ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಳೆ ನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ. ತಮ್ಮ ತಮ್ಮ ವಾಟ್ಸಪ್ ಗ್ರೂಪ್ನ ಸ್ನೇಹಿತರೆಲ್ಲ ಒಂದಾಗಿ ನೆರೆ ಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದ್ದಾರೆ.

ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್ ಸೇಲ್ ದರದಲ್ಲಿ ವಿತರಣಾ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಒಂದು ತಂಡ ನೆರೆ ಪೀಡಿತ ಜಿಲ್ಲೆಗೆ ತಲುಪಿದ್ದಾರೆ. ಮೊದಲಿಗೆ ಹಾವೇರಿಯ ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದ್ದು, ಸೋಮುವಾರ ಬೆಳಗಾವಿ ಜಿಲ್ಲೆಯಲ್ಲಿ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ಮಾಹಿತಿನೀಡಿದ್ದಾರೆ.

ಒಂದು ವಿದ್ಯಾರ್ಥಿಗೆ ಒಂದು ಬ್ಯಾಗ್, ನೀರಿನಬಾಟೆಲ್ ಮತ್ತು ಜಾಮೆಟ್ರಿ ಬಾಕ್ಸ್ ಎಂಟು ನೂರು ರೂಪಾಯಿಯಂತೆ ಒಟ್ಟು ಮುನ್ನೂರು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಪ್ರೈಂ ಕ್ಲಬ್ ಮತ್ತು ಗೆಳೆಯರ ಸಂಯುಕ್ತ ಆಶ್ರಯದಲ್ಲಿ ಮಾಡುತ್ತಿರುವ ಕೆಲಸಕ್ಕೆ ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ಕೂಡ ಸಂತಸ ವ್ಯಕ್ತಪಡಿಸಿದ್ದು, ಯುವಕರ ತಂಡದ ಸಮಾಜ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವಪ್ಪ, ಪ್ರೈಂ ಕ್ಲಬ್ ಸದಸ್ಯರಾದ ಅಶೋಕ್ ಗೌಡ, ಜಾಯ್ಬ್ರಿಗಾಂಝ, ಮೋಹನ್ ಮತ್ತು ಮಹಮದ್ಶಫಿ ಸೇರಿದಂತೆ ಇತರರು ಹಾಜರಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಬ್ಬಬ್ಬಾ ಎಂದರೆ ಒಂದು ಕೋಣದ ಬೆಲೆ ಎಷ್ಟಿರಬಹುದು? ಒಂದು3 ಲಕ್ಷ , ಇಲ್ಲಾ 10 ಲಕ್ಷ. ಆದರೆ ಈ ಕೋಣದ ಬೆಲೆ ಕೇಳಿದರೆ ನಿಮಗೆ ತಲೆ ತಿರುಗಿ ಬೀಳುವುದು ಖಂಡಿತ ಕೋಣ ವ್ಯಾಪಾರದ ಪುಷ್ಕರ್ ಮೇಳದಲ್ಲಿ ಕಂಗೊಳಿಸಿದ ಈ ಕೋಣದ ಬೆಲೆ ಬರೋಬ್ಬರಿ 14 ಕೋಟಿ ರೂ.! ಪುಷ್ಕರ್ ಜಾತ್ರಗೆ ಬಂದ 14 ಕೋಟಿರೂ. ಮೌಲ್ಯದ ಭೀಮ ಕೋಣ ಇದೀಗ ದೇಶದೆಲ್ಲೆಡೆ ಸುದ್ದಿಮಾಡ್ತಿದೆ. ಆರು ವರ್ಷದ ಕೋಣವಾಗಿದ್ದು, 1,300 ಕೆ.ಜಿ.ತೂಕ ಹೊಂದಿದೆ. ಈ ವಿಶಿಷ್ಟ ಕೋಣವನ್ನು ಜೋಧಪುರದಿಂದ…
ಲಟಿಕೆ ತಗೆಯದ ವ್ಯಕ್ತಿ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಲಟಿಕೆ ಎಲ್ಲರೂ ತೆಗೆಯುತ್ತಾರೆ, ಇನ್ನು ಕೆಲವರು ಕೈ ಕಾಲು ಬೆರಳುಗಳ ನೋವಿನಿಂದ ಲಟಿಕೆ ತೆಗೆದರೆ ಇನ್ನು ಕೆಲವರು ಲಟಿಕೆಯ ಶಬ್ದವನ್ನ ಕೇಳಲು ಲಟಿಕೆ ತೆಗೆಯುತ್ತಾರೆ. ಇನ್ನು ಕೆಲವರಿಗೆ ಈ ಲಟಿಕೆ ತೆಗೆಯುವುದು ಒಂದು ತರಾ ಚಟ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಕೆಲವು ಜನರು ಇಡೀ ಹೊತ್ತು ಕೈ ಮತ್ತು ಕಾಲುಗಳ ಲಟಿಕೆ ತೆಗೆಯುತ್ತಲೇ ಇರುತ್ತಾರೆ ಮತ್ತು…
ಇತ್ತೀಚೆಗಷ್ಟೇ ಮುಂಬೈನ ಕಮಲಾ ಮಿಲ್ಸ್’ನಲ್ಲಿ ಅಗ್ನಿ ದುರಂತ ನಡೆದಿದ್ದು, ಸರಿ ಸುಮಾರು 14 ಮಂದಿ ಪ್ರಾಣ ಕಳೆದುಕೊಂಡು, ತುಂಬಾ ಚರ್ಚೆಗೆ ಕಾರಣವಾಗಿದೆ.ಇದೇ ಸಮಯದಲ್ಲಿ ಒಬ್ಬ ಪೋಲೀಸ್ ಪೇದೆ ರಿಯಲ್ ಹಿರೋನಂತೆ ಮಾಡಿರುವ ಸಾಹಸ, ನಿಜಕ್ಕೂ ಮೈ ಜುಮ್ಮೆನಿಸುವನ್ತಾಗಿದ್ದು,ಅದರಲ್ಲಿನ ಒಂದು ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.
ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅಂತ ತಿಳಿಯೋಣ. * ಡ್ರಾಗನ್ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯಕ್ಕೆ ಪ್ರಯೋಜನವಾಗುವಂತೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಪುನಃ ಸ್ಥಾಪಿಸಲು ನೆರವಾಗುತ್ತದೆ. * ಜೀರ್ಣಕಾರಿ ತೊಂದರೆಗಳಿಂದ ಬಳಲುತ್ತಿದ್ದರೆ, ಈ ಹಣ್ಣುಗಳನ್ನು ತಿನ್ನಬಹುದು. ಇದರಲ್ಲಿರುವ ಫೈಬರ್ ಅಂಶ ಕಳಪೆ…
ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .
ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.