ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಚುನಾವಣಾ ಅಧಿಕಾರಿಗಳು ಅವರ ಫಾರ್ಮ್ ಹೌಸ್ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರ್ಮ್ ಹೌಸ್‍ನಲ್ಲಿ ಚುನಾವಣಾ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಸುಮಾರು ಅರ್ಧ ಗಂಟೆಯ ಕಾಲ ಫಾರ್ಮ್ ಹೌಸ್‍ನಲ್ಲಿರುವ ಇಡೀ ಮನೆ ತಪಾಸಣೆ ಮಾಡಿ ವಾಪಸ್ ಹೋಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇಂದು ಬೆಳಗ್ಗೆ ಸುಮಾರು 10.30ಕ್ಕೆ ಅಧಿಕಾರಿಗಳು ಬಂದಿದ್ದರು. ಸದ್ಯಕ್ಕೆ ಅಧಿಕಾರಿಗಳಿಗೆ ಯಾವ ದಾಖಲಾತಿ ಸಿಕ್ಕಿದೆ ಎಂಬುದು ತಿಳಿದು ಬಂದಿಲ್ಲ. ಚುನಾವಣಾ ಅಧಿಕಾರಿಗಳ ಬಗ್ಗೆ ಆಪ್ತ ಸಹಾಯಕ ಮಾಹಿತಿ ಕೊಟ್ಟಿದ್ದಾರೆ. ಆದರೆ ಅದಕ್ಕೆ ದರ್ಶನ್ ಮಾತ್ರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಫಾರ್ಮ್ ಹೌಸಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿಲ್ಲ. ಚುನಾವಣಾ ಅಧಿಕಾರಿಗಳು ಮಾತ್ರ ಹೋಗಿ ಪರಿಶೀಲನೆ ಮಾಡಿಕೊಂಡು ಬಂದಿದ್ದಾರೆ. ನಮ್ಮ ತೋಟದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ಹೇಳಿದ್ದಾರೆ. ಹೀಗಾಗಿ ಅವರು ಬಂದು ಪರಿಶೀಲನೆ ಮಾಡಿದ್ದಾರೆ. ಅವರು ಬಂದಿರುವ ವಿಚಾರವನ್ನು ನಮ್ಮ ಕೆಲಸಗಾರರು ಫೋನ್ ಮಾಡಿ ನಮಗೆ ಹೇಳಿದರು. ನಾವು ಅವರು ಪರಿಶೀಲನೆ ಮಾಡಿಕೊಂಡು ಹೋಗಲಿ ಎಂದು ಹೇಳಿದ್ವಿ ಎಂದರು.
ಈ ಬಗ್ಗೆ ದರ್ಶನ್ ಅವರಿಗೆ ತಿಳಿಸಿದೆವು. ಅದಕ್ಕೆ ಅವರು ಪರಿಶೀಲನೆ ಮಾಡಿಕೊಂಡು ಹೋಗಲಿ ಎಂದು ಹೇಳಿದರು. ನಾವು ಪ್ರಚಾರ ಮಾಡಿಕೊಂಡು ಮಧ್ಯರಾತ್ರಿ ಹೋಗಿ ರೆಸ್ಟ್ ಮಾಡಿಕೊಂಡು ಬರುತ್ತೇವೆ. ಅಲ್ಲಿ ಪ್ರಾಣಿ-ಪಕ್ಷಿ ಬಿಟ್ಟು ಬೇರೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ. 5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್‌ಗಳಲ್ಲಿ ಪಾಲ್ಗೊಂಡು…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸಾಮಾನ್ಯವಾಗಿ 50 ಕೆಜಿಯ ಒಂದು ಮೂಟೆ ಸಿಮೆಂಟ್’ಗೆ, ಅಮ್ಮಮ್ಮಾ ಅಂದ್ರೆ 300 ರಿಂದ 400ರೂ ವರೆಗೆ ಕೊಡಬಹುದು.ಆದ್ರೆ ಈ ಊರಿನ ಜನ ಒಂದು ಮೂಟೆ ಸಿಮೆಂಟ್’ಗೆ 8000ರೂ ವರೆಗೆ ಕೊಡ್ತಾರೆ. ಹೌದು, ನೀವು ಕೇಳಿದ್ದು ನಿಜ.ಅರುಣಾಚಲ ಪ್ರದೇಶದ ಗ್ರಾಮವೊಂದರ ಜನ 50 ಕೆಜಿಯ ಒಂದು ಮೂಟೆ ಸಿಮೆಂಟ್’ಗೆ ಬರೋಬ್ಬರಿ 8 ಸಾವಿರ ರೂ ಕೊಡುವುದು ಕಂಡು ಬರುತ್ತದೆ. ಕಾರಣ ಏನು ಗೊತ್ತಾ.? ಅಲ್ಲಿ ಸಿಮೆಂಟ್ ಅಭಾವವೇನು ಉದ್ಭವಿಸಿಲ್ಲ. ಸಿಮೆಂಟ್‌ಗೆ ಇಷ್ಟೊಂದು ದುಬಾರಿ…
ವಿಮಾನದಲ್ಲಿ ಪ್ರಯಾಣ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ ಆದರೆ ಕೆಲವರು ಆ ಕನಸನ್ನ ನನಸು ಮಾಡಿಕೊಂಡರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಹೌದು ವಿಮಾನದಲ್ಲಿ ಪ್ರಯಾಣ ಮಾಡಲು ನಮಗೆ ತುಂಬಾ ಹಣ ಬೇಕಾಗುತ್ತದೆ, ಶ್ರೀಮಂತರ ಬಳಿ ಹಣ ಇರುತ್ತದೆ ಆದ್ದರಿಂದ ಅವರು ವಿಮಾನದಲ್ಲಿ ಯಾವಾಗಲು ಪ್ರಯಾಣ ಮಾಡುತ್ತಾರೆ ಆದರೆ ಬಡವರ ಬಳಿ ಹಣ ಇರುವುದಿಲ್ಲ ಆದ್ದರಿಂದ ಅವರಿಗೆ ವಿಮಾನದ ಪ್ರಯಾಣದ ಕನಸನ್ನ ನನಸು ಮಾಡಿಕೊಳ್ಳಲು ಆಗುವುದಿಲ್ಲ. ಇನ್ನು ಭಾರತವನ್ನ ಹೊರತುಪಡಿಸಿ ಹೊರ ದೇಶಗಳಿಗೆ ವಿಮಾನದ…
ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…
ಅರೆ ತಲೆನೋವು ಬಂತು ಎಂದರೆ ಮಾನಸಿಕವಾಗಿ ತುಂಬ ಹಿಂಸೆ ಅನುಭವಿಸುತ್ತೇವೆ. ಈ ಅರೆ ತಲೆನೋವು ಸಹಿಸಿಕೊಳ್ಳಲಾಗದಷ್ಟು ನೋವು ಕೊಡುತ್ತದೆ. ಇಂತಹ ಅರೆತಲೆನೋವಿಗೆ ಮನೆಯಲ್ಲಿ ಪರಿಹರಿಸುವ ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ಇದೆ.