ದಿನನಿತ್ಯ ವ್ಯಾಯಾಮ, ಡಯಟ್, ಕಟ್ಟುನಿಟ್ಟಾದ ಆಹಾರ ಮಾಡಿದರೂ ಸಹ ಬೊಜ್ಜು ಕರಗುವುದಿಲ್ಲ. ಹಲವು ಪ್ರಯತ್ನ ಮಾಡಿದರು ಕೆಲವರಿಗೆ ಬೊಜ್ಜು ಕರಗಿಸಲು ಹಾಗುವುದಿಲ್ಲ. ಆದರೆ ಕೆಲವು ಹಣ್ಣುಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದೆ. ಹೌದು ನಿಮಗೆ ಇಷ್ಟವಾದ ರುಚಿಕರವಾದ ಕೆಲವು ಹಣ್ಣುಗಳಿಂದ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಈಗ ನಾವು ದಿನನಿತ್ಯ ಸೇವನೆ ಮಾಡುವ ಕೊಬ್ಬು ಕರಗಿಸುವ ಹಣ್ಣುಗಳ ಮಾಹಿತಿಯನ್ನ ತಿಳಿಯೋಣ.
ಬಾಳೆಹಣ್ಣು : ಬಾಳೆಹಣ್ಣು ಹಸಿವನ್ನು ಕಡಿಮೆ ಮಾಡಿ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಅಲ್ಲದೆ ಬಾಳೆಹಣ್ಣಿನಲ್ಲಿ ಫೈಬರ್ ಮತ್ತು ಪೊಟ್ಯಾಶಿಯಮ್ ನಂತಹ ಖನಿಜಗಳು ಸಮೃದ್ಧವಾಗಿವೆ. ಆರೋಗ್ಯಕರವಾಗಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ಪೇರಲೆಹಣ್ಣು : ತೂಕವನ್ನು ಕಡಿಮೆ ಮಾಡಿಕೊಳ್ಳಲು ರುಚಿಕರವಾದ ಈ ಹಣ್ಣು ಪೇರಲೆ ಕೂಡ ಸಹಾಯ ಮಾಡುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಆದ್ದರಿಂದ ಮಧುಮೇಹಿಗಳು ಸಹ ಇದನ್ನು ಸೇವಿಸಬಹುದು. ಈ ಪೇರಲೆ ಹಣ್ಣು ತೂಕವನ್ನು ನಷ್ಟ ಹಾಗೂ ಆರೋಗ್ಯಕರ ತಿಂಡಿ ಎನ್ನಲಾಗುತ್ತದೆ.
ಕಿತ್ತಳೆಹಣ್ಣು : ಆರೋಗ್ಯಕರವಾಗಿ ತೂಕವನ್ನು ನಷ್ಟಮಾಡಿಕೊಳ್ಳಲು ಬಯಸುವವರಿಗೆ ಕಿತ್ತಳೆ ಹಣ್ಣು ಸಹಾಯಕಾರಿ. ಇದರಲ್ಲಿ ಫೈಬರ್ ಸಮೃದ್ಧವಾಗಿ ಪೆಕ್ಟಿನ್, ಲಿಗ್ನಿನ್ ಮತ್ತು ಸೆಲ್ಯುಲೋಸ್ ಎಂಬ ಪದಾರ್ಥಗಳಿರುತ್ತವೆ. ಕಿತ್ತಳೆ ಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ನಿವಾರಣೆ ಮಾಡಿ ಹೊಟ್ಟೆ ಹುಬ್ಬುವುದನ್ನು ಕಡಿಮೆಮಾಡುತ್ತದೆ.
ಸ್ಟ್ರಾಬೆರಿ : ವಿಟಮಿನ್ ಸಿ, ಫೈಬರ್ , ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಮ್ ನಂತಹ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಚಯಾಪಚಯ ಕ್ರಿಯೆಗೆ, ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.
ಪ್ಲಮ್ : ಸಿಹಿ ರುಚಿಗೆ ಹೆಸರುವಾಸಿಯಾದ ಪ್ಲಮ್ ಪೌಷ್ಠಿಕಾಂಶದಿಂದ ತುಂಬಿರುತ್ತದೆ. ಇದರಲ್ಲಿ ಹೆಚ್ಚಿನ ಮಟ್ಟದ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸೇರಿವೆ. ದೇಹವನ್ನು ಹೈಡ್ರೇಟ್ ಮಾಡಲು, ತೂಕ ಇಳಿಸಲು ಬಯಸುವವರು ಈ ಹಣ್ಣನ್ನು ಸೇವಿಸಬಹುದು.
ಅನಾನಸ್ : ತೂಕ ಇಳಿಸುವ ಹಣ್ಣುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಅನಾನಸ್. ಇದು ಫೈಬರ್ ನಿಂದ ಕೂಡಿದ್ದು, ಉತ್ತಮ ಜೀರ್ಣಕ್ರಿಯೆಗೆ, ಸುಲಭವಾಗಿ ವಿಷ ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ಹಸಿವನ್ನೂ ನೀಗಿಸುತ್ತದೆ.
ಕಲ್ಲಂಗಡಿ : ಕಲ್ಲಂಗಡಿ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದ್ದು, 90% ನಷ್ಟು ನೀರಿನ ಅಂಶವನ್ನು ಹೊಂದಿರುತ್ತದೆ. ಇದರಲ್ಲಿ ಅಮೈನೊ ಆಸಿಡ್ ಅರ್ಜಿನೈನ್ ಎಂಬ ಏಜೆಂಟ್ ಇದ್ದು, ಪರಿಣಾಮಕಾರಿಯಾಗಿ ಕೊಬ್ಬು ಸುಡಲು ಸಹಾಯ ಮಾಡುತ್ತದೆ.
ಟೊಮೆಟೊ : ಕೊಬ್ಬನ್ನು ಕಡಿಮೆ ಮಾಡುವ ಹಣ್ಣುಗಳಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊದಲ್ಲಿ ಪ್ರಮುಖ ಅಮೈನೋ ಆಮ್ಲಗಳು, ಫೈಬರ್ ಮತ್ತು ಇತರ ಪೋಷಕಾಂಶಗಳಿದ್ದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಉತ್ತಮ ಪ್ರಮಾಣದ ಸಿಟ್ರಿಕ್ ಆಮ್ಲವನ್ನು ಸಹ ಹೊಂದಿದ್ದು, ಪರಿಣಾಮಕಾರಿಯಾಗಿ ಕೊಬ್ಬನ್ನು ಸುಡುತ್ತದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪಯಣ ಮಾಡಬೇಕೆಂಬ ಅಸೆ ಎಲ್ಲರಿಗೂ ಕೂಡ ಇರುತ್ತದೆ, ಗಗನದಲ್ಲಿ ಒಮ್ಮೆ ಪ್ರಯಾಣ ಬೆಳೆಸಿ ಆ ಮಧುರ ಕ್ಷಣವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ ಕೂಡ ಪ್ರತಿಯೊಬ್ಬರಿಗೆ ಇರುತ್ತದೆ. ನಮ್ಮ ದೇಶದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಪರ್ಕ ಬೆಳೆಸಲು ಅದು ಕೂಡ ಕಡಿಮೆ ಅವಧಿಯಲ್ಲಿ ಈ ದೂರ ಕ್ರಮಿಸಲು ವಿಮಾನಯಾನ ಬಹು ಲಾಭಕರ. ಕೇವಲ ಪ್ರಯಾಣಿಕರು ಮಾತ್ರವಲ್ಲ ಸರಕುಗಳು ಕೂಡ ಸಾಗುತ್ತವೆ ಈ ಯಾನದಲ್ಲಿ, ಇನ್ನು ವಿಮಾನ ಎಂದಾಗ ನೆನಪಾಗುವುದು ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರ…
ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೀತಿಯಲ್ಲಿ ಬಿದ್ದವರು ಪ್ರೇಮಿಗಳ ದಿನ ಆಚರಣೆಗೆ ತಯಾರಿ ನಡೆಸುತ್ತಿದ್ದರೆ ಇನ್ನು ಕೆಲವರು ಪ್ರೇಮ ಪರೀಕ್ಷೆಗೆ ಸಿದ್ಧವಾಗ್ತಿದ್ದಾರೆ. ತಮ್ಮ ಹೃದಯ ಕದ್ದವರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ನಿಜವಾದ ಪ್ರೀತಿ ಸಿಗಬೇಕೆಂದ್ರೆ ಅದೃಷ್ಟ ಕೂಡ ಚೆನ್ನಾಗಿರಬೇಕು. ಈ ಬಾರಿ ಫೆಬ್ರವರಿ 14ರಂದು ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ. ಅವ್ರಿಗೆ ನಿಜವಾದ ಪ್ರೀತಿ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಪ್ರೇಮಿಗಳ ದಿನ ವೃಷಭ ರಾಶಿಯವರಿಗೆ ಖುಷಿ ತರಲಿದೆಯಂತೆ. ವೃಷಭ ರಾಶಿಯವರು…
ಹೆದ್ದಾರಿಗಳ ಮೇಲೆ ಬಿಳಿ, ಹಳದಿ ಬಣ್ಣಗಳಲ್ಲಿ ಹಾಕುವ ಹಲವು ವಿಧದ ಪಟ್ಟೆಗಳನ್ನು ಸಹ ಎಲ್ಲರೂ ನೋಡಿಕೊಂಡು ಹೋಗಬೇಕು. ಇಷ್ಟಕ್ಕೂ ಆ ಪಟ್ಟೆಗಳನ್ನು ಯಾಕೆ ಹಾಕುತ್ತಾರೆ? ಅವುಗಳ ಉಪಯೋಗವೇನು ಎಂದು ಈಗ ತಿಳಿದುಕೊಳ್ಳೋಣ.
ಶಾಸಕ ಆನಂದ್ಸಿಂಗ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ನಲ್ಲಿ ಅಸಮಾಧಾನಗೊಂಡಿರುವ ಇನ್ನಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರದೊಳಗೆ 8ರಿಂದ 13 ಮಂದಿ ಶಾಸಕರು ಯಾವುದೇ ಕ್ಷಣದಲ್ಲಾದರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಆಪರೇಷನ್ ಕಮಲ ಆಷಾಢ ಪರ್ವ ಆರಂಭವಾಗಿದೆ. ಶಾಸಕರಾದ ಪ್ರತಾಪ್ಗೌಡ ಪಾಟೀಲ್(ಮಸ್ಕಿ), ಬಸವರಾಜ್ ದದ್ದಲ್ (ರಾಯಚೂರು ಗ್ರಾಮೀಣ), ಬಿ.ಸಿ.ಪಾಟೀಲ್ (ಹಿರೇಕೆರೂರು), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ಕುಮಟಳ್ಳಿ (ಅಥಣಿ), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಜೆ.ಗಣೇಶ್ (ಕಂಪ್ಲಿ),…
ಬೆಳ್ಳಂಬೆಳಗ್ಗೆ ತಿಂಡಿ ಏನ್ಮಾಡೋದಪ್ಪಾ ಅಂತಾ ಯೋಚಿಸ್ತಿದ್ದೀರಾ? ಈಗ ಸೀಸನ್ ಚೇಂಜ್ ಆಗ್ತಿದೆ. ಕಫ ನೆಗಡಿ ಸಮಸ್ಯೆ ಇದ್ದದ್ದೇ. ಈಗಿನ ಬದಲಾಗುತ್ತಿರುವ ಹವಾಗುಣಕ್ಕೆ ಬೆಳಗಿನ ತಿಂಡಿಗೆ ಇದನ್ನು ಮಾಡಿ ಮನೆಮಂದಿಯ ಆರೋಗ್ಯ ಕಾಪಾಡಿ. ಹುರುಳಿಕಾಳು ಈ ಹವಾಗುಣಕ್ಕೆ ಹೇಳಿಮಾಡಿಸಿದ ಧಾನ್ಯ. ಕಫ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ. ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ….
ಪ್ರೀತಿ ಅನ್ನೋದು ನಿಸ್ವಾರ್ಥವಾಗಿರಬೇಕು. ಈ ವಾಕ್ಯಕ್ಕೆ ತಕ್ಕಂತಹ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಲಿ ಅಂತಾ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಇದರ ಜೊತೆಗೆ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಮಗುವನ್ನು ಉಡುಗೊರೆಯಾಗಿ ನೀಡಿದ್ದಾನೆ. ಬಿಹಾರದ ಭಗಲ್ಪುರ ಜಿಲ್ಲೆಯ ನಿವಾಸಿ ನಾಲ್ಕು ವರ್ಷಗಳ ಹಿಂದೆ, ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಮಗುವಿತ್ತು. ಆದ್ರೆ ಕೆಲ ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಸಿಲುಕಿ ಪತಿ ಜೈಲಿಗೆ ಹೋಗಿದ್ದನು. ಈ ಸಂದರ್ಭದಲ್ಲಿ ಆತನ…