ಸುದ್ದಿ

ಗಣಪತಿಗೆ ಮಾನವ ಮುಖ ಇರುವ ಜಗತ್ತಿನ ಏಕೈಕ ದೇವಾಲಯ! ಇಲ್ಲಿ ಗಜಮುಖನಿಗಲ್ಲ ನರ ಮುಖದ ಗಣಪತಿಗೆ ನಡೆಸಲಾಗುತ್ತದೆ ಪೂಜೆ…!!

74

ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು.

ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ. ದಂತಕಥೆಗಳ ಪ್ರಕಾರ ಪ್ರಭು ಶ್ರೀರಾಮ ಪಿತೃ ದೋಷ ನಿವಾರಣೆಗಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎನ್ನಲಾಗುತ್ತದೆ. ತನ್ನ ತಂದೆ ದಶರಥನ ಪಿಂಡ ಪ್ರದಾನವನ್ನು ಆತ ಸ್ವತಃ ಶಿವನ ಅಣತಿಯಂತೆ ಇಲ್ಲಿಯೆ ಮಾಡಿಸಿದ್ದನೆನ್ನಲಾಗುತ್ತದೆ.

ಹೆಸರೇ ಸೂಚಿಸುವಂತೆ ತಿಲ+ತರ್ಪಣ ಅಂದರೆ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ತರ್ಪಣ ನೀಡುವ ಸ್ಥಳ ಎಂದರ್ಥ. ಇವತ್ತಿಗೂ ಇಲ್ಲಿ ಪಿಂಡ ಪ್ರದಾನ ನಡೆಸುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಸ್ಥಳದ ಮೂಲ ಹೆಸರು ಮಂತ್ರವಾದಂ ಎಂಬುದಾಗಿದೆ. ರಾಮ ತನ್ನ ತಂದೆಯ ಪಿಂಡ ಪ್ರದಾನ ಕಾರ್ಯಗಳನ್ನು ನೆರವೇರಿಸುವಾಗ ನಾಲ್ಕು ಪಿಂಡಗಳು ಪದೆ ಪದೆ ಹುಳದ ರೂಪ ತಾಳುತ್ತವೆ.

ವ್ಯಥೆಯಿಂದ ರಾಮನು ಶಿವನನ್ನು ಧ್ಯಾನಿಸಲು ಶಿವನು ರಾಮನಿಗೆ ಮಂತ್ರವಾದಂ ಎಂಬ ಸ್ಥಳದಲ್ಲಿ ಪಿಂಡ ಪ್ರದಾನ ಕಾರ್ಯ ನಡೆಸಲು ಹೇಳುತ್ತಾನೆ. ಶಿವನ ಆಜ್ಞೆಯಂತೆಯೆ ರಾಮನು ಇಲ್ಲಿ ಪಿಂಡ ಪ್ರದಾನ ಮಾಡುವಾಗ ನಾಲ್ಕು ಪಿಂಡಗಳೂ ಶಿವಲಿಂಗದ ಆಕಾರ ತಾಳುತ್ತವೆ. ಈ ನಾಲ್ಕೂ ಲಿಂಗಗಳು ಆದಿ ವಿನಾಯಕ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಮುಕ್ತೀಶ್ವರರ್ ದೇವಾಲಯದಲ್ಲಿ ಇವೆ.

ಹೆಸರೇ ಸೂಚಿಸುವಂತೆ ತಿಲ+ತರ್ಪಣ ಅಂದರೆ ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ತರ್ಪಣ ನೀಡುವ ಸ್ಥಳ ಎಂದರ್ಥ. ಇವತ್ತಿಗೂ ಇಲ್ಲಿ ಪಿಂಡ ಪ್ರದಾನ ನಡೆಸುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಸ್ಥಳದ ಮೂಲ ಹೆಸರು ಮಂತ್ರವಾದಂ ಎಂಬುದಾಗಿದೆ. ರಾಮ ತನ್ನ ತಂದೆಯ ಪಿಂಡ ಪ್ರದಾನ ಕಾರ್ಯಗಳನ್ನು ನೆರವೇರಿಸುವಾಗ ನಾಲ್ಕು ಪಿಂಡಗಳು ಪದೆ ಪದೆ ಹುಳದ ರೂಪ ತಾಳುತ್ತವೆ.

ವ್ಯಥೆಯಿಂದ ರಾಮನು ಶಿವನನ್ನು ಧ್ಯಾನಿಸಲು ಶಿವನು ರಾಮನಿಗೆ ಮಂತ್ರವಾದಂ ಎಂಬ ಸ್ಥಳದಲ್ಲಿ ಪಿಂಡ ಪ್ರದಾನ ಕಾರ್ಯ ನಡೆಸಲು ಹೇಳುತ್ತಾನೆ. ಶಿವನ ಆಜ್ಞೆಯಂತೆಯೆ ರಾಮನು ಇಲ್ಲಿ ಪಿಂಡ ಪ್ರದಾನ ಮಾಡುವಾಗ ನಾಲ್ಕು ಪಿಂಡಗಳೂ ಶಿವಲಿಂಗದ ಆಕಾರ ತಾಳುತ್ತವೆ. ಈ ನಾಲ್ಕೂ ಲಿಂಗಗಳು ಆದಿ ವಿನಾಯಕ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಮುಕ್ತೀಶ್ವರರ್ ದೇವಾಲಯದಲ್ಲಿ ಇವೆ.
ತಮಿಳುನಾಡಿನ ಚಿದಂಬರಂನಲ್ಲಿಯೂ ಗಣೇಶನ ಮಾನವ ಮುಖದ ವಿಗ್ರಹವೊಂದಿದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಹೆಚ್ಚು ಐತಿಹ್ಯಗಳು ತಿಳಿದುಬಂದಿಲ್ಲ. ಭಾರತದಲ್ಲಿ ಹಲವಾರು ಸ್ಥಳಗಳು ಇನ್ನೂ ಅಜ್ಞಾತವಾಗಿಯೆ ಉಳಿದಿವೆ. ಈ ಸ್ಥಳಗಳ ಐತಿಹ್ಯಗಳನ್ನು ತಿಳಿದುಕೊಂಡರೆ ಎಷ್ಟೋ ಸತ್ಯಗಳು ಹೊರ ಜಗತ್ತಿಗೆ ತಿಳಿದು ಬರಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ಬಿಗ್ ಬಾಸ್ ಸೀಸನ್ 7 ರಲ್ಲಿ ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ!

    ಬಿಗ್ ಬಾಸ್ ಕನ್ನಡ ಸೀಸನ್ 7 ಮುಗಿದಿದೆ ಮತ್ತು ಶೈನ್ ಶೆಟ್ಟಿ ಅವರು ಈ ಭಾರಿಯ ಬಿಗ್ ಬಾಸ್ ಕನ್ನಡ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ, ನಿಮಗೆ ಈ ಭಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ಸ್ಪರ್ಧಿಗಳು ಎಷ್ಟು ಸಂಭಾವನೆಯನ್ನ ಪಡೆದಿದ್ದರು ಅನ್ನುವುದು ಗೊತ್ತೇ ಇದೆ, ಆದರೆ ಬಿಗ್ ಬಾಸ್ ನಿರೂಪಣೆಯನ್ನ ಮಾಡಿಕೊಡುವ ಕಿಚ್ಚ ಸುದೀಪ್ ಅವರು ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ. ಸ್ನೇಹಿತರೆ ಬಿಗ್ ಬಾಸ್ ಇತಿಹಾಸದಲ್ಲಿ ಅತೀ ಹೆಚ್ಚು ಸಂಭಾವನೆಯನ್ನ ಪಡೆಯುವ…

  • ಸುದ್ದಿ

    ಈ ಗಿಡಗಳನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಸಾಕು ಏರ್‌ ಫ್ಯೂರಿಫೈಯರ್ ಬೇಕಾಗೇಯಿಲ್ಲ,.!

    ಈಗಿನ  ಆಧುನಿಕ ಕಾಲದಲ್ಲಿ ಜಾನರು ವಾಸಿಸುತ್ತಿದ್ದಂತೆ  ಕಾಡುಗಳು ಮರೆಯಾಗುತ್ತಿವೆ ಕಾರಣ ನಮಗೆಲ್ಲರಿಗೂ ತಿಳಿದಿದೆ, ನಗರಪ್ರದೇಶಗಳಲ್ಲಿ ಕೈ ತೋಟಕ್ಕೂ ಜಾಗಬಿಡದೆ ಕಟ್ಟಡಗಳು ಎದ್ದೇಳುತ್ತಿವೆ. ಇದರ ಪರಿಣಾಮ ಶುದ್ಧಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೆಹಲಿ ನಗರದಲ್ಲಿ ವಾಯುಮಾಲಿನ್ಯ ಉಂಟು ಮಾಡಿರುವ ದುಷ್ಪರಿಣಾಮ ಹೇಗಿದೆ ಎಂಬುವುದು ನಿಮಗೆ ಗೊತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿ ಕೂಡ ವರ್ಷದಿಂದ ವರ್ಷಕ್ಕೆಗಿಡಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.ಹೊರಗಡೆ ಹೋದರೆ ದೂಳು, ಹೊಗೆ ಹಾಗಂತ ಮನೆಯೊಳಗೆ ಶುದ್ಧ ಗಾಳಿಯೇನು ದೊರಕುತ್ತಿಲ್ಲ.ಮನೆಯ ಒಳಗಡೆಯು ಕಲುಷಿತ ಗಾಳಿಯೆ ಓಡಾಡುತ್ತಿರುತ್ತದೆ….

  • ಸುದ್ದಿ

    ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್, ವೊಡಾಫೋನ್; ಡಿಸೆಂಬರ್‌ 1ರಿಂದ ಕರೆ ದುಬಾರಿ!

    ಜಿಯೋ ಗ್ರಾಹಕರ ಬೆನ್ನಲ್ಲೇ ಏರ್‌ಟೆಲ್‌ ಮತ್ತು ವೊಡಾಫೋನ್‌ ಗ್ರಾಹಕರಿಗೆ ಮುಂದಿನ ತಿಂಗಳಿಂದ ಫೋನ್‌ ಬಿಲ್‌ ಶಾಕ್‌ ತಟ್ಟಲಿದೆ. ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 1ರಿಂದ ತನ್ನ ಸೇವೆಗಳ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ. ಕೆಲವೇ ವರ್ಷಗಳ ಹಿಂದೆ ಹತ್ತಾರು ದೂರ ಸಂಪರ್ಕ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ತರಹೇವಾರಿ ಆಫರ್‌ಗಳ ಮೂಲಕ ಕಡಿಮೆ ದರ ಸೇವೆಗಳನ್ನು ಘೋಷಿಸುತ್ತಿದ್ದವು. ಆದರೆ ಈಗ ಬಹುತೇಕ ದೂರಸಂಪರ್ಕ ಕಂಪೆನಿಗಳು ಮುಚ್ಚಿ ಹೋಗಿವೆ ಅಥವಾ ವಿಲೀನಗೊಂಡಿವೆ. ಜಿಯೋ, ಏರ್‌ಟೆಲ್, ವೊಡಾಫೊನ್ ಐಡಿಯಾ ಹಾಗೂ ಸರ್ಕಾರಿ ಸ್ವಾಮ್ಯ…

  • ಕ್ರೀಡೆ

    ಮುಂಬೈ vs ಸನ್ ರೈಸರ್ಸ್ ಪಂದ್ಯ..ಯಾರ್ಯಾರು ಎಷ್ಟು ಹೊಡೆದ್ರು?ಗೆದ್ದಿದ್ದು, ಸೋತಿದ್ದು ಯಾರು.?ಇಲ್ಲಿದೆ ಸಂಪೂರ್ಣ ಮಾಹಿತಿ..ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹೈದರಾಬಾದ್’ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿ ಇಂದಿನ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 1 ವಿಕೆಟ್ ಗಳ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್ 2018ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬಯಿ ಸತತ ಎರಡನೇ ಸೋಲಿಗೆ ಗುರಿಯಾಗಿದೆ. ಅತ್ತ ಹೈದರಾಬಾದ್ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಮುಂಬೈ ಬ್ಯಾಟಿಂಗ್ :- 20 ಓವರ್ ಗಳಲ್ಲಿ…

  • ಸುದ್ದಿ

    ಆಕಾಶದಿಂದ ಪಾತಾಳಕ್ಕೆ ಇಳಿದ ಈರುಳ್ಳಿ, ಕೇಜಿಗೆ ಈರುಳ್ಳಿ 25 ರೂಪಾಯಿ.!

    ಗಗನ ಸೀಳಿ ಬ್ರಹ್ಮಾಂಡ ತಲುಪಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿದೆ. ದೇಶದ ವಿವಿಧೆಡೆ 200 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ ಇದೀಗ 170 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಅಂದರೆ ನಿಮಗೆ ಅಚ್ಚರಿಯಾದಿತು. ಹೌದು, ಆಂಧ್ರ ಸರ್ಕಾರ ಈರುಳ್ಳಿಗೆ ಸಬ್ಸಿಡಿ ಘೋಷಣೆ ಮಾಡಿದ್ದು, ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ. ರಾಜ್ಯದ ರೈತು ಬಜಾರ್‌ಗಳಲ್ಲಿ ಒಂದು…