ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸಿಗೆ ಮೋಸ ಮಾಡಲು ಹೋಗಿ ಭೂಮಿ ಶೆಟ್ಟಿ ಅವರು ಸಿಕ್ಕಿಬಿದ್ದಿದ್ದಾರೆ.. ಹೌದು ಈ ವಾರ ಲಕ್ಸುರಿ ಬಡ್ಜೆಟ್ ಗಾಗಿ ಕಳ್ಳ ಪೊಲೀಸ್ ಟಾಸ್ಕ್ ಒಂದನ್ನು ನೀಡಲಾಗಿತ್ತು.. ಅದರಂತೆ ಶೈನ್ ರಾಜು ತಾಳಿಕೋಟೆ ಚಂದನ್ ಪ್ರಿಯಾಂಕ ಪೊಲೀಸರಾದರೆ ಇತ್ತ ವಾಸುಕಿ ದೀಪಿಕಾ ಕುರಿ ಕಳ್ಳರಾಗಿದ್ದರು. ಸುಜಾತ ಪತ್ರಕರ್ತೆಯಾಗಿ ಕಾಣಿಸಿಕೊಂಡರು..

ಇನ್ನುಳಿದಂತೆ ಭೂಮಿ ಪೃಥ್ವಿ ಕಿಶನ್ ಚಂದನ ಹರೀಶ್ ರಾಜ್ ಜನ ಸಾಮಾನ್ಯರಾಗಿದ್ದರು. ಆದರೆ ಜನಸಾಮಾನ್ಯರ ನಡುವೆ ಇದ್ದ ಕಳ್ಳರು ಯಾರೆಂದು ಉಳಿದವರಿಗೆ ತಿಳಿದಿರಲಿಲ್ಲ. ಕಿತ್ತಾಟ ಕಿರುಚಾಟ ಹಾಗೂ ಮನರಂಜನೆಯ ನಡುವೆ ಟಾಸ್ಕ್ ಏನೋ ಸಂಪೂರ್ಣಗೊಂಡಿತು. ಈ ವಾರ ಕ್ಯಾಪ್ಟನ್ ಆಗಿದ್ದ ಶೈನ್ ಅವರು ರಾಜು ತಾಳಿಕೋಟೆ ಅವರಿಗೆ ಬೆಸ್ಟ್ ಪರ್ಫಾರ್ಮರ್ ಕೊಟ್ಟರೆ, ದೀಪಿಕಾರ ಮೈಕ್ ಹಾಳು ಮಾಡಿದ್ದ ಕಾರಣ ಕಿಶನ್ ಅವರಿಗೆ ಕಳಪೆ ಬೋರ್ಡ್ ನೀಡಿದರು.

ಇದೆಲ್ಲದರ ನಡುವೆ ಭೂಮಿ ಶೆಟ್ಟಿ ಅವರು ವಾಸುಕಿ ಮೇಲೆ ಅಧಿಕಾರ ಚಲಾಯಿಸುತ್ತಿದ್ದದ್ದು ನೋಡುಗರಿಗೆ ಹಾಸ್ಯಾಸ್ಪದದಂತೆ ಕಾಣುತ್ತಿದ್ದದ್ದು ಸುಳ್ಳಲ್ಲ. ಜೊತೆಗೆ ಟಾಸ್ಕ್ ನ ಕೊನೆಯ ದಿನವಾದ ನಿನ್ನೆ ಭೂಮಿ ಶೆಟ್ಟಿ ಅವರು ಬಿಗ್ ಬಾಸಿಗೆ ಮೋಸ ಮಾಡಲು ಹೋಗಿ ಸಿಕ್ಕಿಬಿದ್ದರು.

ಹೌದು ಟಾಸ್ಕ್ ಎಲ್ಲಾ ಮುಗಿದ ನಂತರ ವಾಸುಕಿ ಮೇಲೆ ಮಾತಿನ ಪ್ರಹಾರ ನಡೆಸಿದ ಭೂಮಿ ಅವರು. ನೀನು ಕಳ್ಳ ಅಂತ ನನಗೇಕೆ ಮೊದಲೇ ಹೇಳಲಿಲ್ಲ. ನೀನು ಹೇಳಬೇಕಿತ್ತು ಎಂದು ಅಧಿಕಾರ ಚಲಾಯಿಸಿದರು. ಇಲ್ಲ ಬಿಗ್ ಬಾಸ್ ರೂಲ್ಸ್ ಪ್ರಕಾರ ಹೇಳೋ ಹಾಗಿರಲಿಲ್ಲ ಅಲ್ಲವಾ ಅದಕ್ಕೆ ಹೇಳಲಿಲ್ಲ ಎಂದು ವಾಸುಕಿ ಎಷ್ಟೇ ಸಮಾಧಾನದಿಂದ ಹೇಳಿದರೂ. ರೂಲ್ಸ್ ನನಗೂ ಗೊತ್ತು.ಆದರೂ ನೀನು ಹೇಳಬೇಕಿತ್ತು. ಕಳ್ಳ ಆಗಿದ್ದರೆ ಕಣ್ಣಿನ ಮೂಲಕ ನಾನು ಕಳ್ಳ ಅಂತ ಹೇಳಬೇಕು ಎಂದು ಮೊದಲೇ ಹೇಳಿದ್ದೇ ಅಲ್ವಾ. ಎಂದು ಮಾತಿನ ಮಧ್ಯೆ ತಮ್ಮ ಒಳ ಸಂಚನ್ನು ಹೇಳಿಯೇ ಬಿಟ್ಟರು.

ಇದೆಲ್ಲವೂ ಬಿಗ್ ಬಾಸ್ ಕ್ಯಾಮರಾಗಳಲ್ಲಿ ರೆಕಾರ್ಡ್ ಕೂಡ ಆಯಿತು.. ರೂಲ್ಸ್ ಪ್ರಕಾರ ಯಾರಿಗೂ ಹೇಳಬಾರದು ಅಂದರೂ ಕೂಡ ಕಣ್ಸನ್ನೆ ಮೂಲಕ ಹೇಳಬೇಕಿತ್ತು ಎಂದು ಭೂಮಿ ಬಿಗ್ ಬಾಸಿನ ರೂಲ್ಸ್ ಮುರಿದು ಹೊಸ ರೂಲ್ಸ್ ಹುಟ್ಟುಹಾಕಿದ್ದು ಈಗಾಗಲೇ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯ ಶೂಟಿಂಗ್ ನಡೆದಿದ್ದು ಅದರಲ್ಲಿ ಕಿಚ್ಚ ಸುದೀಪ್ ಅವರು ಭೂಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ, ವಿಶೇಷ ಸ್ಥಾನವಿದೆ. ಎಲ್ಲರೂ ಅವರವರ ಭಕ್ತಿಗೆ ತಕ್ಕಂತೆ ಪ್ರತಿದಿನ ಪೂಜೆ ಮಾಡುತ್ತಾರೆ. ಏಕೆಂದರೆ ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ.
ನಿಂತ್ಕೊಂಡು ನೀರು ಕುಡಿತೀರಾ, ಹಾಗಾದರೆ ಇಲ್ನೋಡಿ ವಿಜ್ಞಾನಿಗಳು ಹೇಳಿರೋ ಪ್ರಕಾರ , ಈ ಕಾರಣಗಳ್ನ ಓದಿದ್ರೆ ಶಾಕ್ ಆಗೋದು
ಸಾಮಾನ್ಯವಾಗಿ ಎಲ್ಲರೂ ಯಾವುದೊ ಒಂದು ಕಡೆ ಅಥವಾ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ . ಮುಖ್ಯವಾಗಿ ಹೆಚ್ಚಿನ ಆದಾಯ ಬರುವ ಭರವಸೆಗಳನ್ನು ನೀಡುವ ಕಡೆ ಮೊರೆ ಹೋಗುತ್ತಾರೆ. ಆದಾಯವನ್ನು ನೋಡುತ್ತಾರೆ ಹೊರತು ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ, ಮತ್ತು ಏಜೆಂಟ್ಗಳ ಮೂಲಕ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಮಾಡಿರುವ ಕಂಪನಿಗಳ ಉದಾಹರಣೆಯು ಸಹ ಸಾಕಷ್ಟಿದೆ.ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ. ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ಆಗಬೇಕೆಂದು…
ನಿಮಗೆ ಗೊತ್ತಿರುವ ಹಾಗೆ, ಒಂದು ಒಳ್ಳೆ ಕೆಲಸ ಇದ್ರುನು, ಒಂದು ಮದುವೆ ಆಗಿ, ಒಬ್ಬ ಹೆಂಡತಿಯನ್ನು ಸಾಕುವುದೇ ತುಂಬಾ ಕಷ್ಟ,ಒಬ್ಬ ಹೆಂಡತಿಯ ಬೇಕು ಬೇಡಗಳನ್ನೇ ಇಡೇರಿಸುವುದು ಕಷ್ಟವಾಗಿರುವ ಈ ಕಾಲದಲ್ಲಿ, ಇಲ್ಲೊಬ್ಬ ಮಹಾನುಭಾವ, ಅದರಲ್ಲಿ ಅಂಗವೈಕಲ್ಯತೆ ಹೊಂದಿರುವ ಭಿಕ್ಷುಕನೊಬ್ಬ,
ಕೋಲಾರ: ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್ನಲ್ಲಿ ವಾಸ್ತವ್ಯಹೂಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ…
ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ ಹಾಲುಣಿಸಿದ್ದು, ಬಿಷ್ಣೋಯಿ ಸಮುದಾಯದ ಮಹಿಳೆಯ ಮಾತೃ ವಾತ್ಸಲ್ಯಕ್ಕೆ ಸಾಮಾಜಿ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ಫೋಟೊವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಷ್ಣೋಯಿ ಸಮುದಾಯದ ಮಹಿಳೆಯರು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಸಹೃದಯವುಳ್ಳಂತವರು. ಅವರು ತಮ್ಮ ಮಕ್ಕಳಂತೆ ಪ್ರಾಣಿ ಹಾಗೂ ಪಕ್ಷಿಗಳನ್ನು ಪೋಷಣೆ ಮಾಡುತ್ತಾರೆ ಎಂದು…