ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಪರಿಚಯಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಕಳೆದ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ಯೋ ಗೊತ್ತಿಲ್ಲ. ಆದರೆ ಸಿಎಂಗೂ ಮೊದಲೇ ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಅದಮ್ಯ ಆಸೆಯಿಂದ ಈ ಗುಲಾಬಿ ತೋಟಗಾರಿಕೆ ಮಾಡುತ್ತಿದ್ದಾರೆ. 2 ಮನೆ, ಬಂಗಾರ, ತಂದೆಯ ಪಿಎಫ್ ಫಂಡ್ ಜೊತೆಗೆ 4 ಕೋಟಿ ಸಾಲ ಮಾಡಿ, 10 ಎಕರೆ ಜಮೀನಿನಲ್ಲಿ 1 ಎಕರೆ ವಿಸ್ತಾರವುಳ್ಳ 7 ಪಾಲಿಹೌಸ್ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.

ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಗಿರೀಶ್ ಮೊದಲಿಗೆ ಕೃಷಿ ಮಾಡುತ್ತೇನೆ ಅಂದಾಗ ಕುಟುಂಬದವರು ಒಪ್ಪಿರಲಿಲ್ಲ. ಅದರಲ್ಲೂ 40 ಬೊರ್ವೆಲ್ ಕೊರೆಸಿದ್ರೂ ನೀರು ಸಿಗ್ಲಿಲ್ಲ. ಇಂಥ ಹೊತ್ತಲ್ಲಿ ಮಗನಿಗೆ ಧೈರ್ಯ ತುಂಬಿದ್ದು ಕೆಇಬಿ ನಿವೃತ್ತ ಎಂಜಿನಿಯರ್ ತಂದೆ ರಾಮಸ್ವಾಮಿ. ನನ್ನ ಸಲಹೆಯಂತೆ ಪೌಲಿಹೌಸ್ಗಳ ಮೇಲೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸಿದ ಬಳಿಕ ಈಗ ನೀರಿನ ಸಮಸ್ಯೆಯೇ ಇಲ್ಲ ಎಂದು ಗಿರೀಶ್ ತಂದೆ ರಾಮಸ್ವಾಮಿ ಹೇಳುತ್ತಾರೆ.

ಒಂದೂವರೆ ವರ್ಷದಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ನಿತ್ಯ 10 ರಿಂದ 15 ಸಾವಿರ ಗುಲಾಬಿ ಹೂವುಗಳನ್ನು ಕೋಲ್ಡ್ ಸ್ಟೋರೇಜ್ ವಾಹನದಲ್ಲೇ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದಾರೆ. ತಾಯಿ ಲಲಿತಮ್ಮ, ಎಂಟೆಕ್ ಪದವೀಧರೆಯಾಗಿರೋ ಪತ್ನಿ ಅಕ್ಷತಾ ಸಹ ಗಿರೀಶ್ಗೆ ಸಾಥ್ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೇವು ಎಂದಾಕ್ಷಣ ನೆನಪಾಗೋದು ಕಹಿ. ಆದರೆ ಈ ಬೇವಿನಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಜೀವನದಲ್ಲಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತೆ. ಇದರ ಹಿಂದೆ ಒಂದು ಆರೋಗ್ಯಕರ ಕಾರಣವೂ ಅಡಗಿದೆ. ಪುರಾತನ ಗ್ರಂಥದಲ್ಲಿ ಬೇವಿನ ಆರೋಗ್ಯಕರ ಲಾಭದ ಬಗ್ಗೆ ಉಲ್ಲೇಖವಿದೆ. ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿದ್ದು, ಈ ಗುಣಗಳು ಮಾನವನ ಆರೋಗ್ಯಕ್ಕೆ…
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದ ಐದು ಸಾವಿರ ಸೈಟ್ಗಳ ಹಂಚಿಕೆಗೆ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ, ಮತ್ತೆ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ.
ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು. ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ…
ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಆಯೋಜಿ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಹುಬ್ಬಳಿಯ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟರು. ಅವರು “ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು” ಹಾಡು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಕೊನೆಗೆ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದೊಡನೆ ಸಿದ್ದಾರೂಢರ ಮಠಕ್ಕೆ ತೆರಳಿ ದರ್ಶನ ಪಡೆದೆ. ಈ ನಗರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ. ದೊಡ್ಮನೆ ಹುಡುಗ ಚಿತ್ರದ ದೃಶ್ಯಗಳನ್ನು ನಾಲ್ಕು ದಿನಗಳಕಾಲ ಇಲ್ಲೇ ಮಾಡಲಾಗಿತ್ತು ಎಂದರು. ಹುಬ್ಬಳ್ಳಿ ಜನರ…
75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್ರನ್ನು ಭೇಟಿ ಆಗಿದ್ದಾರೆ. ಪ್ರೀತಿ ಶುರುವಾಗಿದ್ದು ಹೇಗೆ? 1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು. .ನಿಮ್ಮ ಸಮಸ್ಯೆ.ಏನೇ .ಇರಲಿ…