ಭಾರತೀಯ ಸೇನಗಾಗಿ ಟಾಟಾ ಮೋಟಾರ್ಸ್ ತಮ್ಮ ಸಫಾರಿ ಸ್ಟೋರ್ಮ್ ಕಾರನ್ನು ತಯಾರಿಸಿ ನೀಡುತ್ತಿರುವ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಆದ್ರೆ ಸೇನೆಯಲ್ಲಿ ಬಳಸಲಾಗುತ್ತಿರವ ದ್ವಿಚಕ್ರ ವಾಹನಗಳು ಕಡಿಮೆ ಶಕ್ತಿಶಾಲಿಯಾದ ಕಾರಣ ಚತ್ತೀಸ್‍ಗಢ್‍ನ ಯುವಕನೊಬ್ಬ 800ಸಿಸಿ ಸಾಮರ್ಥ್ಯವಿರುವ ವಿಶೇಷ ಬೈಕ್ ಒಂದನ್ನ ತಯಾರು ಮಾಡಿದ್ದಾನೆ.ಪ್ರಸ್ತುತ ಭಾರತೀಯ ಸೇನೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ 350ಸಿಸಿ ಮತ್ತು 500ಸಿಸಿ ಬೈಕ್‍ಗಳನ್ನು ಬಳಸಲಾಗುತ್ತಿದ್ದು, ಅಮೆರಿಕನ್ ಸೇನೆಯು ಹೆಚ್ಚು ಸಾಮರ್ಥ್ಯವಿರುವ ಯುನೈಟೆಡ್ ಮೋಟಾರ್ಸ್‍ನ ಮತ್ತು ಹಾರ್ಲೇ ಡೇವಿಡ್ಸನ್ ಸಂಸ್ಥೆಯ ಅಧಿಕ ಸಾಮರ್ಥ್ಯವಿರುವ ಬೈಕ್‍ಗಳನ್ನು ಬಳಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಚತ್ತೀಸ್‍ಗಢ್‍ನಲ್ಲಿನ ರಾಯ್‍ಪುರ್ ನಿವಾಸಿಯಾದ ವೈಭವ್ ಭಾಜ್‍ಪೇ ಎಂಬ ಯುವಕ ಮಾರುತಿ ಆಲ್ಟೋ ಕಾರಿನಲ್ಲಿರುವ 800ಸಿಸಿಯನ್ನು ಎಂಜಿನ್ ಬಳಸಿ ಹೊಸ ಬೈಕ್ ಒಂದನ್ನು ತಯಾರು ಮಾಡಿದ್ದಾನೆ. ಇಂದಿನ ಲೇಖನದಲ್ಲಿ ಈ ಬೈಕಿನ ಕುರಿತಾಗಾಗಿ ಹೆಚ್ಚು ಮಾಹಿತಿಯನ್ನು ತಿಳಿಯಿರಿ. ಸುಮಾರು 18 ತಿಂಗಳ ಕಾಲ ಪ್ರಯತ್ನದ ಫಲವಾಗಿ ವೈಭವ್ ಭಾಜ್‍ಪೇ ಎಂಬ ಯುವಕ ಭಾರತೀಯ ಸೇನೆಗಾಗಿ ವಿಶೇಷವಾದ ಬೈಕ್ ಒಂದನ್ನು ತಯಾರು ಮಾಡಲಾಗಿದ್ದು, ಈ ಬೈಕ್‍ಗೆ ಅಮರ್ ಜವಾನ್ ಎಂದು ಆತ ಹೆಸರಿಟ್ಟಿದ್ದಾನೆ.
ಈ ಅಮರ್ ಜವಾನ್ ಬೈಕ್ ನೋಡಲು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಬೈಕಿನ ಮುಂಭಾಗದಲ್ಲಿ ಸೈನಿಕನ ಮುಖದ ವಿನ್ಯಾಸದ ಮಾದರಿಯಲ್ಲಿ ಹೆಡ್‍ಲ್ಯಾಂಪ್‍ಗಳು ಮತ್ತು ಸಣ್ಣದಾದ ವಿಂಡ್‍ಶೀಲ್ಡ್ ನ ಮೇಲೆ ‘ಅಮರ್ ಜವಾನ್’ ಎಂಬ ಹೆಸರನ್ನು ಅಳವಡಿಸಲಾಗಿದೆ. ಸುಮಾರು 24 ರಿಂದ 27 ಲೀಟರ್ ಪೆಟ್ರೋಲ್ ಅನ್ನು ತುಂಬಲಾಗುವ ಈ ಬೈಕ್‍ನಲ್ಲಿ 800ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಪ್ರತಿ ಕಿಲೋಮೀಟರ್‍ಗೆ 22 ರಿಂದ 27 ಕಿಲೋಮೀಟರ್ ಮೈಲೇಜ್ ನೀಡುವ ಹಾಗೆ ಈ ಬೈಕ್ ಅನ್ನು ತಯಾರು ಮಾಡಿದ್ದಾನೆ.
ಬೈಕ್‍ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೇ, ಹಿಂಭಾಗದಲ್ಲಿ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದಲ್ಲಿ ಕೂಡಾ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಫಾರ್ವಡ್ 4 ಗೇರ್‍ಗಳು ಮತ್ತು 4 ರಿವರ್ಸ್ ಗೇರ್ ಅಂದರೆ ಒಟ್ಟಾರೆಯಾಗಿ 8 ಗೇರ್‍ಗಳನ್ನು ಬದಲಾಯಿಸಬಹುದಾಗಿದೆ. ಅಮರ್ ಜವಾನ್ ಬೈಕಿನಲ್ಲಿ ಬಹುತೇಕ ವಾಹನಗಳಲ್ಲಿ ಕಾಣಬಹುದಾದ ಹಳದಿ ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ಈ ಬೈಕಿಗೆ ಬಳಸಲಾಗಿದೆ. ಸುಮಾರು 450 ಕಿಲೋಗ್ರಾಂ ತೂಕವಿರುವ ಈ ಬೈಕ್ ಜಿಪಿಎಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಎಂಬ ಆಯ್ಕೆಗಳನ್ನು ಸಹ ಅಳವಡಿಸಲಾಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಕೋಲಾರ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆ, ಬಂಗಾರಪೇಟೆ ತಾಲ್ಲೂಕು, ಕೆ.ಜಿ.ಎಫ್. ಉಪ-ವಿಭಾಗದ ಸರಹದ್ದಿನ ಬಂಗಾರಪೇಟೆ ತಾಲ್ಲೂಕು, ಹೊಸಕೋಟೆ ಗ್ರಾಮದ ವಾಸಿ ಆನಂದ್ ಬಿನ್ ಮುನಿವೆಂಕಟಪ್ಪ ಮತ್ತು ಕೆ.ಜಿ.ಎಫ್. ತಾಲ್ಲೂಕು, ಕ್ಯಾಸಂಬಳ್ಳಿ ಹೋಬಳಿ, ತಿಮ್ಮಾಪುರ ಗ್ರಾಮದ ವಾಸಿ ಕಾಂತ್‌ರಾಜ್ ಬಿನ್ ವೆಂಕಟೇಶಪ್ಪ ಮತ್ತು ಎ.ಕೆ. ಕಾಲೋನಿ, ಕಾಮಸಮದ್ರಂ, ಬಂಗಾರಪೇಟೆ ತಾಲ್ಲೂಕಿನ ವಾಸಿ ಪ್ರವೀಣ್ ಕೆ. ಬಿನ್ ಕೋದಂಡಪ್ಪ, ಮತ್ತು ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕಿನ ವಾಸಿ ವೇಣು ಬಿನ್ ಗೋವಿಂದಪ್ಪರವರುಗಳು ದಿನಾಂಕ 18-02-2022 ರಂದು ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು…
ಎಲ್ಲರ ಜೀವನ ಅವರು ಅಂದುಕೊಂಡಷ್ಟು ಸುಲಭವೂ ಸುಗಮವೂ ಆಗಿರಲ್ಲ. ಇಂದು ನೀವು ಯಾರನ್ನು ಯಶಸ್ವಿ ವ್ಯಕ್ತಿಗಳು ಎಂದು ಗುರುತಿಸುತ್ತೀರೋ ಅವರು ಹುಟ್ಟಿದಾಗಿನಿಂದ ಯಶಸ್ಸು ಪಡೆದು ಬಂದವರಲ್ಲ ಬದಲಿಗೆ ಅವಮಾನ ಸನ್ಮಾನ ಎಲ್ಲವನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿ ಬದುಕಿದವರು. ನೆನಪಿರಲಿ ಬದುಕಿನ ದಾರಿಯಲ್ಲಿ ನಮ್ಮವರಿಂದಲೇ ನಮಗೆ ವಾಮನ ನಮ್ಮವರಿಂದಲೇ ಸನ್ಮಾನ. ಅದೇನೇ ಇರಲಿ ಇಲೊಬ್ಬಳು ಹೆಣ್ಣುಮಗಳಿದ್ದಾಳೆ ಆಕೆ ಹೇಗೆ ಐಪಿಎಸ್ ಅಧಿಕಾರಿ ಆದಳು ಎನ್ನುವ ಸ್ಟೋರಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ. ಈ ಸ್ಟೋರಿ ಕೇಳಿದ ನೀವು…
ಪಣಜಿ, ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್ಟಿ ಮಂಡಳಿ ಕೆಫೀನ್ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು ಇಳಿಸಿದೆ. ಜಿಎಸ್ಟಿ ಮಂಡಳಿ ಸಭೆಯ ಬಳಿಕ ಶುಕ್ರವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಒಂದು ರಾತ್ರಿ ತಂಗಲು 1 ಸಾವಿರ ರೂ.ವರೆಗಿನ ಹೋಟೆಲ್ ಕೋಣೆಗಳ ಬಾಡಿಗೆ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು…
ರಾಜ್ಯದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಮಂಗಳವಾರವೇ ಜಾರಿಗೆ ಬಂದಿದೆ. ಸಂಚಾರ ನಿಯಮಗಳನ್ನು ಕೇರ್ ಮಾಡದ ವಾಹನ ಸವಾರರು ಭಾರೀ ದಂಡ. ದಂಡಕ್ಕೆ ಹೆದರಿ ರಸ್ತೆಗಿಳಿಯದ ವಾಹನಗಳು, ಒಡಿಶಾದಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ ಕುಸಿತಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ದಂಡಗಳನ್ನು ನೋಡಿ ಬೆಚ್ಚ ಬಿದ್ದಿರುವ ವಾಹನ ಸವಾರರು ಹಲವರು ತಮ್ಮ ವಾಹನಗಳನ್ನು ಮನೆಯಿಂದ ಹೊರಗೆ ತರುತ್ತಿಲ್ಲವಂತೆ. ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ಬೇಡಿಕೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆಯಂತೆ. ಹೌದು ಒಡಿಶಾದಲ್ಲಿ ಪೆಟ್ರೋಲ್…
ಪ್ರತಿ ವರ್ಷದಂತೆ ಈ ವರ್ಷವೂ 15 ದಿನಗಳ ಕಾಲ ಆಚರಿಸಲ್ಪಡುವ ಪಿತೃಪಕ್ಷ ಶುರುವಾಗಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಆರಾಧನೆ ನಡೆಯುತ್ತದೆ. ಪಿತೃಪಕ್ಷದಲ್ಲಿ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಜ್ಯೋತಿಷ್ಯ ಕಾರಣಗಳಿಂದ ಮಾತ್ರವಲ್ಲ ಇದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಪಿತೃಪಕ್ಷದಲ್ಲಿ ಕೆಲ ಆಹಾರ ಸೇವನೆ ಮಾಡುವುದ್ರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದು ಶ್ರಾದ್ಧದ ಕೆಲಸ ಮಾಡಲು ಅಡ್ಡಿಯುಂಟು ಮಾಡುತ್ತದೆ. ಈ ಸಮಯದಲ್ಲಿ ಹಸುವಿನ ಹಾಲನ್ನು ಕುಡಿಯಬಾರದು. ಹಸು ಈಗಷ್ಟೆ ಮಗುವಿಗೆ ಜನ್ಮ ನೀಡಿದ್ದರೆ ಆ ಹಾಲನ್ನು ಅಪ್ಪಿತಪ್ಪಿಯೂ ಕುಡಿಯಬಾರದು. ಈ ಸಮಯದಲ್ಲಿ…
ಇಡೀ ಭೂಮಿ ಕೌತುಗಳ ಆಗರ, ಭಾರತ ಹಾಗು ಇಲ್ಲಿನ ಹಿಂದೂ ಧರ್ಮವನ್ನು ಇಂದು ಇಡೀ ವಿಶ್ವದಾದ್ಯಂತ ಇರುವ ಬಹತೇಕ ದೇಶಗಳು ಸಂಶೋಧನೆ ಮಾಡುತಿದ್ದಾವೆ..! ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು.