ಸುದ್ದಿ

ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

1434

ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ.

ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

ಗುರುವಾರ ಬೆಳಗ್ಗೆ ಪಕ್ಕದ ಮನೆಯವರು ಮನೆಯತ್ತ ನೋಡಿದ್ದಾರೆ. ತುಂಬಾ ಹೊತ್ತಾದರೂ ಯಾರೂ ಮನೆಯಿಂದ ಹೊರಗೆ ಬಾರದ್ದನ್ನು ಮನಗಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿದ್ದು, ಬಾಗಿಲನ್ನು ಮುರಿದು ಒಳಗೆ ತೆರಳಿದ್ದಾರೆ.

ಬಾಗಿಲು ತೆರೆದು ಒಳಗೆ ಹೋಗುತ್ತಿದ್ದಂತೆ ಚೂರು ಚೂರಾದ ವಸ್ತುಗಳು ಹಾಗೂ ಗೋಡೆ ಕಪ್ಪಾಗಿರುವುದನ್ನು ಕಂಡಿದ್ದಾರೆ. ಪ್ರಸನ್ನ, ಪತ್ನಿ ಅರ್ಚನಾ(32) ಹಾಗೂ ತಾಯಿ ರೇವತಿ(59) ಅವರ ದೇಹ ಮನೆಯ ವಿವಿಧ ಸ್ಥಳಗಳಲ್ಲಿ ಕಂಡಿವೆ. ಮನೆಯೊಳಗಿನ ರೆಫ್ರಿಜರೇಟರ್ ಸ್ಫೋಟಗೊಂಡಿದ್ದು, ರೆಫ್ರಿಜರೇಟರ್‍ನಿಂದ ಸ್ಫೋಟಗೊಂಡ ವಿಷಕಾರಿ ಅನಿಲದಿಂದ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ