ಸುದ್ದಿ

ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

1464

ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ.

ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

ಗುರುವಾರ ಬೆಳಗ್ಗೆ ಪಕ್ಕದ ಮನೆಯವರು ಮನೆಯತ್ತ ನೋಡಿದ್ದಾರೆ. ತುಂಬಾ ಹೊತ್ತಾದರೂ ಯಾರೂ ಮನೆಯಿಂದ ಹೊರಗೆ ಬಾರದ್ದನ್ನು ಮನಗಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿದ್ದು, ಬಾಗಿಲನ್ನು ಮುರಿದು ಒಳಗೆ ತೆರಳಿದ್ದಾರೆ.

ಬಾಗಿಲು ತೆರೆದು ಒಳಗೆ ಹೋಗುತ್ತಿದ್ದಂತೆ ಚೂರು ಚೂರಾದ ವಸ್ತುಗಳು ಹಾಗೂ ಗೋಡೆ ಕಪ್ಪಾಗಿರುವುದನ್ನು ಕಂಡಿದ್ದಾರೆ. ಪ್ರಸನ್ನ, ಪತ್ನಿ ಅರ್ಚನಾ(32) ಹಾಗೂ ತಾಯಿ ರೇವತಿ(59) ಅವರ ದೇಹ ಮನೆಯ ವಿವಿಧ ಸ್ಥಳಗಳಲ್ಲಿ ಕಂಡಿವೆ. ಮನೆಯೊಳಗಿನ ರೆಫ್ರಿಜರೇಟರ್ ಸ್ಫೋಟಗೊಂಡಿದ್ದು, ರೆಫ್ರಿಜರೇಟರ್‍ನಿಂದ ಸ್ಫೋಟಗೊಂಡ ವಿಷಕಾರಿ ಅನಿಲದಿಂದ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹಿಮಪಾತದ ನಡುವೆ ದೇಶ ಸೇವೆ ಸಲ್ಲಿಸುತ್ತಿರುವ ಈ ವೀರಯೋಧನಿಗೊಂದು ಸಲಾಂ. ಜಾಲತಾಣಗಳಲ್ಲಿ ಸಖತ್ ವೈರಲ್.

    ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೈನಿಕರು ನಮಗಾಗಿ ಪ್ರತಿದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಚಳಿಗಾಳಿ ಹಿಮಮಳೆ ಯಾವುದನ್ನೂ ಲೆಕ್ಕಿಸದೆ ಸೈನಿಕರು ಬಾರ್ಡರ್ ನಲ್ಲಿ ನಮಗಾಗಿ ಪ್ರಾಣ ಒತ್ತೆಯಿಟ್ಟು…

  • inspirational

    ಹನುಮಂತ ದೇವರನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯ ಮಂಗಳವಾಗಿದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(5 ಮಾರ್ಚ್, 2019) ಇಂದು ನಿಮ್ಮ ಹೊಸ ಯೋಜನೆಗಳು ಹಾಗೂ ಆಲೋಚನೆಗಳ ಬಗ್ಗೆ ನಿಮ್ಮ ಪೋಷಕರನ್ನು ವಿಶ್ವಾಸಕ್ಕೆ…

  • ಆರೋಗ್ಯ

    ಅರಿಶಿನದಲ್ಲಿದೆ ಆ್ಯಂಟಿಬಯೋಟಿಕ್ ನಿಮಗೆಗೊತ್ತಾ..?ತಿಳಿಯಲು ಓದಿ…

    ಪ್ರತಿದಿನ ಅರಿಶಿನ ಬೆರೆಸಿದ ಒಂದು ಲೋಟ ಹಾಲು ಕುಡಿದ್ರೆ ನೀವು ಆರೋಗ್ಯವಾಗಿರಬಹುದು. ಹಾಲು ಮತ್ತು ಅರಿಶಿನ ಎರಡೂ ನೈಸರ್ಗಿಕ ಆ್ಯಂಟಿಬಯೋಟಿಕ್ ಇದ್ದಂತೆ. ಹಲವು ಅಂಟುರೋಗಗಳು ಬರದಂತೆ ಇದು ತಡೆಯುತ್ತದೆ.

  • ಸುದ್ದಿ

    ಗರ್ಭಿಣಿಯರೇ ಉಷಾರ್…! 3 ಗಂಟೆಗಳವರೆಗೂ ಸಂಭವಿಸಲಿದೆ ಚಂದ್ರಗ್ರಹಣ…..

    ಜುಲೈ 16 ರ ಮಧ್ಯರಾತ್ರಿ ಚಂದ್ರ ಗ್ರಹಣ ಸಂಭವಿಸಲಿದೆ. ಸತತ ಮೂರು ಗಂಟೆಗಳ ಕಾಲ ಗ್ರಹಣವಿರಲಿದೆ. ಗ್ರಹಣ ಅನೇಕ ರಾಶಿಗಳ ಹಾಗೂ ನಕ್ಷತ್ರದ ಮೇಲೆ ಪ್ರಭಾವ ಬೀರ್ತಿದೆ. ಗ್ರಹಣ ದೋಷದಿಂದ ತಪ್ಪಿಸಿಕೊಳ್ಳಲು ಜನರು ಜಪ, ದಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಗ್ರಹಣ ಕಾಲದಲ್ಲಿ ಗರ್ಭಿಣಿಯರು ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣ ಕಾಲದಲ್ಲಿ ಗರ್ಭಿಣಿಯರು ಯಾವುದೇ ಚೂಪಾದ ವಸ್ತುಗಳನ್ನು ಮುಟ್ಟಬಾರದು. ಸೂಜಿ, ಚಾಕುವಿನಂತಹ ವಸ್ತುಗಳಿಂದ ದೂರವಿರಬೇಕು. ಗ್ರಹಣ ಕಾಲದಲ್ಲಿ ಅಪ್ಪಿತಪ್ಪಿಯೂ ಮನೆಯಿಂದ ಹೊರಗೆ ಬರಬೇಡಿ. ಗ್ರಹಣ…

  • ಉಪಯುಕ್ತ ಮಾಹಿತಿ

    ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ ಬೈಕುಗಳು ಯಾವುವು ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ನೀವೇನಾದರೂ ಹೊಸ ಬೈಕ್ ಖರೀದಿಸಲು ಯೋಜನೆ ಹಾಕಿಕೊಂಡರೆ, ವಿನ್ಯಾಸ ಅಥವಾ ಕಾರ್ಯಕ್ಷಮತೆಯ ಜೊತೆಗೆ ವಾಹನದ ಬೆಲೆಯ ಕಡೆ ನಿಮ್ಮಗೂ ನೀವು ಗಮನಹರಿಸುತ್ತೀರಿ. ಈ ಎಲ್ಲಾ ಲಕ್ಷಣಗಳನ್ನು ಪಡೆದ ಟಾಪ್ 5 ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.

  • ಸುದ್ದಿ

    ನಟ ಅಜಯ್ ರಾವ್ ಮಗಳ ಹುಟ್ಟು ಹಬ್ಬಕ್ಕೆ ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಅದ್ದೂರಿ ಗಿಫ್ಟ್ ಏನು ಗೊತ್ತಾ,?

    ನಟ ಅಜಯ್ ರಾವ್ ಮತ್ತು ಸ್ವಪ್ನಾ ಇಬ್ಬರು  ಮದುವೆಯಾಗಿದ್ದು 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಅಜಯ್ ರಾವ್ ಪತ್ನಿ  ಸ್ವಪ್ನಾ  ಹೊಸಪೇಟೆಯವರು. ಇವರಿಬ್ಬರದು ಲವ್ ಕಮ್ ಅರೇಂಜ್ ಮ್ಯಾರೇಜ್‌ ಆಗಿದ್ದು. ಸ್ವಪ್ನಾ ಡಿಪ್ಲೋಮಾ ಪಧವಿ ಪಡೆದಿದ್ದಾರೆ. ಅಜಯ್ ರಾವ್ ‘ಎಕ್ಸ್‌ಕ್ಯೂಸ್‌ಮೀ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದರು.’ಕೃಷ್ಣನ ಲವ್ ಸ್ಟೋರಿ, ಕೃಷ್ಣನ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ, ಕೃಷ್ಣ ಸನ್ ಆಫ್ ಸಿಎಂ, ಸೆಕೆಂಡ್ ಹ್ಯಾಂಡ್ ಲವರ್, ಜೈ ಭಜರಂಗಬಲಿ’ ಸಿನಿಮಾಗಳಲ್ಲೂ ಕೃಷ್ಣ ನಟಿಸಿದ್ದರು. ಕಳೆದ ವರ್ಷ ನವೆಂಬರ್ 21ಕ್ಕೆ…