ಸುದ್ದಿ

ಬಸ್ ಕಂದಕಕ್ಕೆ ಬಿದ್ದು 6 ಮಂದಿ ಸಾವು, 39 ಜನರಿಗೆ ತೀವ್ರ ಗಾಯ….!

45

ಬಸ್ ಕಂದಕಕ್ಕೆ ಉರುಳಿ 6 ಮಂದಿ ಮೃತಪಟ್ಟು, 39 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಜಾರ್ಖಂಡ್‍ನ ಗಹ್ರ್ವಾದಲ್ಲಿ ನಡೆದಿದೆ.

ಜಿಲ್ಲಾ ಕೇಂದ್ರವಾದ ಗಹ್ರ್ವಾದಿಂದ ಅಂಬಿಕಾಪುರ ರಸ್ತೆಯ 14 ಕಿ.ಮೀ ದೂರದಲ್ಲಿ ಇರುವ ಅನ್ನಜ್ ನವೀದ್ ಕಣಿವೆಯಲ್ಲಿ ಬಸ್ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ 6 ಮಂದಿ ಮೃತಪಟ್ಟಿದ್ದು, 39 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಅಂಬಿಕಾಪುರದಿಂದ ಸಾಸಾರಾಮ್ ಕಡೆಗೆ ಹೋಗುತ್ತಿತ್ತು.

ನಸುಕಿನ ಜಾವ ಸುಮಾರು 2.30ಕ್ಕೆ ಈ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಆಸ್ಪತ್ರೆಗೆ ದಾಖಲಾದ ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ.

ಬಸ್ ಕಂದಕಕ್ಕೆ ಉರುಳಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಪೊಲೀಸರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಬಸ್ ಕೆಳಗೆ ಇನ್ನು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಸಹ ರಕ್ಷಣಾ ಕಾರ್ಯಕ್ಕೆ ಪೊಲೀಸರಿಗೆ ಸಾಥ್ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ವಿಷ್ಣು-ಸೌಂದರ್ಯ ಸಾವಿಗೆ ಇವಳೇ ಕಾರಣನಾ..!ಮತ್ತೆ ಸುದ್ದಿಯಾಗುತ್ತಿದೆ ನಾಗವಲ್ಲಿ..!ತಿಳಿಯಲು ಈ ಲೇಖನ ಓದಿ…

    ನಾಗವಲ್ಲಿ ಪಾತ್ರ ಜನಪ್ರಿಯವಾದ ಕಾರಣ ಅದೇ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ಆದರೆ, ಚಿತ್ರರಂಗದವರು ಅಷ್ಟಕ್ಕೇ ಬಿಡುವ ಹಾಗೆ ಕಾಣುತ್ತಿಲ್ಲ. ವಿಷ್ಣುವರ್ಧನ್ ಮತ್ತು ಸೌಂದರ್ಯ ಅವರ ಸಾವಿಗೆ ಅದೇ ನಾಗವಲ್ಲಿ ಕಾರಣನಾ ಎಂಬ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಆಗಿದೆ.

  • ಸುದ್ದಿ

    ರೈಲಿನಲ್ಲಿ ಮೃತ ಆತ್ಮಗಳಿಗೂ ಆಗುತ್ತದೆ ಟಿಕೆಟ್ ಬುಕ್ಕಿಂಗ್ …!

    ಸದ್ಯ ಪಿತೃಪಕ್ಷ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಜನರು ಗಯಾಕ್ಕೆ ಬಂದು ಪಿಂಡದಾನ ಮಾಡ್ತಾರೆ. ಒಡಿಸಾದ ಕಠ್ಮಂಡುವಿನಿಂದ ಬಂದ ಪಿಂಡದಾನಿಗಳ ತಂಡವೊಂದು ಗಮನ ಸೆಳೆದಿದೆ. ಅವ್ರು ರೈಲಿನಲ್ಲಿ ಪೂರ್ವಜರಿಗೂ ಟಿಕೆಟ್ ಬುಕ್ ಮಾಡಿದ್ದಾರೆ. ಪೂರ್ವಜರ ಬಗ್ಗೆ ಇವರಿಗೆ ನಂಬಿಕೆಯಿಂದೆಯಂತೆ. ಪಿಂಡದಾನಕ್ಕೆ ಬರುವ ಏಳು ದಿನಗಳ ಮೊದಲು ಭಗವದ್ಗೀತೆ ಪಠಣ ಮಾಡ್ತಾರಂತೆ. ನಂತ್ರ ಪೂರ್ವಜರ ವಸ್ತುಗಳನ್ನು ಕಟ್ಟಿ ಪಿತೃದಂಡ ಸಿದ್ಧಪಡಿಸುತ್ತಾರಂತೆ….

  • ಉಪಯುಕ್ತ ಮಾಹಿತಿ

    ಮಹಾಲಯ ಅಮಾವಾಸ್ಯೆ ಕಳೆದು ಒಂದು ತಿಂಗಳ ನಂತರ ದಸರಾ ಯಾಕೆ ಬರುತ್ತಿದೆ !

    ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…

  • ಆರೋಗ್ಯ

    ಹಲ್ಲು ಹಳದಿಗಟ್ಟಿದೆಯೇ? ಬಾಯ್ತುಂಬಾ ನಗಲೂ ನಾಚಿಕೆಯಾಗುತ್ತಿದೆಯೇ? ಹಾಗಾದ್ರೆ ಕೆಲವು ಸಿಂಪಲ್ ಮನೆ ಮದ್ದು ಮಾಡೊದು ಹೇಗೆ ಎಂದು ತಿಳಿಯಲು ಈ ಲೇಖನ ಓದಿ…

    ಹಲ್ಲುಜ್ಜಲು ಬಳಸುವ ಪೇಸ್ಟ್ ಜತೆಗೆ ಸ್ವಲ್ಪ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಹಲ್ಲುಜ್ಜಿ ನೋಡಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಹಲ್ಲು ಹಳದಿಗಟ್ಟುವಿಕೆ ತಡೆಯಬಹುದು.

  • ಸುದ್ದಿ

    ಪುಲ್ವಾಮಾದಲ್ಲಿ ಎನ್‍ಕೌಂಟರ್- ಇಬ್ಬರು ಉಗ್ರರನ್ನು ವಡೆದುರುಳಿಸಿದ ನಮ್ಮ ಭದ್ರತಾ ಪಡೆ!

    ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಪಂಜ್ಗಾಮ್ ಗ್ರಾಮದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅವಂತಿಪುರದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ನೆಲಸಮ ಮಾಡಿದೆ. ಸಿಆರ್​ಪಿಎಫ್​ ನ 130ನೇ ಬೆಟಾಲಿನ್‍ನ 55 ರಾಷ್ಟ್ರೀಯ ರೈಫಲ್(ಆರ್‍ಆರ್) ಹಾಗೂ ವಿಶೇಷ ಕಾರ್ಯಾಚರಣೆ ಗುಂಪಿನ(ಎಸ್‍ಓಜಿ) ಜಂಟಿ…

  • ಸುದ್ದಿ

    ಖ್ಯಾತ ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಾಡಿದ್ದೇನು ಗೊತ್ತಾ..?

    ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ತಮ್ಮ ತಂದೆ ಜೊತೆ ಚೆನ್ನೈನ ವಡಪಳನಿಯಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು. ಈ ವೇಳೆ ಅವರಿದ್ದ ಅಪಾರ್ಟ್‍ಮೆಂಟ್‍ಗೆ ಬಂದು ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್‍ ಬಾಗಿಲು ತಟ್ಟಿದ್ದಾನೆ. ರಿತಿಕಾ ಅವರ ತಂದೆ ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿ, ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಯುವಕನ ಮಾತು ಕೇಳಿ ರಿತಿಕಾ ತಂದೆಗೆ ಶಾಕ್ ಆಗಿದೆ. ಬಳಿಕ ಇಬ್ಬರ ನಡುವೆ…