ಸುದ್ದಿ

ಸ್ನೇಹಿತರು ಕೊಟ್ಟ ಬರ್ತ್ ಡೇ ಬಂಪ್ಸ್ ನಿಂದಾಗಿ ಹುಟ್ಟುಹಬ್ಬದ ದಿನವೇ ಸಾವನಪ್ಪಿದ ವಿಧ್ಯಾರ್ಥಿ…

529

ಹುಟ್ಟುಹಬ್ಬದಂದು ಸ್ನೇಹಿತರು ಎಲ್ಲ ಸೇರಿ ಯುವಕನಿಗೆ ಬರ್ತ್ ಡೇ ಬಂಪ್ಸ್ ಕೊಟ್ಟಿದ್ದು, ಇದರಿಂದ ವಿದ್ಯಾರ್ಥಿ ಮೃತಪಟ್ಟ ಘಟನೆ ತಮಿಳುನಾಡಿದ ಚೆನ್ನೈನಲ್ಲಿ ನಡೆದಿದೆ.

ಕಳೆದ ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೃತಪಟ್ಟ ಯುವಕ ಬೆಂಗಳೂರಿನ ಐಐಎಂ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಯುವಕ ಎರಡು ತಿಂಗಳ ಹಿಂದೆ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸಿಕೊಂಡಿದ್ದನು. ಈ ವೇಳೆ ಸ್ನೇಹಿತರು ಎಲ್ಲರು ಸೇರಿ ಆತನಿಗೆ ಬರ್ತ್ ಡೇ ಬಂಪ್ಸ್ ಕೊಟ್ಟಿದ್ದಾರೆ.

ಬರ್ತ್ ಡೇ ಬಂಪ್ಸ್ ಪಡೆದ ನಂತರ ಯುವಕ ಕ್ಷೇಮವಾಗಿದ್ದನು. ಆದರೆ ಮನೆಗೆ ಹೋದ ನಂತರ ಆತನಿಗೆ ತೀವ್ರವಾಗಿ ಹೊಟ್ಟೆ ನೋವು ಬಂದಿದೆ. ಬಳಿಕ ಆತನ ಪೋಷಕರು ಆತನಿಗೆ ಆಸ್ಪತ್ರೆಗೆ ಸೇರಿಸಿದ್ದರು.

ಸ್ನೇಹಿತರು ಬರ್ತ್‍ಡೇ ಬಂಪ್ಸ್ ಕೊಟ್ಟಿದ್ದರಿಂದ ಯುವಕನ ಮೆದೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್)ಗೆ ಗಂಭೀರವಾಗಿ ಗಾಯಗೊಂಡಿತ್ತು. ಇದರಿಂದ ಯುವಕ ತನ್ನ ಹುಟ್ಟುಹಬ್ಬದಿಂದಲೇ ಮೃತಪಟ್ಟಿದ್ದಾನೆ.

ಹುಟ್ಟುಹಬ್ಬದ ಹೆಸರಲ್ಲಿ ಸ್ನೇಹಿತರು ಮನಬಂದಂತೆ ಯುವಕನಿಗೆ ಥಳಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ