ಸುದ್ದಿ

ಕಾಲ್​ ರಿಸೀವ್​ ಮಾಡಿ, ಮಾಡದೇ ಇರಿ ರಿಂಗ್ ಆಗುವುದು ಮಾತ್ರ 30 ಸೆಕೆಂಡ್ ಅಷ್ಟೇ,,.!

55

ಮೊಬೈಲ್​ ಫೋನ್​ ಬಳಕೆದಾರರು ತಮ್ಮ ಮೊಬೈಲ್​ಗೆ ಬರುವ ಕರೆಯನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ. ಇನ್ಮುಂದೆ ಕೇವಲ 30 ಸೆಕೆಂಡ್​ ರಿಂಗಣಿಸಲಿದೆ!ಅಂತೆಯೇ ಲ್ಯಾಂಡ್​ಲೈನ್​ ಫೋನ್​ಗಳು 60 ಸೆಕೆಂಡ್​ ರಿಂಗಣಿಸಲಿವೆ!

ಅರೆ, ಇದೇನಿದು ಎಂದು ಹುಬ್ಬೇರಿಸಬೇಡಿ.ಮೊಬೈಲ್​ ಫೋನ್​ಗಳ ರಿಂಗಣವನ್ನು30 ಸೆಕೆಂಡ್​ಗಳಿಗೆ ಮತ್ತು ಲ್ಯಾಂಡ್​ಲೈನ್​ ಫೋನ್​ಗಳ ರಿಂಗಣವನ್ನು 60 ಸೆಕೆಂಡ್​ಗಳಿಗೆ ಸೀಮಿತಗೊಳಿಸಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್​) ಆದೇಶ ಹೊರಡಿಸಿದೆ.

ಒಳ ಬರುವ ಕರೆಗಳ ರಿಂಗಣ ಸಮಯವನ್ನು ಸೀಮಿತಗೊಳಿಸುವ ನಿಯಮದ ತಿದ್ದುಪಡಿಯಿಂದಾಗಿ ಮೊಬೈಲ್​ಫೋನ್​ ಮತ್ತು ಲ್ಯಾಂಡ್​ಲೈನ್​ ಗ್ರಾಹಕರಿಗೆ ನೀಡಲಾಗುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಟ್ರಾಯ್​ ಹೇಳಿದೆ.

ಕರೆ ರಿಂಗಣ ಸಮಯದ ವಿಷಯವಾಗಿ ರಿಲಯನ್ಸ್​ ಜಿಯೋ ಮತ್ತು ಭಾರ್ತಿ ಏರ್​ಟೆಲ್​ ನಡುವೆ ಜಟಾಪಟಿ ಏರ್ಪಟ್ಟಿತ್ತು. ಮೊಬೈಲ್​ಫೋನ್​ಗಳ ರಿಂಗಣ ಸಮಯವನ್ನು 45 ಸೆಕೆಂಡ್​ಗಳಿಗೆ ನಿಗದಿಪಡಿಸಬೇಕು.ಆ ಮೂಲಕ ಕರೆಸ್ವೀಕರಿಸುತ್ತಿರುವ ನೆಟ್​ವರ್ಕ್​ಗೆ ಕರೆ ಸ್ವೀಕಾರಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕುಎಂದು ಭಾರ್ತಿ ಏರ್​ಟೆಲ್ ​ವಾದಿಸಿತ್ತು. ಈ ಅವಧಿಯನ್ನು 20ರಿಂದ25 ಸೆಕೆಂಡ್​ಗೆ ಸೀಮಿತಗೊಳಿಸಬೇಕು ಎಂದು ರಿಲಯನ್ಸ್​ ಜಿಯೋ ಪ್ರತಿಪಾದಿಸಿತ್ತು. ಆದರೆ  ವೊಡೋಫೋನ್​ ಐಡಿಯಾ ಮಾತ್ರ ರಿಂಗಣದ ಸಮಯವನ್ನು 30 ಸೆಕೆಂಡ್​ಗೆ ಸೀಮಿತಗೊಳಿಸುವಂತೆ ಮನವಿ ಮಾಡಿಕೊಂಡಿತ್ತು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೊಮ್ಮಕ್ಕಳನ್ನು ಆಡಿಸುವ 74ರ ಅಜ್ಜಿಯೊಬ್ಬರು ಪವಾಡವೆಂಬಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ..!

    ಹೈದರಾಬಾದ್, ಮಕ್ಕಳು ಪಡೆಯಬೇಕೆಂಬ ಬಯಕೆ ಸಾಮಾನ್ಯವಾಗಿ ಎಲ್ಲಾ ತಾಯಿಯರಿಗೂ ಇರುತ್ತದೆ. ಆದರೆ ಒಂದು ವಯಸ್ಸಿನ ಮಿತಿಯಿರುತ್ತದೆ. ಸಾಮಾನ್ಯವಾಗಿ 50 ವಯಸ್ಸಿನ ನಂತರ ಮೆನೋಪಾಸ್​ ಹಂತ ತಲುಪಿದ ಬಳಿಕ ಮಹಿಳೆಯರಿಗೆ ಗರ್ಭ ಧರಿಸುವುದು ಸಾಧ್ಯವಾಗುವುದಿಲ್ಲ. ಮೊಮ್ಮಕ್ಕಳು, ಮುಮ್ಮಕ್ಕಳನ್ನು ಆಡಿಸುವ 74ರ ಅಜ್ಜಿಯೊಬ್ಬರು ಪವಾಡವೆಂಬಂತೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದ್ರಾಕ್ಷಾರಾಮಮ್​ ಬ್ಲಾಕ್​ನ ನೆಲಪಾರ್ತಿಪಾಡು ಗ್ರಾಮದ ಈರಮಟ್ಟಿ ಮಂಗಯಮ್ಮ ಎಂಬ 74ರ ಅಜ್ಜಿ ಮದುವೆಯಾದ 54 ವರ್ಷಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ….

  • ಉಪಯುಕ್ತ ಮಾಹಿತಿ, ದೇವರು

    ಸಂಕ್ರಾಂತಿ ಯಾಕೆ ಮಾಡ್ತಾರೆ ಗೊತ್ತಾ? ಈ ದಿನ ಎಳ್ಳಿಗೆ ಯಾಕೆ ಇಷ್ಟು ಮಹತ್ವ.

    ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು…

  • inspirational

    ಸೀತಾಫಲ ಹಣ್ಣನ್ನು ನೀವು ತಿಂದಿರಬಹುದು ಆದರೆ, ಇದರ ಅದ್ಬುತ ರಹಸ್ಯಗಳನ್ನು ನೋಡಿ.

    ಈ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣುಗಳು ಸಿಗುತ್ತದೆ ಮತ್ತು ಅದರಲ್ಲಿ ಕೆಲವು ಹಣ್ಣುಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದರೆ ಇನ್ನು ಕೆಲವು ಹಣ್ಣುಗಳು ಕೇವಲ ರುಚಿಯನ್ನ ಮಾತ್ರ ನೀಡುತ್ತದೆ. ಇನ್ನು ಸೀತಾಫಲ ಹಣ್ಣನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ಈ ಹಣ್ಣಿನ ರುಚಿ ನೋಡಿರುತ್ತೀರಿ, ಇನ್ನು ಈ ಹಣ್ಣಿನ ಜ್ಯೂಸ್ ಕೂಡ ಕುಡಿದಿರಬಹುದು ಆದರೆ ಈ ಹಣ್ಣಿನಲ್ಲಿರುವ ಕೆಲವು ಅದ್ಬುತ ರಹಸ್ಯಗಳ ಬಗ್ಗೆ ಮಾತ್ರ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಹೌದು ಸೀತಾಫಲ ಸಾಮಾನ್ಯವಾದ…

  • ಸುದ್ದಿ

    ರಾಜಸ್ಥಾನದ ಈ ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದರೆ 111 ಗಿಡ ನೆಡುವ ಪದ್ದತಿ…ಯಾಕೆ ಗೊತ್ತ?

    ರಾಜಸ್ಥಾನದ ರಾಜ್‍ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ. ಈ ಯಶೋಗಾಥೆಯ…

  • ಉಪಯುಕ್ತ ಮಾಹಿತಿ

    ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…

    ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.

  • ಸುದ್ದಿ

    ಹುಟ್ಟುಹಬ್ಬಕ್ಕೆ ಸರ್ಕಾರಿ ಶಾಲೆ ದತ್ತು ಪಡೆದ ಪ್ರಜ್ವಲ್ ದೇವರಾಜ್ ಸಾಮಾಜಿಕ ಕಳಕಳಿ ಮೆಚ್ಚಿದ ದರ್ಶನ್…!

    ನಟ ಪ್ರಜ್ವಲ್ ದೇವರಾಜ್ ಇಂದು (ಜುಲೈ 4) ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ಅವರು ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಒಂದು ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಒಂದು ಸರ್ಕಾರಿ ಶಾಲೆಯನ್ನು ಪ್ರಜ್ವಲ್ ದತ್ತು ಪಡೆದಿದ್ದಾರೆ. ಹೀಗಾಗಿ ಬರ್ತ್ ಡೇ ಗೆ ಗಿಫ್ಟ್ ಬದಲು ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ನೋಟ್ ಬುಕ್, ಪೆನ್ಸಿಲ್ ನೀಡಿ ಎಂದು ಮನವಿ ಮಾಡಿದ್ದರು. ಪ್ರಜ್ವಲ್ ಅವರ ಈ ಕೆಲಸಕ್ಕೆ ನಟ ದರ್ಶನ್ ಖುಷಿಯಾಗಿದ್ದಾರೆ. “ನಮ್ಮ ಹುಡ್ಗ…