ಬೇಸಿಗೆಯಲ್ಲಿ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚು. ದೇಹಕ್ಕೆ ಆರೋಗ್ಯಕರ ಹಾಗೂ ಚೈತನ್ಯವನ್ನು ತುಂಬುವ ಶಕ್ತಿ ಈ ಪಾನೀಯಕ್ಕಿದೆ. ಮಿನರಲ್, ವಿಟಮಿನ್, ಕಾರ್ಬೋಹೈಡ್ರೇಟ್ ಇನ್ನು ಮುಂತಾದ ಅಂಶಗಳು ಎಳನೀರಿನಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಈ ಡ್ರಿಂಕ್ ಉತ್ತಮ ಎಂದು ಹೇಳಬಹುದು.
* ಎಳನೀರಿನ ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯಬಹುದು.
* ಬೇಸಿಗೆಯಲ್ಲಿ ಉಂಟಾಗುವ ಡಿಹೈಡ್ರೇಷನ್ ನಿಂದ ಮುಕ್ತಿ ಪಡೆಯಲು ಎಳನೀರನ್ನು ಸೇವಿಸಬೇಕು.
* ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳನೀರಿಗಿದೆ.
* ಎಳನೀರು ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಫ್ರೀ ಆಗಿರುವುದರಿಂದ ಇದರ ಸೇವನೆ ಹೃದಯಕ್ಕೆ ಅತ್ಯುತ್ತಮ.
* ಎಳೆನೀರಿನಲ್ಲಿ ಎಲೆಕ್ಟ್ರೋಲೈಟ್ ಮತ್ತು ಪೊಟ್ಯಾಷಿಯಂ ಅಂಶವಿರುವ ಹಿನ್ನೆಲೆಯಲ್ಲಿ ದೇಹವು ಸದಾ ಚೈತನ್ಯದಿಂದ ಕೂಡಿರುತ್ತದೆ.
* ಎಳೆನೀರಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಶಕ್ತಿ ಇರುವುದರಿಂದ ದೇಹದಲ್ಲಿ ಆಗುವ ಸಣ್ಣಪುಟ್ಟ ಇನ್ಫೆಕ್ಷನ್ ಗಳನ್ನು ಹೊಡೆದೋಡಿಸುತ್ತದೆ.
* ಎಳನೀರಿನಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಗಳು ಜಾಸ್ತಿ ಇರುವುದರಿಂದ ಇದನ್ನು ಸೇವಿಸಿದರೆ ಮೂಳೆಗಳಿಗೆ ಉತ್ತಮ.
* ಎಳನೀರು ಪ್ರತಿದಿನ ಕುಡಿಯುವ ಅಭ್ಯಾಸದಿಂದ ಮೂತ್ರಪಿಂಡದಲ್ಲಿ ಕಂಡುಬರುವ ಕಲ್ಲುಗಳು ನಿಯಂತ್ರಣವಾಗುತ್ತದೆ.
* ಎಳನೀರಿಗೆ ಕರುಳಿನ ಕಾರ್ಯವನ್ನು ಸರಾಗವಾಗಿ ನಿರ್ವಹಿಸುವ ಶಕ್ತಿ ಇದೆ.
* ವಾರಕ್ಕೊಂದು ದಿನ ಬರಿ ಎಳನೀರನ್ನು ಸೇವಿಸಿ ಉಪವಾಸ ಮಾಡಿದರೆ ದೇಹದಲ್ಲಿರುವ ಕೊಬ್ಬು ಕರಗುತ್ತದೆ.
* ಮುಂಜಾನೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವ ಅಭ್ಯಾಸ ಒಳ್ಳೆಯದು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ, ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ (ಅಮಾನವೀಯ ಚಿತ್ರಹಿಂಸೆ) ಅನ್ನು ಪ್ರಯೋಗಿಸುತ್ತಾರೆ. ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ.ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ. ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಮೊಬೈಲ್ ಕದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಾರೆ. ಆಗ ಆತ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಕೊನೆಗೆ ಪೊಲೀಸರು ಆತನ ಕೈಗಳನ್ನು ಕಟ್ಟಿ ಹಾಕಿ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ….
ಕೇರಳ ರಾಜ್ಯಕ್ಕೆ ಸೇರಿದ ಸಚಿನ್ ಹಾಗೂ ಭವ್ಯಾ ಎಂಬುವವರು ಡಿಪ್ಲೋಮ ಓದುತ್ತಿದ್ದಾಗ ಇಬ್ಬರೂ ಒಳ್ಳೆಯ ಸ್ನೇಹಿತರಾಗುತ್ತಾರೆ, ಇವರ ಸ್ನೇಹ ತುಂಬಾ ಆತ್ಮೀಯವಾಗಿ 8 ತಿಂಗಳು ಮುಂದುವರೆದ ಕಾರಣ ಇವರ ಸ್ನೇಹವನ್ನ ಅಪಾರ್ಥ ಮಾಡಿಕೊಂಡ ಭವ್ಯಾ ಮನೆಯವರು ಸಚಿನ್ ಜೊತೆ ಮಾತನಾಡದೆ ಇರುವಂತೆ ಭವ್ಯಾಗೆ ಎಚ್ಚರಿಕೆಯನ್ನ ನೀಡುತ್ತಾರೆ. ಇನ್ನು ತಮ್ಮ ಮನೆಯವರ ಮಾತಿಗೆ ಬೆಲೆಕೊಟ್ಟ ಭವ್ಯಾ ಸಚಿನ್ ಜೊತೆ ಮಾತನಾಡುವುದನ್ನ ಬಿಟ್ಟು ಬಿಡುತ್ತಾಳೆ, ಇನ್ನು ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಇರುವುದು ಬರಿ ಸ್ನೇಹ ಅಲ್ಲ ಪ್ರೀತಿ ಅನ್ನುವುದು…
ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗ್ತಿದೆ.ಜಾಗತಿಕ ಮಟ್ಟದಲ್ಲಿಕನ್ನಡ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟಿರುವ ಅತ್ಯಂತ ಪ್ರಮುಖರಲ್ಲಿಒಬ್ಬರಾಗಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಪತ್ನಿ ಸುಧಾ ಮೂರ್ತಿ ಅವರ ಜೀವನವನ್ನಾಧರಿಸಿದ ಚಿತ್ರ ನಿರ್ಮಾಣ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದಾಗಿದ್ದಾರೆ. ಬಾಲಿವುಡ್ನ ‘ಪಂಗಾ’ ಸಿನಿಮಾ ನಿರ್ದೇಶಕಿ ಅಶ್ವಿನಿ ಅಯ್ಯರ್ ಇಂತಾದೊಂದು ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದು, ಈಗಾಗಲೇ ಕಥೆ ಸಿದ್ಧವಾಗ್ತಿದೆ. ಸುಧಾ ಮೂರ್ತಿ ಅವರು…
ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ.. ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ. ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ…
ಹಿಂದೂ ಸಂಪ್ರದಾಯದಲ್ಲಿ ಹಲವಾರು ಆಚರಣೆಗಳಿವೆ. ಹಲವು ಸಂಪ್ರದಾಯಗಳು ಇವೆ. ಇವುಗಳೆಲ್ಲವೂ ಹಲವಾರು ಕಾಲದಿಂದಲೂ ಬೆಳೆದುಕೊಂಡು ಬಂದಿವೆ. ಹಿಂದೂ ಧರ್ಮದವರು ಮಾಡುವ ಪ್ರತಿಯೊಂದು ಆಚರಣೆಗಳಿಗೂ ಸಹ ಅದರದ್ದೇ ಆದ ಒಂದು ಹಿನ್ನೆಲೆ ಇದೆ, ಹಾಗೆಯೆ ಇವುಗಳಲ್ಲಿ ಒಂದಾದ ಗಂಡಸರು ಕಟ್ಟುವ ಉಡುದಾರವು ಸಹ ಒಂದಾಗಿದೆ. ಈ ಉಡುದಾರಕಟ್ಟುವುದರ ಹಿಂದೆ ಹಲವು ಕಾರಣಗಳಿವೆ ಬನ್ನಿ ಆ ಕಾರಣಗಳೇನು ಎಂದು ತಿಳಿಯೋಣ… ಉಡದಾರ ಧರಿಸುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಭಾಗ. ಯಾಕೆಂದರೆ ಹಿಂದೂಗಳಲ್ಲಿ ಪ್ರತಿ ಪುರುಷರನೂ ಇದನ್ನು ಧರಿಸಬೇಕು. ಚಿಕ್ಕಮಕ್ಕಳಿಗೆ ಉಡದಾರ…
ನಮ್ಮ ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸರಿಯಾದ ಗೌರವ ಸಿಗ್ತಿಲ್ಲ. ಆದ್ರೆ ಮಂಗಳಮುಖಿ ಮನೆಗೆ ಬಂದ್ರೆ ಬರಿಗೈನಲ್ಲಿ ಕಳುಹಿಸುವುದಿಲ್ಲ. ಮಂಗಳಮುಖಿ ಆಶೀರ್ವಾದ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಮನೆಗೆ ಬಂದ ಮಂಗಳಮುಖಿಯನ್ನು ತೃಪ್ತಿಪಡಿಸಿ ಆಶೀರ್ವಾದ ಪಡೆಯಬೇಕೆಂಬ ನಂಬಿಕೆ ಇದೆ. ಮಕ್ಕಳಿಗೂ ಮಂಗಳಮುಖಿಯರ ಆಶೀರ್ವಾದ ಸಿಗಬೇಕಂತೆ. ನವಜಾತ ಶಿಶು ಜನಿಸಿದ ನಂತ್ರ ಬರುವ ಮೊದಲ ಬುಧವಾರ ಮಗುವನ್ನು ಮಂಗಳಮುಖಿ ಮಡಿಲಿಗೆ ಹಾಕಬೇಕಂತೆ. ಮಂಗಳಮುಖಿ, ಮಗುವಿಗೆ ಆಶೀರ್ವಾದ ನೀಡಿದ್ರೆ ಮಗು ಬಹಳ ಭಾಗ್ಯಶಾಲಿಯಾಗುತ್ತದೆಯಂತೆ. ಮಗು ಹುಟ್ಟಿದ ನಂತ್ರ ಅನ್ನ ಪ್ರಾಶನದವರೆಗೆ…