News

ಸುದ್ದಿ

ಬಿಗ್ ಶಾಕಿಂಗ್!ತರಗತಿಯಲ್ಲೇ ಕುಡಿದು ರಂಪಾಟ ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿನಿಯರು…

214

ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲಿ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಜಯವಾಡ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

9ನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ.

ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್ ಬೆರೆಸಿಕೊಂಡು ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುವಾಗಲೇ ಸೇವಿಸಿದ್ದಾರೆ. ಮದ್ಯ ಸೇವನೆ ಬಳಿಕ ತರಗತಿಯಲ್ಲಿ ತೂರಾಡುತ್ತಾ ಏನೇನೋ ಮಾತನಾಡಲು ಶುರು ಮಾಡಿದ್ದು, ಅನುಮಾನಗೊಂಡ ಶಿಕ್ಷಕರು ಬಾಟಲಿಯನ್ನು ಪಡೆದು ಮೂಸಿ ನೋಡಿದ್ದಾರೆ.

ನಂತರ ಜ್ಯೂಸ್ ಬಾಟಲನ್ನು ಕಿತ್ತುಕೊಂಡು ಪರಿಶೀಲಿಸಿದಾಗ ಮದ್ಯ ಮಿಕ್ಸ್ ಆಗಿರುವುದು ಪತ್ತೆಯಾಗಿದೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿ ತಕ್ಷಣ ಇಬ್ಬರು ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಿದೆ.

ಸಿಕ್ಕಿ ಬಿದ್ದಿರುವ ವಿದ್ಯಾರ್ಥಿನಿಯರು, ಪ್ರತಿದಿನ ನಮ್ಮ ತಂದೆ ಮನೆಯಲ್ಲಿಯೇ ಕುಡಿಯುತ್ತಾರೆ. ಒಮ್ಮೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಬಾಟಲ್ ತೆಗೆದುಕೊಂಡು ಕುಡಿದಿದ್ದೆವು. ಬಳಿಕ ನಮಗೂ ಅದು ಹವ್ಯಾಸವಾಗಿ ಬೆಳೆಯಿತು” ಎಂದು ವಿದ್ಯಾರ್ಥಿನಿಯರು ಹೇಳಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ