ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ.
ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ ವೃದ್ಧೆಗೆ ಇತ್ತು. ಈ ಹಿನ್ನೆಲೆಯಲ್ಲಿ ಈಗ ಮೊಮ್ಮಗಳು ಅಜ್ಜಿಯ ಕೋರಿಕೆಯನ್ನು ಇಡೇರಿಸಲು ಯುಕೆ ನ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ವೃದ್ಧೆಯನ್ನು ಬಂಧಿಸಿದ್ದಾರೆ.

ಅಜ್ಜಿಯನ್ನು ಪೋಲೀಸರು ಬಂಧಿಸಿ ಅವರ ಆಸೆ ತೀರಿಸಿದ್ದಕ್ಕೆ ಮೊಮ್ಮಗಳು ಪಾಮ್ ಸ್ಮಿತ್ ಟ್ವಿಟ್ಟರ್ ನಲ್ಲಿ ಖಾಕಿ ಪಡೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಅಜ್ಜಿ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ತನ್ನ ಈ ಆಸೆ ಬಗ್ಗೆ ಸ್ಮಿತ್ ಬಳಿ ಹೇಳಿದ್ದರು. ತನ್ನ ಅಜ್ಜಿಯ ಆರೋಗ್ಯವು ಏರುಪೇರು ಆಗುತಿತ್ತು. ತನ್ನ ಜೀವನದ ಉದ್ದಕ್ಕೂ ಚೆನ್ನಾಗಿದ್ದರಿಂದ ಯಾವುದಾದರು ಕಹಿ ಅನುಭವವನ್ನು ಹೊಂದಬೇಕೆಂದು ಎಂದು ಬಯಸಿದ್ದರು.

ಈ ಹಿನ್ನಲೆಯಲ್ಲಿ ವಯಸ್ಸಾದರೂ ತನ್ನನ್ನು ಬಂಧಿಸಬೇಕೆಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಈಗ ಆ ಅಜ್ಜಿ ಪೋಲೀಸರ ಬಂಧನದಿಂದ ಖುಷಿಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿ ಮಾತನಾಡಿ, ವೃದ್ಧೆಯ ಆಸೆಯನ್ನು ನಾವು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರ ಜೀವನದಲ್ಲಿ ನೆನಪಿಟ್ಟುಕೊಳ್ಳುವ ಒಂದು ದಿನವನ್ನು ನಾವು ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು…
ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…
ದಕ್ಷಿಣ ಭಾರತದ ಪ್ರಮುಖ ಬ್ರೇಕ್ಫಾಸ್ಟ್ಗಳಲ್ಲಿ ಇಡ್ಲಿ ಕೂಡಾ ಒಂದು. ಪ್ರತಿಯೊಬ್ಬರ ಫೇವರಿಟ್ ತಿಂಡಿಯಾಗಿರುವ ಬಿಸಿ ಬಿಸಿ ಇಡ್ಲಿಗಳು ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಇಲ್ಲ. ಕ್ಯಾಲೊರಿ ಅಂಶವೂ ಅತ್ಯಂತ ಕಡಿಮೆ ಇದೆ. ಹೊಟ್ಟೆಗೂ ಹಿತವಾಗಿರುವ ಈ ಆಹಾರದಲ್ಲಿ ಹಲವಾರು ವೆರೈಟಿಗಳಿವೆ.
ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾಗ ಪೋಷಕಾಂಶಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಕಾಳುಗಳನ್ನ ಮೊಳಕೆ ಕಟ್ಟಿ ತಿಂದರೆ ಇನ್ನು ಉತ್ತಮ. ಬನ್ನಿ ಹಾಗಾದರೆ ಮೊಳಕೆ ಕಾಳುಗಳಿಂದ ಏನೆಲ್ಲಾ ಪ್ರಯೋಜನಗಳು ನಮಗೆ ಲಭ್ಯ ಎಂಬುದನ್ನ ತಿಳಿದು ಕೊಳ್ಳೋಣ.
ನಿಮಗೆ ಒಂದು ಚಾಲೆಂಜ್ ? ಏನು ಗೊತ್ತೇ ಈ ಕೆಳಗಿನ ಚಿತ್ರಗಳನ್ನು ನೋಡಿ, ಪ್ರತಿಯೊಂದು ಚಿತ್ರಗಳಿಗೆ ಸಂಖ್ಯೆಯನ್ನು ಕೊಡಲಾಗಿದೆ. ಆ ಚಿತ್ರಕ್ಕೆ ಹೊದಿಕೊಳ್ಳುವಂತ ಕಾಮೆಂಟನ್ನು ಬರೆಯಿರಿ.
ಹಾಲಿವುಡ್ ನಟಿ ಆ್ಯಂಜಲೀನಾ ಜೋಲಿಯಂತೆ ಕಾಣಲು ಇರಾನಿನ ಯುವತಿಯೊಬ್ಬಳು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದಾರೆ.