಮ ವಿಧಿ ವಿಧಾನದ ಪೂಜೆಗೆ ಕುಟುಂಬಸ್ಥರು, ಅಭಿಮಾನಿಗಳು ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ…
ಬಡವರ ಬಾದಾಮಿ ಎಂದೇ ಕರೆಯುವ ಕಡಲೆಕಾಯಿಯಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಸದಾ ನೀವು ಯಂಗ್ ಆಗಿ ಕಾಣುವಂತೆ ಮಾಡುವುದಲ್ಲದೆ, ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತೆ. ಹಾಗಾದ್ರೆ ಕಡಲೆ ಕಾಯಿಯನ್ನು ತಿನ್ನುವುದರಿಂದ ಇನ್ನು ಹಲವಾರು ಪ್ರಯೋಜನಗಳಿವೆ.. *ಪ್ರತಿದಿನ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ.ಜೊತೆಗೆ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. *ದಿನಾಲೂ ಪುರುಷ ಹಾಗೂ ಮಹಿಳೆ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಹಾರ್ಮೋನುಗಳು ಸಮತೋಲನದಲ್ಲಿದ್ದು ಅವರ ಲೈಂಗಿಕ…
ನಿಮ್ಮ ಮುಖ ಸುಂದರವಾಗಿದ್ದರೂ ಈ ಬ್ಲಾಕ್ ಹೆಡ್ಸ್ ನಿಂದಾಗಿ ಕಿರಿಕಿರಿಯಾಗುತ್ತದೆ.. ಇದರಿಂದ ಕೆಲವು ಬಾರಿ ಮುಜುಗರಕ್ಕೂ ಒಳಗಾಗುತ್ತೇವೆ.. ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ತೆಗಿಸಲು ಸಾಧ್ಯವಿಲ್ಲ.. ಅದರಲ್ಲೂ ಹುಡುಗರು ಪಾರ್ಲರ್ ಗಳಲ್ಲಿ ತೆಗೆಸಲು ಮುಜುಗರವೂ ಆಗುತ್ತದೆ.. ಇದಕ್ಕಾಗಿಯೇ ಮನೆ ಮದ್ದುಗಳ ಮೊರೆ ಹೋಗುವುದೇ ಒಳ್ಳೆಯದು.. ನಿಮಗಾಗಿಯೇ ಇಲ್ಲಿ ಕೆಲವು ಮನೆಮದ್ದುಗಳ ಮಾಹಿತಿ ನೀಡಿದ್ದೇವೆ ನೋಡಿ..
ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ವಾಪಸ್ ಪಡೆಯಲು ಯಾರು ಬಯಸುವುದಿಲ್ಲ ಹೇಳಿ. ಪ್ರತಿಯೊಬ್ಬರೂ ಕೈತುಂಬ ಸಂಪಾದನೆ ಮಾಡುವ ಬಗ್ಗೆ ಆಲೋಚನೆ ಮಾಡ್ತಾರೆ. ಕಡಿಮೆ ಹಣ ಹೂಡಿ ಹೆಚ್ಚು ಲಾಭ ಪಡೆಯಲು ಬಯಸುವವರಿಗೆ ಎಲ್ಐಸಿ ಹೊಸ ಪಾಲಿಸಿಯೊಂದನ್ನು ಶುರು ಮಾಡಿದೆ. ಎಲ್ಐಸಿ ಈ ಪ್ಲಾನ್ ನಲ್ಲಿ ಪ್ರತಿ ದಿನ 121 ರೂಪಾಯಿ ಹಣ ಹೂಡಿದ್ರೆ 25 ವರ್ಷಗಳ ನಂತ್ರ 27 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ. ಮಗಳ ಮದುವೆಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಎಲ್ಐಸಿ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದಕ್ಕೆ ನಾನು ಮಾವಿನ ಹಣ್ಣು…