Sports

ಪಾಕಿಸ್ತನದ ಅಭಿಮಾನಿಗೆ ಟಿಕೆಟ್ ಕೊಡಿಸಿದ ಧೋನಿ….!

27

ಪಾಕಿಸ್ತಾನ ಮೂಲದ ಕ್ರಿಕೆಟ್ ಅಭಿಮಾನಿ ಮೊಹಮ್ಮದ್ ಬಶೀರ್ (ಚಾಚಾ ಶಿಕಾಗೋ) ಅವರಿಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್ ಕೊಡಿಸಿದ್ದಾರೆ.

ಧೋನಿ ಮತ್ತು ಬಶೀರ್ ಅವರದ್ದು 9 ವರ್ಷದ ಗೆಳತನ. ಜೂನ್ 16ರಂದು ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಧೋನಿ ಚಾಚಾ ಶಿಕಾಗೋ ಅವರಿಗೆ ಟಿಕೆಟ್‍ನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಅಮೆರಿಕದ ಶಿಕಾಗೋದಲ್ಲಿ ರೆಸ್ಟೋರೆಂಟ್ ಹೊಂದಿರುವ ಪಾಕಿಸ್ತಾನ ಮೂಲದ 63 ವರ್ಷದ ಮೊಹಮ್ಮದ್ ಬಶೀರ್, ಧೋನಿ ಅಭಿಮಾನಿಯಾಗಿದ್ದಾರೆ. 2011ರ ವಿಶ್ವಕಪ್ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ನಡುವೆ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೆ ಮೊಹಮ್ಮದ್ ಬಶೀರ್ ಭಾರತಕ್ಕೆ ಆಗಮಿಸಿದ್ದರು. ಆಗಲೂ ಧೋನಿ ಟಿಕೆಟ್ ಖರೀದಿಸಿ ಕೊಟ್ಟಿದ್ದರು.ಧೋನಿ ಮತ್ತು ಬಶೀರ್ ಅವರ ನಡುವೆ ಸ್ನೇಹ ಮುಂದುವರೆದಿದ್ದು, ಪಂದ್ಯ ವೀಕ್ಷಿಸಲು ಬಶೀರ್ ಇಂಗ್ಲೆಂಡ್‍ಗೆ ಆಗಮಿಸಿದ್ದಾರೆ.

ಧೋನಿ ತುಂಬಾ ಒಳ್ಳೆಯ ವ್ಯಕ್ತಿ ಅವರೊಂದಿಗೆ 9 ವರ್ಷಗಳಿಂದ ಸ್ನೇಹವಿದೆ. ಈ ಪಂದ್ಯದ ಟಿಕೆಟ್‍ಗಾಗಿ ಜನರು 800-900 ಪೌಂಡ್ ನೀಡಲು ತಯಾರಾಗಿದ್ದಾರೆ. ನಾನು ಈ 800-900 ಪೌಂಡ್ ನಲ್ಲಿ ಮತ್ತೆ ಚಿಕಾಗೋಗೆ ವಾಪಸ್ ಹೋಗಬಹುದು. ಆದರೆ ನಾನು ಟಿಕೆಟ್‍ಗಾಗಿ ಹೆಣಗಾಡಬೇಕಾಗಿಲ್ಲ ನನಗೆ ಧೋನಿ ಅವರು ಟಿಕೆಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.ಇದೇ ವೇಳೆ ಬಶೀರ್ ಪಾಕಿಸ್ತಾನ ತಂಡ ತಂಗಿರುವ ಹೋಟೆಲ್‍ಗೆ ತೆರಳಿ ಶೋಯಬ್ ಮಲ್ಲಿಕ್ ಮತ್ತು ಅವರ ಪತ್ನಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಭೇಟಿಯಾಗಿದ್ದಾರೆ.


About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ