ಸುದ್ದಿ

ನಿಮ್ಮ ಮಗುವಿನ ನಿದ್ದೆಯನ್ನು ಇನ್ನೂ ಉತ್ತಮವಾಗಿಸಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ….!

37

ಪಾಲಕರಾದ ಬಳಿಕ ಮಗುವಿನ ಲಾಲನೆ ಪಾಲನೆಯ ಕರ್ತವ್ಯಗಳಲ್ಲಿ ಮಗುವನ್ನು ಮಲಗಿಸುವುದೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿಲ್ಲದ ಮಕ್ಕಳಿಗೆ ದಿನಕ್ಕೆ ಹತ್ತರಿಂದ ಹದಿಮೂರು ಘಂಟೆ ನಿದ್ದೆಯ ಅಗತ್ಯವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆಯೇ ಈ ಅವಧಿಯೂ ಕಡಿಮೆಯಾಗುತ್ತಾ ಬರುತ್ತದೆ. 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಒಂಭತ್ತು ಘಂಟೆ ನಿದ್ದೆ ಅವಶ್ಯವಾಗಿದೆ.

ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು ನಿಮ್ಮ ಮಕ್ಕಳನ್ನು ಆದಷ್ಟೂ ಹಗಲಿನ ವೇಳೆಯಲ್ಲಿ ಹೊರಗಿನ ಆಟ ಮತ್ತು ಚಟುವಟಿಕೆಗಳಲ್ಲಿ ಒಳಗೊಳ್ಳುವಂತೆ ಮಾಡಿ. ಇದರಿಂದ ಹೆಚ್ಚು ಹೆಚ್ಚಾಗಿ ಸೂರ್ಯನ ಬೆಳಕನ್ನು ನೋಡುವಂತಾಗುತ್ತದೆ ಹಾಗೂ ಈ ಬೆಳಕಿನಲ್ಲಿ ಮೆದುಳಿನಲ್ಲಿ ಉತ್ಪತ್ತಿಯಾಗುವ ಮೆಲಟೋನಿನ್ ಪ್ರಮಾಣವನ್ನು ತಡೆಯುತ್ತದೆ. ಸಮಯಕ್ಕೆ ಸರಿಯಾಗಿ ನಮ್ಮ ನಿದ್ದೆ ಆವರಿಸಲು ಮತ್ತು ಎಚ್ಚರಾಗಲು ಈ ಮೆಲಟೋನಿನ್ ಪ್ರಮುಖ ಕಾರಣವಾಗಿದೆ. ಈ ವಿಧಾನದ ಮೂಲಕ ಮಕ್ಕಳು ಹಗಲಿನ ಹೊತ್ತು ಎಚ್ಚರಾಗಿದ್ದು ರಾತ್ರಿಯ ಸಮಯದಲ್ಲಿ ಬೇಗನೇ ಮಲಗತೊಡಗುತ್ತಾರೆ.

ಕೆಫೇನ್ ಇರುವ ಪೇಯಗಳನ್ನು ನೀಡದಿರಿ ಯಾವುದೇ ಕೆಫೀನ್ ಇರುವ ಪಾನೀಯ, ಉದಾಹರಣೆಗೆ, ಟೀ, ಕಾಫಿ, ಬುರುಗು ಪಾನೀಯ, ಸೋಡಾ ಮೊದಲಾದವುಗಳ ಸೇವನೆಯಿಂದ ಮಕ್ಕಳಲ್ಲಿ ನಿದ್ದೆ ಹಾರಿ ಹೋಗುತ್ತದೆ ಹಾಗೂ ಇವರನ್ನು ಮಲಗಿಸುವುದು ಭಾರೀ ಕಷ್ಟಕರವಾದ ಕೆಲಸವಾಗುತ್ತದೆ. ಹಾಗಾಗಿ ಸಂಜೆಯ ಬಳಿಕ ಈ ಯಾವುದೇ ಪಾನೀಯಗಳನ್ನು ನೀಡದಿರಿ.
ರಾತ್ರಿ ಮಲಗಲು ನಿರ್ದಿಷ್ಟ ಸಮಯವನ್ನು ಅನುಸರಿಸಿ ನಿಮ್ಮ ಮಕ್ಕಳು ಪ್ರತಿದಿನ ಒಂದೇ ಸಮಯಕ್ಕೆ ಸರಿಯಾಗಿ ಮಲಗುವಂತೆ ವೇಳಾಪಟ್ಟಿಯನ್ನು ನಿರ್ಧರಿಸಿ ಈ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಕ್ಕಳನ್ನು ಪ್ರೇರೇಪಿಸಿ. ಇದು ಮಕ್ಕಳಲ್ಲಿ ಆರೋಗ್ಯಕರ ವೇಳಾಪಟ್ಟಿಯನ್ನು ಅನುಸರಿಸುವ ಉತ್ತಮ ಅಭ್ಯಾಸ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ದೇಹದ ಜೈವಿಕ ಗಡಿಯಾರ ಈ ಸಮಯಗಳಿಗೆ ಅನುಸಾರವಾಗಿ ಸ್ಪಂದಿಸತೊಡಗುತ್ತದೆ.

ಮಕ್ಕಳು ಸುರಕ್ಷತಾ ಭಾವನೆ ಹೊಂದುವಂತೆ ಮಾಡಿ ಸಂಜೆಯ ಬಳಿಕ ಮಕ್ಕಳಲ್ಲಿ ಹೆದರಿಕೆ ಹುಟ್ಟಿಸುವ ಯಾವುದೇ ಕಥೆಗಳನ್ನಾಗಲೀ, ಸಿನೇಮಾಗಳನ್ನಾಗಲೀ ಕೇಳುವುದಾಗಲೀ, ನೋಡುವುದಾಗಲೀ ಬೇಡ. ಈ ಹೆದರಿಕೆಯ ವಿಷಯಗಳು ಮಕ್ಕಳ ಮನದಲ್ಲಿ ಅಚ್ಚೊತ್ತಿದಂತೆ ನೆನಪಿನಲ್ಲಿ ಉಳಿಯುತ್ತವೆ ಹಾಗೂ ಈ ಹೆದರಿಕೆಯಿಂದಾಗಿ ಮಕ್ಕಳಿಗೆ ಬೇಗನೇ ಮಲಗಲು ಸಾಧ್ಯವಾಗದೇ ಹೋಗಬಹುದು.ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿ ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಸೇವಿಸಿದರೆ ಇದು ನಿದ್ದೆಯ ವೇಳಾಪಟ್ಟಿಯನ್ನು ಏರುಪೇರುಗೊಳಿಸಬಹುದು. ಅಲ್ಲದೇ ಮಕ್ಕಳು ಸಂಜೆಯ ಬಳಿಕ ಕುಡಿಯುವ ನೀರಿನ ಪ್ರಮಾಣ ಅತಿಯಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಅತಿಯಾದರೆ ರಾತ್ರಿಯ ಸಮಯದಲ್ಲಿ ಮೂತ್ರವಿಸರ್ಜನೆಗೆ ಕೆಲವಾರು ಬಾರಿ ಏಳಬೇಕಾಗುತ್ತದೆ. ಇದು ನಿದ್ದೆಯನ್ನು ಭಂಗಗೊಳಿಸಬಹುದು. ಅಲ್ಲದೇ ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜಿಸಿದ ಬಳಿಕವೇ ಮಲಗುವಂತೆ ರೂಢಿ ಮಾಡಿಸಿ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಈ ಹೊಸ ವರದಿ ಪ್ರಕಾರ ಖಾಸಗಿ ಆಸ್ಪತ್ರೆಗಳು ಜನರಿಂದ 1700% ಅಧಿಕವಾಗಿ ಹಣ ಸ್ವೀಕರಿಸುತ್ತಿದ್ದಾರೆ ಎನುತ್ತೆ..!

    ಜನ ಸೇವೆಗೆಂದು ತೆರೆಯುವ ಆಸ್ಪತ್ರೆಗಳು ಈಗ ತೀರಾ ವಿರಳ. ಯಾವುದಾದರು ಕಾಯಿಲೆ ಎಂದು ಖಾಸಗಿ ಆಸ್ಪತ್ರೆಗೆ ಸೇರಿದರೆ ರೋಗಿಯು, ರೋಗದಿಂದಲ್ಲ, ಆಸ್ಪತೆರ್ಗಳು ನೀಡುವ ಬಿಲ್ಲಿನಿಂದ ಸಾಯುತ್ತಾನೆ. ಇನ್ನು ಆಸ್ಪತ್ರೆ ಯಾವ ರೀತಿ ವ್ಯವಹಾರ ಮಾಡುತ್ತಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  • ಸುದ್ದಿ

    ಸ್ಯಾಂಡಲ್ ವುಡ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ಗೌರವ. ಈ ನ್ಯೂಸ್ ನೋಡಿ.

    ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಕೂಡಾ ಸಾಹಸ ನಿರ್ದೇಶನ ಮಾಡಿ, ಸಿನಿಮಾ ರಂಗದಲ್ಲಿ ತನ್ನದೇ ಆದಂತಹ ಹೆಸರು, ಖ್ಯಾತಿ ಮತ್ತು ಸ್ಥಾನವನ್ನು ಪಡೆದಿರುವ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು. ದಶಕಗಳಿಂದ ಚಿತ್ರರಂಗದಲ್ಲಿ ಸಾಹಸ ನಿರ್ದೇಶನ ಮಾಡಿರುವ ಅವರು ನಟ ಹಾಗೂ ನಿರ್ದೇಶಕನಾಗಿ ಕೂಡಾ ಹೆಸರು ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಿನಿಮಾ ರಂಗದ ಈ ಸಾಧನೆ, ಅವರ ಶ್ರಮ ಹಾಗೂ ಪರಿಶ್ರಮಕ್ಕೆ ತಕ್ಕ ಫಲವಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಗಿದೆ. ಥ್ರಿಲ್ಲರ್ ಮಂಜು ಅವರಿಗೆ ಸಂದಿರುವ…

  • ಗ್ಯಾಜೆಟ್

    ಕೇವಲ 98 ರೂ..! ತನ್ನ ಗ್ರಾಹಕರಿಗೆ ಜಿಯೋ ಕೊಡ್ತು ಬಿಗ್ ಆಫರ್…

    ಜಿಯೋ ಬಂದಮೇಲೆ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿ ಶುರುವಾಗಿದ್ದು,ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ

  • ದೇಶ-ವಿದೇಶ

    ಅಗಸ್ಟ್ 15ರ ನಂತರ ಮೋದಿ ಸರ್ಕಾರದಿಂದ, ಭ್ರಷ್ಟ ಅಧಿಕಾರಿಗಳಿಗೆ ಕಾದಿದೆ ಮಾರಿ ಹಬ್ಬ..!ಏನು ಗೊತ್ತಾ?ಈ ಲೇಖನಿ ಓದಿ…

    1000 ಮತ್ತು 500ರೂಗಳ ನೋಟ್ ಬ್ಯಾನ್ ಮಾಡಿ ಕಾಳಧನಿಕರ ಸೊಕ್ಕಡಿಗಿಸಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಈಗ ಮತ್ತೊಂದು ಕಾರ್ಯಕ್ಕೆ ಡೆಡ್ ಲೈನ್ ಕೊಟ್ಟಿದೆ.

  • ಸುದ್ದಿ

    ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬೇಕೇ; ಹಾಗಾದರೆ ಅಮಾವಾಸ್ಯೆಯಂದು ಹೀಗೆ ಮಾಡಿದರೆ ಸಾಕು,..

    ಹಿಂದಿನ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಅಮಾವಾಸ್ಯೆಯಂದು ತಿಂಗಳ ರಜೆಯನ್ನಾಗಿ ನೀಡಲಾಗುತ್ತಿತ್ತು. ಪ್ರತಿತಿಂಗಳೂ ಅವಮಾಸ್ಯೆಯಂದು ರಜೆ ಇತ್ತು. ಅಮಾವಾಸ್ಯೆಯು ಶುಭವಲ್ಲವೆಂದು ಯಾರೂ ಕೆಲಸ ಮಾಡುತ್ತಿರಲಿಲ್ಲ. ಪ್ರಯಾಣವನ್ನೂ ಕೂಡಾ ಅಮವಾಸ್ಯೆಯಂದು ಮಾಡುತ್ತಿರಲಿಲ್ಲ.ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನನಡವಳಿಕೆಯ ಮೇಲೂ ಚಂದ್ರನು ಪ್ರಭಾವಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದುಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತುಹಲವಾರು ಆಚರಣೆಗಳು, ನಂಬಿಕೆಗಳು ಇವೆ. ಅಮಾವಾಸ್ಯೆ ಒಳ್ಳೆಯದೇ? : ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ…

  • ಸುದ್ದಿ

    ಮೆಟ್ರೋದಲ್ಲಿ ತೊಂದರೆಯುಂಟಾಗಿ – ಟ್ರ್ಯಾಕ್ ಮೇಲೆ ನಡೆದು ಸಾಗಿದ ಪ್ರಯಾಣಿಕರು….!

    ನವದೆಹಲಿ: ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಹಳದಿ ಮಾರ್ಗದ ಮೆಟ್ರೋ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಹಳಿ ಮೇಲೆ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದ್ದಾರೆ. ಮಂಗಳವಾದ ಬೆಳಗ್ಗೆ ಸುಮಾರು 9.30ಕ್ಕೆ ಹಳದಿ ಮಾರ್ಗದಲ್ಲಿ ಕುತಬ್ ಮಿನಾರ್ ನಿಲ್ದಾಣದಿಂದ ಮೆಟ್ರೋ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗೆ ಚಲಿಸುತ್ತಿರುವಾಗಲೇ ಸುಲ್ತಾನಪುರ ನಿಲ್ದಾಣಕ್ಕೆ ಮೊದಲೇ ನಿಂತಿದೆ. ಕೊನೆಗೆ ಎಮೆರ್ಜೆನ್ಸಿ ಗೇಟ್‍ನಿಂದ ಪ್ರಯಾಣಿಕರನ್ನು ಹೊರ ಬಂದು, ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ…