inspirational, ಸುದ್ದಿ

ತಿನ್ನಲು ಊಟ ಸಿಗದಿದ್ದಾಗ, ಹಸಿವು ತಡೆಯಲಾರದೆ, ಮಣ್ಣು ತಿಂದು ಮೃತಪಟ್ಟ ಮಕ್ಕಳು…

61

ಹಸಿವೆಯಿಂದ ಮಣ್ಣು ತಿಂದು ಮೃತಪಟ್ಟ ಏಳು ವರ್ಷದ ಮಗು ವೆನೆಲ್ಲಾಳ ಪೋಷಕರಾದ ಮಹೇಶ್ ಮತ್ತು ನಾಗಮಣಿಯ ವಿವರ ಪತ್ತೆ ಹಚ್ಚಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಮಗುವಿನ ಹಿರಿಯರು ನೆರೆಯ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದು ಅವರು ಹೇಳುವ ಪ್ರಕಾರ ಕುಟುಂಬದವರು ಕರ್ನಾಟಕ ಸರ್ಕಾರದ ಯಾವುದೇ ಸೌಲಭ್ಯ ಅಥವಾ ಇಲ್ಲಿನ ಮತದಾನ ಗುರುತು ಪತ್ರ ಹೊಂದಿಲ್ಲ ಎಂದು ತಮ್ಮ ತನಿಖೆ ವೇಳೆ ತಿಳಿದುಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಅನಿರುದ್ಧ ಶ್ರಾವಣ್ ತಿಳಿಸಿದ್ದಾರೆ.

ಅಲ್ಲದೆ ಮಗುವಿನ ಪೋಷಕರು ಅಲ್ಲಿ ವಾಸಿಸುತ್ತಿದ್ದರೇ, ಅವರು ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗದು ಎಂದು ಚಿಕ್ಕಬಳ್ಳಾಪುರದ ಗುಡಿಬಂಡೆಯ ಗ್ರಾಮಸ್ಥರು ಕೂಡ ಹೇಳುತ್ತಾರೆ. ಪೋಷಕರು ಬಹುಶಃ ಬೇರೆ ಕಡೆಯಿಂದ ಇಲ್ಲಿಗೆ ವಲಸೆ ಬಂದಿರಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು ಅದನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಈ ದಂಪತಿಯ ಮೂರು ವರ್ಷದ ಮತ್ತೊಂದು ಮಗು ಸಂತೋಷ್ ಬಾಬು ಕೂಡ ಇದೇ ರೀತಿ ಮೂರು ತಿಂಗಳ ಹಿಂದೆ ಮಣ್ಣು ತಿಂದು ಜೀರ್ಣವಾಗದೆ ಮೃತಪಟ್ಟಿತ್ತು. ಇಲ್ಲಿಗೆ ಆಂಧ್ರ ಪ್ರದೇಶದಿಂದ ತೆಲುಗು ಮಾತನಾಡುವ ಕೂಲಿ ಕಾರ್ಮಿಕರು ಕೆಲಸ ಅರಸಿಕೊಂಡು ಇಲ್ಲಿಗೆ ಬರುತ್ತಿರುತ್ತಾರೆ ಎಂದು ಗ್ರಾಮದ ನಿವಾಸಿ ಚಂದ್ರಪ್ಪ ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ