ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ.
ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ ಬಾರಿಗೆ ಪರಿಚಯ ಆಗುತ್ತದೆ. ಧ್ವನಿ ಕರೆಯನ್ನು ಮಾಡುವ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯೇ ಹಣವನ್ನು ನೀಡುವ ವಿಶಿಷ್ಟಯೋಜನೆ ಇದು.
ನೆನಪಿರಲಿ.ಇದು ಬಿಎಸ್ ಎನ್ ಎಲ್ಮೊಬೈಲ್ ಗ್ರಾಹಕರಿಗೆ ಅನ್ವಯ ಆಗಲ್ಲ. ದೂರವಾಣಿ,ಬ್ರ್ಯಾಡ್ ಬ್ಯಾಂಡ್ ಮತ್ತು ಎಫ್ಟಿಟಿಎಚ್ ಗ್ರಾಹಕರಿಗೆ ಮಾತ್ರ ಈ ಯೋಜನೆ.ಐವತ್ತೊಂದು ಪರ್ಸೆಂಟ್ ಮಾರ್ಕೆಟ್ ಷೇರು ಹೊಂದಿರುವ ಬಿಎಸ್ಎನ್ ಎಲ್, ಭಾರತದಲ್ಲಿ ದೂರವಾಣಿಸೇವೆ ಒದಗಿಸುವ ಅತಿ ದೊಡ್ಡಸಂಸ್ಥೆ. ಇದೀಗ ತನ್ನ ಪಾರಮ್ಯ ಉಳಿಸಿಕೊಳ್ಳಲು ಈ ಪ್ರಯತ್ನಕ್ಕೆ ಮುಂದಾಗಿದೆ.
ಇದರಿಂದಜಿಯೋ ಗ್ರಾಹಕರನ್ನು ಬಿಎಸ್ಎನ್ ಲ್ ದೂರವಾಣಿ ಬಳಸಲು ಸೆಳೆಯಬಹುದು ಎಂಬ ಲೆಕ್ಕಾಚಾರವೂ ಇದ್ದಂತಿದೆ. ಐಯುಸಿ ಶುಲ್ಕವನ್ನು ಭರಿಸುವ ಸಲುವಾಗಿ ಜಿಯೋ ಸಂಸ್ಥೆಯು, ಉಳಿದ ನೆಟ್ ವರ್ಕ್ ಗಳಿಗೆ ಮಾಡುವ ಕರೆಗೆ ಆರು ಪೈಸೆ ದರ ವಿಧಿಸುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೈನುಗಾರಿಕೆಯ ಭಾಗವಾಗಿ, ಹಸುಗಳ ಹೊಟ್ಟೆಯಲ್ಲಿ ದೊಡ್ಡ ಹೋಲ್ಗಳನ್ನು ಮಾಡಿದ್ದಾರೆ.ಸ್ವಿಟ್ಜರ್ಲೆಂಡ್ನಲ್ಲಿರುವ ಕೆಲವು ರೈತರು ಹೀಗೆ ಮಾಡುತ್ತಿರುವುದು ಏಕೆ ಎಂದು ಹಲವು ಜನರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಬಳಕೆಗೆ ಬರುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್” ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ. ಮೂಲತಃ ನಾಣ್ಯ- ನೋಟುಗಳಾವುದೂ ಇಲ್ಲದ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್ ಪ್ರಪಂಚಕ್ಕೆ ಸೀಮಿತ
ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ. ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ…
ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್. ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ. ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ. ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.
ಕುಲ ಕುಲವೆಂದು ಬಡಿದಾಡುವ ಈ ದಿನದಲ್ಲಿ ಮುಸ್ಲಿಂ ಯುವಕನೊಬ್ಬ ಎಲ್ಲದೇವರು ಒಂದೇ ಎಂದು ತಿಳಿದು ಅಯ್ಯಪ್ಪ ಮಾಲೆ ಧರಿಸಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಸ್ಮರಣೆ ಮಾಡುತ್ತಿದ್ದಾನೆ. ಅಯ್ಯಪ್ಪಮಾಲೆ ಭಕ್ತರು 41 ದಿನ ಮಂಡಳ ಪೂರೈಸಿ ಶಬರಿಗೆ ಹೋಗುವಾಗ ಅರಣ್ಯದ ಮಧ್ಯದಲ್ಲಿಅಯ್ಯಪ್ಪ ಸ್ವಾಮಿಯ ಶಿಷ್ಯ ಬಾಬರ ಸ್ವಾಮಿ ಅವರ ದರ್ಗಾ ಇದೆ. ಪ್ರಥಮ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ದರ್ಗಾದ ದರ್ಶನ ಪಡೆದು ಮೈಮೇಲೆ ವಿವಿಧ ಬಣ್ಣ ಹಚ್ಚಿಕೊಳ್ಳುತ್ತಾರೆ. ಅಡವಿಯಲ್ಲಿಹೋಗುವಾಗ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಬಾಬರ…
ನಾವು ಮಧ್ಯಾಹ್ನ ಅಥವಾ ರಾತ್ರಿ ಮಲಗುವಾಗ ನಮ್ಮ ಕೈ ಮೇಲೆ ತಲೆನ ಹಾಕಿಕೊಂಡು ಮಲಗುತ್ತೇವೆ ಅದು ನಿಮಗೂ ಗೊತ್ತು, ನಿದ್ದೆ ಮನುಷ್ಯನಿಗೆ ವರದಾನವಾಗಿದೆ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೆಲಸ ಮಾಡುವವರು ನಿದ್ರೆ ಕಡೆ ಗಮನ ಕೊಡುತ್ತಿಲ್ಲ ತುಂಬಾ ಕೆಲಸದ ಕಡೆ ಗಮನ ಕೊಡುತ್ತಿದ್ದಾರೆ ಇದರಿಂದ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಇದರಿಂದ ರಾತ್ರಿ ಮಲಗುವ ನಿದ್ದೆ ಸಾಕಾಗುವುದಿಲ್ಲ ಹಾಗಾಗಿ ಮಧ್ಯಾಹ್ನವೂ ಕೂಡ ಮಲಗುತ್ತಾರೆ, ಮತ್ತು ಹೆಚ್ಚಾಗಿ ನಿದ್ರೆ ಮಾಡುವವರನ್ನು ಸೋಂಬೇರಿಗಳು ಅಂತಾನೂ ಕರೆಯುತ್ತಾರೆ….