ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ಪ್ರಜ್ವಲ್ ದೇವರಾಜ್ ಇಂದು (ಜುಲೈ 4) ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ಅವರು ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಒಂದು ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಒಂದು ಸರ್ಕಾರಿ ಶಾಲೆಯನ್ನು ಪ್ರಜ್ವಲ್ ದತ್ತು ಪಡೆದಿದ್ದಾರೆ. ಹೀಗಾಗಿ ಬರ್ತ್ ಡೇ ಗೆ ಗಿಫ್ಟ್ ಬದಲು ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ನೋಟ್ ಬುಕ್, ಪೆನ್ಸಿಲ್ ನೀಡಿ ಎಂದು ಮನವಿ ಮಾಡಿದ್ದರು.
ಪ್ರಜ್ವಲ್ ಅವರ ಈ ಕೆಲಸಕ್ಕೆ ನಟ ದರ್ಶನ್ ಖುಷಿಯಾಗಿದ್ದಾರೆ. “ನಮ್ಮ ಹುಡ್ಗ ಪ್ರಜ್ಜು ಒಂದು ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸುದ್ಧಿ ಕೇಳಿ ತುಂಬಾನೇ ಖುಷಿಯಾಯ್ತು. ಇಂಥ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಹೀಗೆ ಸದಾ ಎಂದು ಹಾರೈಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜ್ವಲ್ ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ, ಫ್ಲಾಕ್ಸ್, ಬ್ಯಾನರ್ ಅಂತ ಖರ್ಚು ಮಾಡುವ ಬದಲಿಗೆ ಅದೇ ಹಣದಲ್ಲಿ ನೋಟ್ ಬುಕ್ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರಜ್ವಲ್ ಕೆಲಸಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರ ಕಡೆಯಿಂದ ಬೆಂಬಲ ಸಿಕ್ಕಿದೆ. ಅಂದಹಾಗೆ, ಇತ್ತೀಚಿಗೆ ‘ಯಜಮಾನ’ ಸಿನಿಮಾದ ಹಾಡಿನಲ್ಲಿ ದರ್ಶನ್ ಜೊತೆಗೆ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದರು.
ಪ್ರಜ್ವಲ್ ಅವರ ಹುಟ್ಟುಹಬ್ಬಕ್ಕೆ ಕುಟುಂಬದವರು ಸುಮಾರು 90 ಲಕ್ಷ ರೂ. ಬೆಲೆ ಬಾಳುವ ಕೆಂಪು ಬಣ್ಣದ ವೋಲ್ವೋ ಎಕ್ಸ್ ಸಿ – 90 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಮುಂದೆ ಪ್ರಜ್ವಲ್ ಅವರ ತಂದೆ, ನಟ ದೇವರಾಜ್, ತಾಯಿ, ಪತ್ನಿ ರಾಗಿಣಿ ಹಾಗೂ ಸಹೋದರ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐತಿಹಾಸಿಕ ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚುತ್ತಿದ್ದು ಇಂತಹುದೇ ಅಭಿಯಾನವೊಂದರ ಭಾಗವಾಗಿ ಯುವಬ್ರಿಗೇಡ್ ಕೆಂಪೇಗೌಡ ನಗರಿಯ ಐತಿಹಾಸಿಕ ವೃಷಭಾವತಿ ನದಿ ಉಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಬ್ರಿಗೇಡ್ ನ ಈ ಪ್ರಯತ್ನ ಕ್ಕೆ ಗೋಲ್ಡನ್ ಸ್ಟಾರ್ ಗಣೇಶ ಕೈಜೋಡಿಸಿದ್ದು, ಇದೇ ಸಪ್ಟೆಂಬರ್ ೨೨ ರಂದು ಭಾನುವಾರ ನಡೆಯುವ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ಟೆಂಬರ್ ೨೨ ರಂದು ಭಾನುವಾರ, ವೃಷಭಾವತಿ ಸ್ವಚ್ಛತೆ ಗಾಗಿ ಕೆಂಗೇರಿ ಗಣಪತಿ ದೇವಾಲಯದಿಂದ ಬೆಂಗಳೂರು ವಿವಿವರೆಗೆ ಮ್ಯಾರಥಾನ್ ನಡೆಯಲಿದೆ….
ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು…
ನೆಚ್ಚಿನ ನಟ ನಟಿಯರನ್ನ ನೋಡುವ, ಭೇಟಿ ಮಾಡುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದ್ರೆ ಹುಚ್ಚು ಅಭಿಮಾನಕ್ಕೆ ಸಿಲುಕಿ ಅದೆಷ್ಟೋ ಅಭಿಮಾನಿಗಳು, ಹಣ, ಪ್ರಾಣ ಹಾನಿ ಮಾಡಿಕೊಂಡಿದ್ದನ್ನ ಕೂಡ ನಾವು ಹಿಂದೆ ಅನೇಕ ಭಾರಿ ನೋಡಿದ್ದೇವೆ. ಇದೀಗ ಇಂಥಹದ್ದೇ ಮತ್ತೊಂದು ಘಟನೆ ನಡೆದಿದ್ದು, ದಕ್ಷಿಣ ಭಾರತದ ಪ್ರಖ್ಯಾತ ನಟಿಯನ್ನು ನೋಡುವ ಆಸೆಯಿಂದ ಅಭಿಮಾನಿಯೋರ್ವ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ…
ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ. ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ…
ದೀಪಾವಳಿಯ ಹಿನ್ನೆಲೆಯಲ್ಲಿ ಕಂಪನಿಗಳ ಮಾರಾಟವು ಮತ್ತೆ ಚೇತರಿಸಿಕೊಂಡಿದೆ. ದೀಪಾವಳಿಗೆ ಜನರು ಹೊಸ ವಾಹನಗಳನ್ನು ಕೊಳ್ಳುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವಾಗಿರುವ ಕಾರಣಕ್ಕೆ ವಾಹನಗಳ ಮಾರಾಟವು ಹೆಚ್ಚಾಗಿದೆ.ಇದೇ ರೀತಿ ಮಧ್ಯ ಪ್ರದೇಶದಲ್ಲಿರುವ ಸಾತ್ನಾ ಜಿಲ್ಲೆಯ ರಾಕೇಶ್ ಕುಮಾರ್ ಗುಪ್ತಾರವರು ಸಹ ಹೊಸ ಸ್ಕೂಟರ್ ಖರೀದಿಸಲು ಬಯಸಿದ್ದಾರೆ. ಅದರಂತೆ ಇತ್ತೀಚಿನ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಲು ಡೀಲರ್ ಬಳಿ ಹೋಗಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರೋದು ಇದರಲ್ಲೆ. ಎಲ್ಲರಂತೆ ರಾಕೇಶ್ ಕುಮಾರ್ರವರು ಚೆಕ್ನಲ್ಲೋ, ಡಿಡಿಯಲ್ಲೋ, ಇಎಂಐನಲ್ಲೊ…