News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
5 ಬಾರಿ ಶಾಸಕರಾಗಿ ಗೆದ್ದ ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಈ ವ್ಯಕ್ತಿಯಿಂದ ರಾಜಕೀಯ ನಾಯಕರು ಕಲಿಯಬೇಕು
ಉತ್ತಮ ಆರೋಗ್ಯ ಟಿಪ್ಸ್
ಸುದ್ದಿ

ಟಿಕ್‌ಟಾಕ್‌ಗೆ ಮತ್ತೊಂದು ಬಲಿ : ಕೋಲಾರದಲ್ಲಿ ಕೃಷಿ ಹೊಂಡದ ಬಳಿ ವಿಡಿಯೋ ಮಾಡಲು ಹೋಗಿ ವಿದ್ಯಾರ್ಥಿನಿ ಸಾವು…!

41

ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್​​ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್​ಟಾಕ್​ ಆ್ಯಪ್​ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ತುಮಕೂರಿನಲ್ಲಿ ಯುವಕನೊರ್ವ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇದೀಗ ಕೋಲಾರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಟಿಕ್​ಟಾಕ್​ ಕ್ರೇಜ್​​ಗೆ ಬಲಿಯಾಗಿದ್ದಾಳೆ.


ಮಾಲಾಗೆ ವಿಪರೀತ ಟಿಕ್​ಟಾಕ್​ ಗೀಳು ಅಂಟಿಕೊಂಡಿತ್ತು. ಹೀಗಾಗಿ ಕೂತಲ್ಲಿ ನಿಂತಲ್ಲಿ ಟಿಕ್​ಟಾಕ್​ ಚಿತ್ರೀಕರಿಸುತ್ತಿದ್ದಳು. ಇದೇ ರೀತಿ ಅಪಾಯಕಾರಿ ಕೃಷಿ ಹೊಂಡದ ಬಳಿ ಟಿಕ್​ಟಾಕ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ ಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಕೃಷಿ ಹೊಂಡದ ಬಳಿ ಟಿಕ್‌ ಟಾಕ್ ವೀಡಿಯೋ ಚಿತ್ರೀಕರಿಸೋ ವೇಳೆ ವಿದ್ಯಾರ್ಥಿನಿ ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಮಾಲಾ ಮೃತಪಟ್ಟಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ

ಇತ್ತೀಚಿಗಷ್ಟೇ ತುಮಕೂರಿನ ಚಿಕ್ಕನಾಯಕನಹಳ್ಳಿಯ ಯುವಕನೊರ್ವ ಗೋಡೆಕೆರೆ ಗ್ರಾಮದಲ್ಲಿ ವೀಡಿಯೋ ಸ್ಟಂಟ್‌ ಮಾಡಲು ಹೋಗಿದ್ದ ಕುಮಾರ್‌ ಎಂಬವರು ಕತ್ತು, ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಇದೇ ರೀತಿ ದೇಶದಾದ್ಯಂತ ಟಿಕ್​ಟಾಕ್​ ಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.


ಒಟ್ಟಾರೆ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ ಆ್ಯಪ್‌ಗಳಲ್ಲಿ ಒಂದಾಗಿರುವ ಟಿಕ್‌ ಟಾಕ್‌ ಹೆಚ್ಚು ಕುಖ್ಯಾತಿ ಪಡೆದುಕೊಳ್ಳುತ್ತಿದೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ