ಸುದ್ದಿ

ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ…ಕಾರಣ?

107

ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ.

ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ.

ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಕೂಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತ್ತಿದೆ. ಈ ಹಿಂದೆ ಕೂಡಾ ರಸ್ತೆಯ ಮೇಲೆಯೇ ಕಸಾಯಿ ಖಾನೆಯ ನೀರು ಹರಿಯುತ್ತಿತ್ತು. ಆದರೆ ಈಗ ಅದೇ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲಿಜು ನೀರು ಜನರ ಮನೆಗೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಒಂದೆಡೆ ಬರಗಾಲದಿಂದ ಕುಡಿಯಲು ನೀರಿಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಇಲ್ಲಿಯ ಜನರಿಗೆ ಕುಡಿಯುವ ನೀರು ಹೋಗಲಿ ಬಳಸಲು ಕೂಡ ನೀರಿಲ್ಲದಂತೆ ಆಗಿದೆ. ಇದಕ್ಕೆಲ್ಲ ಪಾಲಿಕೆ ಹಾಗೂ ಜಲ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಯಶ್ ರಾಧಿಕಾ ಸು ಪುತ್ರಿಗೆ ಅಂಬಿ ತಾತನಿಂದ ಸ್ವರ್ಗದಿಂದ ಬಂತು ಗಿಫ್ಟ್… ಸುಮಲತಾ ಬಿಚ್ಚಿಟ್ಟ ಸತ್ಯ..

    ಯಶ್ ಕುಟುಂಬಕ್ಕೆ ಅಂಬಿ ಆತ್ಮೀಯರು.ದರ್ಶನ್ ಪುನೀತ್ ಹಾಗೂ ಸುದೀಪ್ ಅಂತೆ ಅವರು ಸಹ ಅವರ ಕುಟುಂಬದೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದರು. ಅಂಬಿ ನಿಧನವಾದ ಆಗಲಂತೂ ಆಸ್ಪತ್ರೆಯಿಂದ ಹಿಡಿದು ಅಂತ್ಯಸಂಸ್ಕಾರದ ವಿಧಿವಿಧಾನಗಳು ಎಲ್ಲವೂ ಪೂರ್ಣಗೊಳ್ಳುವವರೆಗೂ ಯಶ್ ಅಂಬಿಗ್ ಕುಟುಂಬದ ಜೊತೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ರಾಧಿಕ ಶ್ರೀಮಂತ ಸಮಾರಂಭದಲ್ಲಿ ಸುಮಲತಾ ಹಾಗೂ ಅಂಬರೀಶ್ ಪಾಲ್ಗೊಂಡಿದ್ದರು. ಆದರೆ ಆಗ ಅವರು ರಾಧಿಕಾಗೆ ಏನು ಬಿಡುಗಡೆ ನೀಡಿರಲಿಲ್ಲ. ಆದರೆ ಅಂಬರೀಶ್ ಕೆಲವು ತಿಂಗಳುಗಳ ಹಿಂದೆ ಒಂದು ತೊಟ್ಟಿಲನ್ನು ಬುಕ್ ಮಾಡಿದ್ದರಂತೆ. ಈ ವಿಷಯ ಅಂಬರೀಶ್…

  • ದೇವರು, ದೇವರು-ಧರ್ಮ

    ಹಿಂದೂ ಮಹಾ ಗಣಪತಿ – ಚಿತ್ರದುರ್ಗ ಕರ್ನಾಟಕದ ಅತಿ ಹೆಚ್ಚು ಜನ ಸೇರುವ ಗಣಪತಿ…

    2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.

  • ಸುದ್ದಿ

    ಈ ಲಿಪ್ ಸ್ಟಿಕ್ ಬಾಬಾನ ಆ 20 ವರ್ಷದ ಹುಡುಗನ ಜೊತೆ ಮಾಡಿದ್ದೇನು ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ರಾಜಸ್ತಾನ ಪೊಲೀಸರು ಸ್ವಯಂಘೋಷಿತ ದೇವಮಾನವ ಕುಲದೀಪ್ ಸಿಂಗ್ ಝಾಲಾ ಎಂಬಾತನನ್ನು ಬಂಧಿಸಿದ್ದಾರೆ. 20 ವರ್ಷದ ಯುವಕ ಯುವರಾಜ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಈತನ ಬಂಧನವಾಗಿದೆ. ದೇವತೆಯರಾದ ಶಕ್ತಿ ಹಾಗೂ ಜಗದಂಬೆ ತನ್ನಲ್ಲಿ ಪುನರ್ಜನ್ಮ ಪಡೆದಿದ್ದಾರೆ ಅಂತಾ ಕುಲದೀಪ್ ಹೇಳಿಕೊಳ್ತಾನೆ. ನವರಾತ್ರಿ ಸಮಯದಲ್ಲಿ ಈತ ಮಹಿಳೆಯರಂತೆ ವೇಷ ಧರಿಸಿ ಲಿಪ್ ಸ್ಟಿಕ್ ಹಚ್ಚಿಕೊಳ್ತಾನೆ. ಈತನನ್ನು ಜನ ಲಿಪ್ ಸ್ಟಿಕ್ ಬಾಬಾ ಎಂದೇ ಕರೆಯುತ್ತಾರೆ. ಮಗನ ಸಾವಿಗೆ ಬಾಬಾ ಕಾರಣ ಅಂತಾ ಯುವರಾಜ್ ತಂದೆ ಸೋಹನ್ ಸಿಂಗ್ ಪೊಲೀಸರಿಗೆ ದೂರು…

  • ಸುದ್ದಿ

    ರಾತ್ರಿಹೊತ್ತು ಪಾಳಿ ಸೆಕ್ಯೂರಿಟಿಯಾಗಿ ದುಡಿಯುತ್ತಿದ್ದ ವಿದ್ಯಾರ್ಥಿ ಈಗ ಇನ್ಫೋಸಿಸ್ ಎಂಜಿನಿಯರ್‌,.!

    ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. ಈ ಸಾಧನೆ ಮಾಡಿ ಮೆಚ್ಚುಗೆಗೆ ಪಾತ್ರನಾದ ಯುವಕ ಅಂಕಿತ್‌. ಈತ ದೆಹಲಿಯವನಾಗಿದ್ದು, ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಹಗಲು ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ರಾತ್ರಿ ಪಾಳಿಯ ದುಡಿಮೆ ಎನ್ನುವ ಕಾರಣಕ್ಕೆ ಆತ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ…

  • ಸುದ್ದಿ

    99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ! ಕಾರಣ ಮಾತ್ರ ಶಾಕಿಂಗ್.

    ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ. ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್…