ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು ಪ್ರಾರಂಭಿಸಿದ್ದಾನೆ.
This little boy in China is his mummy’s big hero – he vented his anger at a car that sent his mum flying pic.twitter.com/tCBNShmyHG
— SCMP News (@SCMPNews) December 11, 2019
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಜೊತೆಗೆ ಬಾಲಕ ರಸ್ತೆ ದಾಟುತ್ತಿರುತ್ತಾನೆ. ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ತಾಯಿ ಕೆಳಗೆ ಬೀಳುತ್ತಾರೆ. ಮೊದಲು ತಾಯಿಯನ್ನು ಮಾತನಾಡಿಸಿ, ನಂತರ ಬಾಲಕ ಕಾರಿಗೆ ಒದೆಯುತ್ತಾನೆ. ಆಗ ಚಾಲಕ ಕಾರಿನಿಂದ ಇಳಿದು ಬಂದಿದ್ದು, ಬಾಲಕ ತನ್ನ ತಾಯಿ ಬಳಿ ಓಡಿ ಹೋಗುತ್ತಾನೆ. ನಂತರ ಸುತ್ತಲಿನ ಜನ ಘಟನಾ ಸ್ಥಳದತ್ತ ಧಾವಿಸುತ್ತಾರೆ. ಕೆಳಗೆ ಬಿದ್ದಿದ್ದ ಮಹಿಳೆಯನ್ನು ಎತ್ತಿ ಅದೇ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸುತ್ತಾರೆ.

ಅದೃಷ್ಟವಶಾತ್ ಬಾಲಕ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿಲ್ಲ. ಅಪಘಾತಕ್ಕೆ ಕಾರು ಚಾಲಕನೇ ಸಂಪೂರ್ಣ ಹೊಣೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರಿನಲ್ಲಿ 83,500 ಜನ ವೀಕ್ಷಿಸಿದ್ದಾರೆ. ಬಾಲಕ ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದ್ದಾನೆ. ದಯವಿಟ್ಟು ನಿನ್ನ ಮುಗ್ಧ, ಪರಿಶುದ್ಧ ಹೃದಯವನ್ನು ಸದಾ ಕಾಪಾಡಿಕೋ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ ಜನಪ್ರಿಯ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ತುಂಬಾನೇ ಮುಖ್ಯವಾದುದು. ಹಾಲಿವುಡ್ ನಿಂದ ಭಾರತಕ್ಕೆ ಬಂದಿರುವ ಈ ಶೋ 2006ರಲ್ಲಿ ಮೊದಲ ಸಲ ಹಿಂದಿಯಲ್ಲಿ ಆರಂಭವಾಯಿತು. ಅದಾದ ಬಳಿಕ ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗಿದೆ. ಹಿಂದಿಯಲ್ಲಿ 13ನೇ ಆವೃತ್ತಿ, ಕನ್ನಡದಲ್ಲಿ 7ನೇ ಆವೃತ್ತಿ, ತೆಲುಗು, ತಮಿಳು, ಮರಾಠಿ, ಬೆಂಗಾಳಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಬಂದಿದೆ. ಇಷ್ಟು ವರ್ಷಗಳ ಇತಿಹಾಸದಲ್ಲಿ ಯಾವ ಶೋಗೂ ಸಿಗದ ಟಿ.ಆರ್.ಪಿ ತೆಲುಗಿಗೆ ಸಿಕ್ಕಿದೆ. ಈ…
ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.
ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು ಆದರೆ ಒಂದು ಎಚ್ಚರಿಕೆ, ಏನೆಂದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷ ವೆನ್ನುವಂತೆ ತುಪ್ಪದ ಅತಿಸೇವನೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಿಸಲು ಕಾರಣ ವಾಗುತ್ತದೆ. ತುಪ್ಪವನ್ನು ತುಪ್ಪದಂತೆಯೇ ತಿನ್ನಬೇಕು ಎನ್ನುವ ಕಾರಣಕ್ಕೆ ಚಮಚಕ್ಕಿಂತಲೂ ಚಿಕ್ಕದಾದ ಮಿಳ್ಳೆ ಎಂಬ ಉಪ ಕರಣವನ್ನು ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿ ದ್ದಾರೆ. ಇದರ ಆಳ ಕಡಿಮೆ ಇದ್ದು, ಅಗಲ ಕೊಂಚ ಜಾಸ್ತಿ ಇರುವ ಕಾರಣ ಹೆಚ್ಚು ತುಪ್ಪ ಸುರಿದಂತೆ ಅತಿಥಿಗಳಿಗೆ ಅನ್ನಿಸಿದರೂ ನಿಜವಾಗಿ ಕೊಂಚವೇ ತುಪ್ಪ ತಟ್ಟೆಗೆ ಬಿದ್ದಿರುತ್ತದೆ!
ಬಿಗ್ ಬಾಸ್ ಸಂಚಿಕೆ-5ರ ಕಾರ್ಯಕ್ರಮ ಇನ್ನೇನು ಮುಗಿಯಲಿದೆ.ಈಗಾಗಲೇ ಪೈನಲ್’ಗೆ ಎಲ್ಲಾ ತಯಾರಿಗಳು ಶುರುವಾಗಿವೆ.
ಬಡವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಆನ್ಲೈಸನ್ ಮೂಲಕ 1 ಲಕ್ಷ ಮನೆ ಹಂಚುವ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆನ್ಲೈನ್ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.
ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!
ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತಗೊಂಡು ,ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ.