ಸುದ್ದಿ

ಇಂದು ಮಧ್ಯಾಹ್ನ ಗುಜರಾತಿಗೆ ಅಪ್ಪಳಿಸಲಿದೆ ವಾಯು – 3 ಲಕ್ಷ ಜನ ಶಿಫ್ಟ್, 500 ಗ್ರಾಮಗಳ ತೆರವು

62

ಗಾಂಧಿನಗರ: ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚಂಡಮಾರುತ ವಾಯು ಇದೀಗ ಗುಜರಾತ್‍ನತ್ತ ಪಯಣಿಸಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ಮಧ್ಯಾಹ್ನದ ಹೊತ್ತಿಗೆ ದಕ್ಷಿಣ ಗುಜರಾತ್‍ನ ಕರಾವಳಿಗೆ ಅಪ್ಪಳಿಸಲಿದೆ.

ಹವಾಮಾನ ಇಲಾಖೆ ಪ್ರಕಾರ, ವಾಯು ಚಂಡಮಾರುತ ವೆರಾವಲ್‍ನಿಂದ 180 ಕಿ.ಮೀ ಹಾಗೂ ಪೋರ್ ಬಂದರ್ ನಿಂದ 260 ಕಿ.ಮೀ ದೂರದಲ್ಲಿದೆ. ಪ್ರಸ್ತುತ ವಾಯು ಸೈಕ್ಲೋನ್ ತೀವ್ರ ಸ್ವರೂಪ ಪಡೆದಿದ್ದು, ಗಂಟೆಗೆ 170 ರಿಂದ 185 ಕಿ.ಮೀ. ವೇಗದಲ್ಲಿ ಪೋರ್ ಬಂದರ್ ನತ್ತ ಪಯಣಿಸುತ್ತಿದೆ.

ಮುಂಬೈನಿಂದ ಮುಂದೆ ಸಾಗಿದ ವಾಯು ಚಂಡಮಾರುತ, ದಿಯು-ಸೋಮನಾಥ-ಪೋರಬಂದರ್-ದ್ವಾರಕ ಮೂಲಕ ಸಾಗಿ ಪಾಕಿಸ್ತಾನದ ಕರಾಚಿಯತ್ತ ದುರ್ಬಲ ಆಗಲಿದೆ. ಇದರ ನಡುವೆ ದಿಯು ಹಾಗೂ ಪೋರ್ ಬಂದರ್ ನಡುವೆ ಭಾರೀ ವರ್ಷಧಾರೆಯಾಗಲಿದೆ.

ಬಂಗಾಳಕೊಲ್ಲಿಯ ಫೋನಿಯಿಂದ ಒಡಿಶಾ ಎದುರಿಸಿದ ಸ್ಥಿತಿಯಿಂದ ಗುಜರಾತ್ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ, ಗುಜರಾತ್‍ನ ಮೋರ್ಬಿ, ಭಾವನಗರ, ಜುನಾಗಢ, ಗಿರ್, ಸೋಮನಾಥ, ಜಾಮ್‍ನಗರ, ದ್ವಾರಕಾ, ಕಛ್, ಪೋರ್ ಬಂದರ್, ರಾಜಕೋಟ್ ಮತ್ತು ಅಮ್ರೇಲಿಯ 10 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಜನರನ್ನು ಈಗಾಗಲೇ ಸ್ಥಳಾಂತರ ಹಾಗೂ 500 ಗ್ರಾಮಗಳ ತೆರವು ಮಾಡಲಾಗಿದೆ.
ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 52 ತಂಡಗಳು ಗುಜರಾತ್‍ನಲ್ಲಿ ಬೀಡು ಬಿಟ್ಟಿವೆ. ಜೊತೆಗೆ, ಸೇನಾಪಡೆಯ 10 ತುಕಡಿಗಳು, ಮುಂಬೈ ನೌಕಾನೆಲೆಯಲ್ಲಿ ತುರ್ತು ಸ್ಥಿತಿ ಎದುರಿಸಲು ವೈದ್ಯಕೀಯ ತಂಡಗಳು ಸನ್ನದ್ಧವಾಗಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ