ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ :ಅಂಬರೀಶ್ ನಂತರ ಶಿವಣ್ಣರಿಗೆ ಅಪ್ಪಾಜಿ ಸ್ಥಾನ ಕೊಟ್ಟಿದ್ಯಾಕೆ? ದರ್ಶನ್ ಹೇಳಿದ ಈ ಮಾತುಗಳನ್ನು ಕೇಳಿ,

50

ಸ್ಯಾಂಡಲ್ ವುಡ್ ದಿಗ್ಗಜ ನಟರಿಬ್ಬರು (ದರ್ಶನ್ ಮತ್ತು ಶಿವಣ್ಣ) ಒಂದೇ ವೇದಿಕೆಯಲ್ಲಿ ಇಂದು ಸಿನಿಮಾ ಒಂದರ ಮೂಹೂರ್ತದಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಣ್ಣಾವ್ರ ಸಂಬಂಧಿಕರು ಪಾರ್ವತಮ್ಮ ರಾಜಕುಮಾರ್ ಸಹೋದರಿಯ ಮಗ ಆಗಿರುವ ಧ್ರುವನ್ ಅವರ ಚಿತ್ರಕ್ಕೆ  ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ನಡೆದಿದ್ದು ಅಲ್ಲಿ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಡಿ ಬಾಸ್ ದರ್ಶನ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ನೋಡುಗರನ್ನು ಅಚ್ಚರಿ ಪಡುವಂತೆ ಮಾಡಿತು.‌ ಧ್ರುವನ್ ಅವರು‌ ನಟಿಸುವ ಈ ಚಿತ್ರಕ್ಕೆ ಶಿವಣ್ಣ ಕ್ಲಾಪ್ ಮಾಡಿದರೆ ದಚ್ಚು ಕ್ಯಾಮೆರಾ ಆನ್ ಮಾಡಿ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು.

ಆ ಸಂದರ್ಭದಲ್ಲಿ ಶಿವಣ್ಣ ಹಾಗೂ ದರ್ಶನ್ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಮಾಧ್ಯಮದವರು ಇಬ್ಬರೂ ಒಟ್ಟಿಗೆ ನಟಿಸುವಿರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ಇಬ್ಬರಿಗೂ ಹೊಂದಿಕೆ ಆಗುವಂತಹ‌ ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಒಟ್ಟಾಗಿ ನಟಿಸುತ್ತೇವೆ ಎಂದು ಹೇಳಿದರೆ. ದರ್ಶನ್ ಅವರು ನಮ್ಮಿಬ್ಬರನ್ನೂ ಒಟ್ಟಾಗಿ ಸಿನಿಮಾದಲ್ಲಿ ಸರಿ ತೋಗಿಸುವಂತಹ (ಹ್ಯಾಂಡಲ್) ನಿರ್ದೇಶಕರು ಯಾರೂ ಇಲ್ಲ? ಅಂತಹ ನಿರ್ದೇಶಕರು ಸಿಕ್ಕರೆ ಖಂಡಿತಾ ಒಟ್ಟಾಗಿ ‌ಸಿನಿಮಾ ಮಾಡುತ್ತೇವೆ ಎಂದರು. ಮಾದ್ಯಮದವರ ಮತ್ತೊಂದು ಪ್ರಶ್ನೆ ಒಟ್ಟಾಗಿ ನಟಿಸಿದರೆ ತಾವಿಬ್ಬರೂ ಲಾಂಗ್ ಅನ್ನು ಯಾರು ಹಿಡಿಯುತ್ತೀರಿ ಎಂದು ಕೇಳಿದರು.

ತಕ್ಷಣ ಪ್ರತಿಕ್ರಿಯೆ ನೀಡಿದ ದಚ್ಚು “ಲಾಂಗ್ ಹಿಡಿಯೋದ್ರಲ್ಲಿ ಶಿವಣ್ಣ ಸೀನಿಯರ್ , ಅವರೇ ಲಾಂಗ್ ಹಿಡಿದರೆ ನಾನು ಅವರ ಹಿಂದೆ ಇರುತ್ತೇನೆ” ಅಪ್ಪಾಜಿ ಬಂದಿರೋದು ವಿಶ್ ಮಾಡಿರೋದು ದೊಡ್ಡ ವಿಷಯ ಅವರು ಬಂದಿದ್ದು ತುಂಬಾ ಖುಷಿ ಎಂದು ಶಿವಣ್ಣರನ್ನು ಸ್ಮರಿಸಿದ ಡಚ್ಚು ಮಾದ್ಯಮಗಳ ಎದುರು ತಮ್ಮ ಅನಿಸಿಕೆ ಬಿಚ್ಚಿಟ್ಟರು. ಈ ಮೂಲಕ ಇಬ್ಬರು ಸ್ಟಾರ್ ನಟರು ಒಟ್ಟಾಗಿ ತೆರೆಯನ್ನು ಹಂಚಿಕೊಳ್ಳಲು ‌ತಮ್ಮಗಳ ಅಭ್ಯಂತರ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಇನ್ನೇನಿದ್ದರೂ ಗಟ್ಟಿ ಎದೆಗಾರಿಕೆಯ ನಿರ್ದೇಶಕರು ಯಾರಾದರೂ ಇವರಿಬ್ಬರಿಗೂ ಹೊಂದಿಕೆ ಆಗುವಂತಹ ಸ್ಕ್ರಿಪ್ಟ್ ತಾಯಾರಿಸಿ ಇವರ ದಿನಾಂಕಕ್ಕೆ ಕಾಯಬೇಕಷ್ಟೇ. ಕಾರಣ ಇಬ್ಬರೂ ಸಹ ಸದ್ಯ ಸಾಕಷ್ಟು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದು ಅವೆಲ್ಲದರ ಚಿತ್ರೀಕರಣ ಮುಗಿದ ಬಳಿಕವಷ್ಟೇ ಹೊಸ ಸಿನಿಮಾದತ್ತ ಅವರಿಬ್ಬರ ಚಿತ್ತ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ಮ್ಯೂಸಿಕ್ ಮಾಂತ್ರಿಕ ಎರ್.ಆರ್ ರೆಹಮಾನ್ ರವರನ್ನು ಭೇಟಿ ಮಾಡಿದ ಹಳ್ಳಿ ಪ್ರತಿಭೆ ಗಂಗಮ್ಮ..!

    ಈಗಾಗಲೇ ಕನ್ನಡದ ಜೀ ವಾಹಿನಿಯ ಸರಿಗಮಪ ಶೋನಲ್ಲಿ ಹಾಡುತ್ತಿರುವ ಕೊಪ್ಪಳದ ಗಂಗಮ್ಮ ಕರ್ನಾಟಕದ ಮನೆ ಮಾತಾಗಿದ್ದಾರೆ.ಈಗ ಇವರು ಮ್ಯೂಸಿಕ್ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಗಂಗಮ್ಮ ಭೇಟಿ ಮಾಡಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಗಂಗಮ್ಮ ಹಾಡಿ ಎಲ್ಲರನ್ನು ಗಮನ ಸೆಳೆದಿರುವುದರ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದು, 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ…

  • ಕರ್ನಾಟಕ

    ನಿಮ್ಮ ಬೆರಳ ತುದಿಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳು ಲಭ್ಯ!ಹೇಗೆ ಅಂತೀರಾ?ಈ ಲೇಖನಿ ಓದಿ….

    ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.

  • ಸುದ್ದಿ

    ರಣಂ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ದುರ್ಮರಣ ಪ್ರಕರಣ- ತನಿಖೆ ನಡೆಸುವವೇಳೆ ಸ್ಫೋಟಕ ಟ್ವಿಸ್ಟ್…….!

    ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.ಶೂಟಿಂಗ್ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಪೇದೆ ಶೂಟಿಂಗ್ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ…

  • ದೇಶ-ವಿದೇಶ

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಈ 999 ಮೆಟ್ಟಿಲೇರಿದರೆ ಸಾಕು..!ತಿಳಿಯಲು ಈ ಲೇಖನ ಓದಿ…

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ…!

  • ಗ್ಯಾಜೆಟ್

    ಈ ಅಪಾಯಕಾರಿ ಆಪ್ಸ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿವೆಯೇ..? ಕೂಡಲೆ ತೆಗೆದುಬಿಡಿ..!

    ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್ ಈಗಾಗಲೆ ಬಹಳಷ್ಟು ಮಾಲ್‌ವೇರ್ ಇರುವ ಆಪ್ಸನ್ನು ಪ್ಲೇಸ್ಟೋರ್‌ನಿಂದ…

  • ಆಧ್ಯಾತ್ಮ, ಜ್ಯೋತಿಷ್ಯ

    ದೀಪಾವಳಿ ಹಬ್ಬದ ಆರಂಭದೊಂದಿಗೆ 28-10-19 ರಿಂದ 4-11-19 ಈ ರಾಶಿಯವರಿಗೆ ರಾಜಯೋಗ ಶುರುವಾಗಲಿದೆ

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ  ಇಂದು ಆರೋಗ್ಯ…