ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ.
1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ.
2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ.
3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು.
4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು ಮತ್ತು ಲೇಪಿಸುವುದರಿಂದ ಗಾಯ ಗುಣಪಡಿಸಬಹುದು.
5) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಜ್ವರ ಗುಣವಾಗುವುದು.
6) ಬೆಳ್ಳುಳ್ಳಿ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ಸ್ವಲ್ಪ ಬೆಲ್ಲ ಹಾಕಿ ಶರಭತ್ ಮಾಡಿ ಎರಡರಿಂದ ಮೂರು ಗಂಟೆಗೆ ಒಮ್ಮೆ ಕೊಡುತ್ತಿದ್ದರೆ ಮಕ್ಕಳ ಬಿಡದೆ ಇರುವ ಕೆಮ್ಮು ಗುಣವಾಗುತ್ತದೆ.
7) ಬೆಳ್ಳುಳ್ಳಿ ಹೊಳಪನ್ನು ಸ್ವಲ್ಪ ಬೆಲ್ಲದೊಂದಿಗೆ ಅರೆದು ಗಂಟಲಿಗೆ ಹಚ್ಚುವುದರಿಂದ ಗಂಟಲುಗಳಲೆ ಗುಣವಾಗುತ್ತದೆ.
8) ಬೆಳ್ಳುಳ್ಳಿಯ ರಸಕ್ಕೆ ಸಮ ಪ್ರಮಾಣದಲ್ಲಿ ಜೇನುತುಪ್ಪ ಸೇರಿಸಿ ಹಚ್ಚುವುದರಿಂದ ಅರೆದಲೆ ಸೂಲೆ ಗುಣವಾಗುತ್ತದೆ.
9) ಬೆಳ್ಳುಳ್ಳಿಯ ರಸವನ್ನು ಬೆಚ್ಚಗೆ ಮಾಡಿ ಎರಡರಿಂದ ಮೂರು ಹನಿ ಕಿವಿಗೆ ಬಿಡುವುದರಿಂದ ಕಿವಿ ನೋವು ಗುಣವಾಗುತ್ತದೆ ಮತ್ತು ಕಿವಿಯಲ್ಲಿ ಯಾವುದೇ ಹುಳು ಸೇರಿಕೊಂಡರು ಹೊರಗೆ ಬರುತ್ತದೆ.
10) ಸ್ವಲ್ಪ ತುಪ್ಪ ಹಾಕಿ ಬೆಳ್ಳುಳ್ಳಿಯನ್ನು ಹುರಿದು ತುಪ್ಪವನ್ನು ಸೇರಿಸಿ ಅರೆದು ಒಂದು ಚಮಚ ಜೇನು ಸೇರಿಸಿ ತಿನ್ನುತ್ತಿದ್ದರೆ ಉಬ್ಬಸ ಗುಣವಾಗುತ್ತದೆ.
11) ಬೆಳ್ಳುಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಚರ್ಮರೋಗಕ್ಕೆ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.
12) ಬೆಳ್ಳುಳ್ಳಿ ರಸಕ್ಕೆ ಉಪ್ಪು ಸೇರಿಸಿ ಹಚ್ಚಿದರೆ ಚೇಳಿನ ವಿಷ ಇಳಿಯುತ್ತದೆ.
13) ಬೆಳ್ಳುಳ್ಳಿ ಎಸಳಿಗೆ ಎಳ್ಳೆಣ್ಣೆ ಸೇರಿಸಿ ಸೈಂಧವ ಲವಣ ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ವಾತ ಜ್ವರ ಗುಣವಾಗುತ್ತದೆ.
14) 20 ಗ್ರಾಂ ಬೆಳ್ಳುಳ್ಳಿ ಸಮ ಪ್ರಮಾಣದ ಶುಂಠಿ ಲಕ್ಕಿ ಸೊಪ್ಪು ಸಮ ಪ್ರಮಾಣ 8 ಪಾಲು ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ ಸೋಸಿ ಎರಡು ಹತ್ತು ಸೇವಿಸುವುದರಿಂದ ವಾತರೋಗ ಗುಣವಾಗುತ್ತದೆ.
15) ದುಷ್ಟ ಹುಣ್ಣಿನ ಮೇಲೆ ಬೆಳ್ಳುಳ್ಳಿ ರಸವನ್ನು ಹಚ್ಚುವುದರಿಂದ ಹುಳು ಆಗುವುದಿಲ್ಲ.
16) ದುಷ್ಟ ಜಂತುಗಳು ಕಚ್ಚಿದಾಗ ಬೆಳ್ಳುಳ್ಳಿಯನ್ನು ಹಚ್ಚುವುದು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ವಿಷ ಇರುವುದಿಲ್ಲ.
17) ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಂಡಿ ನೋವು ಗುಣವಾಗುತ್ತದೆ.
18) ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಚಚ್ಚಿ ಕುದಿಸಿ ಕಪ್ಪಾದ ಮೇಲೆ ಬೆಳ್ಳುಳ್ಳಿಯನ್ನು ತೆಗೆದು ಎಣ್ಣೆಯನ್ನು ಸೀಸೆಯಲ್ಲಿ ಭದ್ರವಾಗಿಟ್ಟು ನೋವಿರುವ ಜಾಗದಲ್ಲಿ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
19) ಆರು ಏಳು ಎಸಳು ಬೆಳ್ಳುಳ್ಳಿಯನ್ನು ಅಕ್ಕಿಯಲ್ಲಿ ಹಾಕಿ ಅನ್ನ ಮಾಡಿ ತಿನ್ನುವುದರಿಂದ ವಾತರೋಗಗಳು ನಿವಾರಣೆಯಾಗುತ್ತದೆ ಮತ್ತು ತಡೆಯಲಾಗದ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
20) ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಾಲಿನಲ್ಲಿ ಬೇಯಿಸಿ ತುಪ್ಪದಲ್ಲಿ ಕೆಂಪಾಗಿ ಹುರಿದು ಇತರೆ ಸಾಮಗ್ರಿಗಳನ್ನು ಸೇರಿಸಿ ನಾನು ತಯಾರಿಸಿದ ಔಷಧಿ ಪಾರ್ಶ್ವ ವಾಯು ಮತ್ತು ವಾತರೋಗಕ್ಕೂ ತುಂಬಾ ಒಳ್ಳೆಯ ಔಷಧಿಯಾಗಿದೆ.
21) ಬೆಳ್ಳುಳ್ಳಿ ಮತ್ತು ಶುಂಠಿ ಪುಡಿಯನ್ನು ಶುಂಠಿ ಪೇಸ್ಟ್ ಸೇರಿಸಿ ಹಚ್ಚಿದರೆ ತಲೆನೋವು ಗುಣವಾಗುತ್ತದೆ.
22) ಚಳಿಗಾಲದಲ್ಲಿ ಹೆಚ್ಚು ಉಪಯೋಗಿಸುವುದರಿಂದ ಶಾಖ ಹೆಚ್ಚಿಸಿ ದೇಹದ ನೋವು ನಿವಾರಣೆ ಮಾಡುತ್ತದೆ.
23) ಪ್ರತಿ ದಿನ ಎರಡು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಬಿಪಿ ಹತೋಟಿಗೆ ಬರುತ್ತದೆ.
24) ಬೆಳ್ಳುಳ್ಳಿ ಹೆಣ್ಣುಮಕ್ಕಳ ತಿಂಗಳ ಮುಟ್ಟಿನ ಹೊಟ್ಟೆ ನೋವು ನಿವಾರಿಸುತ್ತದೆ.
25) ಬೆಳ್ಳುಳ್ಳಿಯ ಉಪಯೋಗದಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.
26) ಇನ್ನೂ ಹೆಚ್ಚಿನ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುವ ಬೆಳ್ಳುಳ್ಳಿ, ತಾಮಸಿಕ ಮತ್ತು ಕಾಮ ಆಸಕ್ತಿ ಗುಣವನ್ನು ಹೆಚ್ಚಿಸುತ್ತದೆ ಮೆದುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರುವ ಇದು ಮಾನಸಿಕ ಒತ್ತಡವನ್ನು ತರುತ್ತದೆ. ಈ ಕಾರಣಕ್ಕಾಗಿ ನಮ್ಮ ಹಿರಿಯರು ಬೆಳ್ಳುಳ್ಳಿಯನ್ನು ಪೂಜೆ ಪುನಸ್ಕಾರ ದೇವಿ ಕಾರ್ಯ ತಪಸ್ಸು ಜಪ ಮಾಡುವ ಸಮಯದಲ್ಲಿ ನಿಶಿದ್ಧ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಸೋಮವಾರ, 12/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ದೇಹದ ಫಿಟ್ ನೆಸ್ ಕಾಪಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ ಈ ವೇಗದ ಜಗತ್ತಿನಲ್ಲಿ ದೇಹದ ಸದೃಢತೆ ಕಾಪಾಡಲು ಗಂಟೆಗಳ ಕಾಲ ವ್ಯಾಯಾಮ ಮಾಡುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಹಾಗೂ ವ್ಯಾಯಾಮ ಮಾಡಿ ದೇಹ ಕರಗಿಸುವ ಪ್ರಯತ್ನ ಮಾಡಿದರೂ ವ್ಯಾಯಾಮದ ನಂತರ ಅಗತ್ಯ ಪ್ರಮಾಣದ ಪೋಷಕಾಂಶಗಳ ಆಹಾರಗಳನ್ನೇ ಸೇವಿಸುವುದು, ಇದನ್ನೇ ನಿತ್ಯ ಪಾಲಿಸುವುದು ಇನ್ನಷ್ಟು ತ್ರಾಸದಾಯಕ. ಅದರಲ್ಲೂ ಬಾಯಿಯ ರುಚಿ ಕಟ್ಟಿಹಾಕಿ ಡಯಟ್ ಮಾಡುವ ನಮ್ಮ ಯೋಜನೆ ರುಚಿಕರ ಆಹಾರ ನೋಡುತ್ತಿದ್ದಂತೆ ಮುರಿದಿರುತ್ತದೆ. ಆದರೆ ನಾವು…
ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು…
ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯಲ್ಲಿನ ಕೆಲ ಅಂಶ ಕೈಬಿಡುವಂತೆ ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶನಿವಾರ ಬೆಳಗ್ಗೆ 8ರ
ವರೆಗೆ 24 ತಾಸು ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿವೆ.
ಊಟ ಆದ್ಮೇಲೆ ಬಾಳೆ ಹಣ್ಣು ತಿನ್ನುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಅಂತ ತಜ್ಞರು ಹೇಳಿದ್ದಾರೆ.
ಎಲ್ಲಾ ಚುನಾವಣೆಗೂ ಸ್ಪರ್ಧಿಸುವ ಮೂಲಕ ಎಲೆಕ್ಷಿನ್ ಕಿಂಗ್ ಎಂದು ಖ್ಯಾತಿ ಪಡೆದಿರುವ ಡಾ. ಕೆ.ಪದ್ಮರಾಜನ್ ಮತ್ತೊಂದು ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.