ಸುದ್ದಿ, ಸ್ಪೂರ್ತಿ

100 ರೂ.ಗೆ ರೆಡಿಯಾಗುತ್ತೆ ಶಾಲಾ ಸಮವಸ್ತ್ರ. ಟೈಲರ್ ಆದ್ರೂ ಸಮಾಜಮುಖಿ ಸೇವೆ 5 ವರ್ಷದಲ್ಲಿ 30 ಸಾವಿರಕ್ಕೂ ಹೆಚ್ಚು ಯೂನಿಫಾರ್ಮ್.

90


ಚಾಮರಾಜನಗರ ತಾಲೂಕಿನ ಚಂದಕವಾಡಿ ನಿವಾಸಿ ಟೈಲರ್ ಎಸಾಬುಲ್ಲಾ ಖಾನ್ ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡಿಕೊಂಡಿದ್ದಾರೆ. ಹುಡುಗರಿಗೆ ಅಂಗಿ, ನಿಕ್ಕರ್ ಮತ್ತು ಬಾಲಕಿಯರಿಗೂ ಡ್ರೆಸ್ ಹೊಲಿದು ಕೊಡುತ್ತಿದ್ದಾರೆ. ಪ್ರತಿ ಸರ್ಕಾರಿ ಶಾಲೆಗೆ ಕೂಡ ತಾವೇ ಖುದ್ದಾಗಿ ಭೇಟಿ ನೀಡಿ ಮಕ್ಕಳಿಂದ ಬಟ್ಟೆಯ ಅಳತೆ ಪಡೆದುಕೊಳ್ಳುತ್ತಾರೆ. 5 ವರ್ಷದಿಂದ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿದು ಕೊಟ್ಟಿದ್ದಾರೆ. ಪ್ರತಿ ವರ್ಷ 5 ರಿಂದ6 ಸಾವಿರ ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಯುತ್ತಿದ್ದಾರೆ.

ಬೇರೆಯವರ ಬಳಿ ಒಂದು ಜೊತೆ ಬಟ್ಟೆ ಹೊಲಿಸಬೇಕೆಂದ್ರೆ 300 ರಿಂದ 400 ರೂ. ನೀಡಬೇಕು. ಎಸಾಬುಲ್ಲಾ ಖಾನ್ 100 ರೂಪಾಯಿಗೆ ಬಟ್ಟೆ ಹೊಲಿದು ಕೊಡ್ತಿರೋದು ಅವರ ಸೇವಾ ಮನೋಭಾವ ತೋರಿಸುತ್ತದೆ. ಶಾಲಾ ಮಕ್ಕಳು 100 ಜನ ಇದ್ದರೆ, ಅದರಲ್ಲಿ 10 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಟ್ಟೆ ಹೊಲಿದು ಕೊಡುತ್ತಾರೆ. 

ಇವರಿಗೆ ಮಕ್ಕಳು ಸಮವಸ್ತ್ರ ಧರಿಸಿ ಹೋಗಬೇಕು ಎಂಬುದು ಆಸೆ. ಸರ್ಕಾರ ಮಕ್ಕಳಿಗೆ ಉಚಿತವಾಗಿ ಬಟ್ಟೆ ನೀಡುತ್ತೆ, ಆದ್ರೆ ನೂರಾರು ರೂಪಾಯಿ ಖರ್ಚು ಮಾಡಿ ಸಮವಸ್ತ್ರ ಹೊಲಿಸೋದು ಬಡ ಕುಟುಂಬಗಳಿಗೆ ಹೊರೆಯಾಗಿತ್ತು. ಬಡ ಕುಟುಂಬಗಳ ಮನದಾಳ ಅರಿತ ಎಸಾಬುಲ್ಲಾ ಕಡಿಮೆ ಬೆಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ಹೊಲಿಯಲು ಮುಂದಾದರು. ಕಳೆದ ಐದು ವರ್ಷಗಳಿಂದ ಎಸಾಬುಲ್ಲಾ ಕೇವಲ ನೂರು ರೂಪಾಯಿಗೆ ಸಮವಸ್ತ್ರ ಸಿದ್ಧ ಮಾಡಿಕೊಡುತ್ತಿದ್ದಾರೆ. ಈ ಬಟ್ಟೆ ಹೊಲಿಯುವ ಕಾಯಕದ ಮೂಲಕ 10 ಜನ ಮಹಿಳೆಯರಿಗೆ ಅನ್ನದಾತರಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಉಡುಪಿಯ ಅರಬ್ಬೀ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ…..ಕಾರಣ?

    ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ. ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ…

  • God

    ಧರ್ಮಸ್ಥಳ ಮಂಜುನಾಥನನ್ನು ನೆನೆಯುತ್ತಾ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Monday, November 22, 2021) ಮೇಷರಾಶಿಯಲ್ಲಿ ಹುಟ್ಟಿದವರಲ್ಲಿ ನಿಮ್ಮ ಅಸೂಯೆ ವರ್ತನೆ ನಿಮ್ಮನ್ನು ದುಃಖಿಗಳಾಗಿಯೂ ಮತ್ತು ಖಿನ್ನರಾಗಿಯೂ ಮಾಡಬಹುದು. ಆದರೆ ಇದು ಒಂದು ಸ್ವಯಂಕೃತ ಗಾಯವಾಗಿರುವುದರಿಂದ ಇದರ ಬಗ್ಗೆ ಪ್ರಲಾಪಿಸುವ ಅಗತ್ಯವಿಲ್ಲ. ಇತರರ ಸಂತೋಷ ಮತ್ತು ಅತೃಪ್ತಿಯನ್ನು ಹಂಚಿಕೊಳ್ಳುವ ಮೂಲಕ ಇದನ್ನು ತೊಡೆದುಹಾಕಲು ಪಣತೊಡಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ….

  • ಸುದ್ದಿ

    ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೀವು ಎಂದಾದರೂ ನೋಡಿದ್ದೀರಾ?ಅಲ್ಲಿನ ಅದ್ಬುತ ವಿಶೇಷತೆಗಳೇನು ಗೊತ್ತಾ,…

    ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಬಹಳ ಅದ್ಭುತವಾಗಿದೆ ಎಂದು ಹೇಳಲಾಗಿದೆ . ಎಲ್ಲಿದೆ ಈ ರಾಮಮಂದಿರ? : ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ,…

  • ಉಪಯುಕ್ತ ಮಾಹಿತಿ

    ಬೆಳೆ ದರ್ಶಕ್-2020ಆಪ್

    ಜಿಲ್ಲೆಯಲ್ಲಿ ಈಗಾಗಲೇ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಜಿ.ಪಿ.ಎಸ್. ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆಗಳ ವಿವರಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಹೀಗೆ ಅಪ್ಲೋಡ್ ಮಾಡಿದ ಬೆಳೆ ಸಮೀಕ್ಷೆಯ ವಿವರ ರೈತರು ಪಡೆಯಲು ಕೃಷಿ ಇಲಾಖೆ ಬೆಳೆ ದರ್ಶಕ್-2020 ಆಪ್ ಬಿಡುಗಡೆ ಮಾಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ.ಶೇಖ್ ಅವರು ತಿಳಿಸಿದ್ದಾರೆ. ಬೆಳೆ ದರ್ಶಕ್-2020 ಹೆಸರಿನ ಈ ಆಪ್ ಮೂಲಕ ರೈತರು ಅಪ್ಲೋಡ್ ಆಗಿರುವ ತಮ್ಮ ಬೆಳೆಯ ವಿವರ ಮಾಹಿತಿ ಪಡೆಯಬಹುದು. ಅಲ್ಲದೇ…

  • ವ್ಯಕ್ತಿ ವಿಶೇಷಣ

    10ನೇ ತರಗತಿ ಬಾಲಕನ, ಈ ಸಾಧನೆ ಬಗ್ಗೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ! ತಿಳಿಯಲು ಈ ಲೇಖನಿ ಓದಿ…

    ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ. ಆದ್ರೆ ಈ ಹಾರ್ಟ್ ಅಟ್ಯಾಕ್ ಬರೋ ಮುನ್ಸೂಚನೆ ಮೊದ್ಲೇ ನಮ್ಗೆ ಗೊತ್ತಾದ್ರೆ ಹೇಗಿರುತ್ತೆ ಗೊತ್ತಾ?