ಆರೋಗ್ಯ, ಉಪಯುಕ್ತ ಮಾಹಿತಿ

ಪ್ರತೀದಿನ ಊಟದ ಜೊತೆಗೆ ತುಪ್ಪ ತಿಂದರೆ ಏನಾಗುತ್ತೆ ಗೊತ್ತಾ..?

320

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು.

ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು ನಮ್ಮ ಶರೀರಕ್ಕೆ ಬಹಳ ಪ್ರಯೋಜನಕಾರಿ.

ನೈಸರ್ಗಿಕವಾಗಿ ಸಿಗುವ ಪದಾರ್ಥಗಳನ್ನು ಸರಿಯಾದ ವಿಧಾನದಲ್ಲಿ ಸೇವಿಸಿದ್ರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಅತಿಯಾಗಿ ಸೇವನೆ ಬೇಡ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 38 ಜನರ ಮೇಲೆ ಅಧ್ಯಯನ ನಡೆಸಲಾಗಿದೆ.

ಸ್ಯಾಚ್ಯುರೇಟೆಡ್  ಕೊಬ್ಬನ್ನು ಬಳಸುವವರು ತುಪ್ಪದಿಂದ ದೂರ ಇರುವವರಿಗಿಂತ ಆರೋಗ್ಯಕರವಾಗಿದ್ದರಂತೆ. ಪ್ರತಿದಿನ ದೇಶಿಯ ತುಪ್ಪ ಸೇವನೆ ಮಾಡುವವರ ಕಿಡ್ನಿ, ಹೃದಯ ಆರೋಗ್ಯಕರವಾಗಿರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ