ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ..
ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ.
ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ ಅರ್ಜಿಯನ್ನು ಕೇಳಿ ಪಡೆಯಿರಿ. ಮತ್ತು ಆ ಅರ್ಜಿಯಲ್ಲಿ ನಿಮ್ಮ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ
ನಂತರ ಅವರು ನಿಮ್ಮ ಬಯೋಮೆಟ್ರಿಕ್(ಬೆರಳಚ್ಚು ಮತ್ತು ಕಣ್ಣಿನ ಪರೆ) ಸ್ಕ್ಯಾನ್ ಮಾಡಿ ಮಾಹಿತಿಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಪುನಃ ಹೊಸದಾಗಿ ಫೋಟೋ ತೆಗೆದುಕೊಳ್ಳುತ್ತಾರೆ. ಅಲ್ಲಿ ತೆಗೆದುಕೊಂಡ ಫೋಟೋವನ್ನು ತೋರಿಸುವಂತೆ ಕ್ಯಾಮರಾಮನ್ ಬಳಿ ಕೇಳಿ, ಚನ್ನಾಗಿಲ್ಲದಿದ್ದರೆ ಮತ್ತೊಮ್ಮೆ ಬೇರೆ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಿ.. ಇದು ಕ್ಯಾಮರಾಮ್ಯಾನ್ ನ ವರ್ತನೆಗೆ ಅವಲಂಭಿತವಾಗಿರುತ್ತದೆ.
ವಿವರಗಳನ್ನು ಪಡೆದನಂತರ ಅವನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಯುಐಡಿಎಐನ ಡೇಟಾ ಸೆಂಟರ್ ಕಳುಹಿಸಲಾಗುವುದು ಮತ್ತು 2 ವಾರಗಳ ನಂತರ ನೀವು ಅದೇ 12-ಅಂಕಿಯ ವಿಶಿಷ್ಟ ಸಂಖ್ಯೆಯೊಂದಿಗೆ ಆದರೆ ಬೇರೆ ಫೋಟೋವಿರುವ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಅಂಚೆಮೂಲಕ ಬರುತ್ತದೆ. ಅಗತ್ಯವಿದ್ದವರು ಅದರ ಅನ್ನು ಆನ್ಲೈನ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.
ಆದರೆ ನೀವು ಈ ಸಂಪೂರ್ಣ ಕಾರ್ಯವಿಧಾನಕ್ಕೆ ರೂ. 15 /-ಅನ್ನು ಪಾವತಿಸಬೇಕು ಏಕೆಂದರೆ ಆಧಾರ್ ಕಾರ್ಡ್ ಗೆ ದಾಖಲಾತಿ ಮಾಡಲು ಕೇವಲ ಮೊದಲ ಬಾರಿ ಮಾತ್ರ ಉಚಿತವಾಗಿರುತ್ತದೆ.. ಒಂದಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ಮಾಡಿಸಲು ಮುಂದಾದರೆ ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ಸೂಚನೆ:ದುರದೃಷ್ಟವಶಾತ್ ನಿಮ್ಮ ಆಧಾರ್ ಕಾರ್ಡ್ ನ ಫೋಟೋವನ್ನು ಆನ್ ಲೈನ್ ಇಂಟರ್ನೆಟ್ ಮೂಲಕ ಚೇಂಜ್ ಮಾಡುವುದಕ್ಕೆ ಯಾವುದೇ ಅವಾಕಾಶಗಳಿರುವುದಿಲ್ಲ. ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಆಧಾರ್ ಧಾಖಲಾತಿ ಕೇಂದ್ರಕ್ಕೆ ಭೇಟಿ ನೀಡಲೇಬೇಕು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್ ಬಿಯರ್ ನಲ್ಲಿ ಕಲಬೆರಕೆಯಾಗಿದ್ದು, ಅರ್ಧ ಬಾಟಲಿ ಕುಡಿದ ಬಳಿಕ ಇದು ಗ್ರಾಹಕನ ಅರಿವಿಗೆ ಬಂದಿದೆ. ಈ ಕುರಿತು ಬಾರ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಕ್ಸ್ ಮಾಡುವ ವೇಳೆ ಏನೋ ಬಿದ್ದಿದೆ ಎಂದು ಬಾರ್ ಮಾಲೀಕರು…
ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿ ಬಿರುಗಾಳಿಯಂತೆ ಮುನ್ನುಗ್ಗುತ್ತಿದೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಕನ್ನಡ ಚಿತ್ರರಂಗವನ್ನು ಮತ್ತೊಂದು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡುಹೋಗಿರುವುದು ಸುಳ್ಳಲ್ಲ. ಈಗ ಕನ್ನಡ ಚಿತ್ರರಂಗದ ಸುದೀಪ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ನೂತನ ದಾಖಲೆ ಬರೆಯಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಐದು ಭಾಷೆಗಳಲ್ಲಿ ತೆರೆಕಂಡು ಧೂಳೆಬ್ಬಿಸುತ್ತಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರಕ್ಕೆ ಹೊಸ ಮಾರುಕಟ್ಟೆಯನ್ನು ಕೆಜಿಎಫ್ ಚಿತ್ರ ತೋರಿಸಿಕೊಟ್ಟಿದೆ….
ಇಂದು ಸೋಮವಾರ , 19/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ದುಡುಕು ತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ತಾಳ್ಮೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಹೊಸ ಉತ್ಸಾಹದಿಂದ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಿದ್ಧಿಯಾಗಲಿದೆ. ಅನಿರೀಕ್ಷಿತವಾಗಿ ಸಂಚಾರ ಒದಗಿ ಬಂದೀತು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಸದ್ಯದಲ್ಲೇ ಶುಭವಾರ್ತೆ ಇದೆ. ಅತಿಥಿಗಳ ಆಗಮನವಿದೆ. ವೃಷಭ:- ಗಳು ಮನೆಯಲ್ಲಿ ನಡೆಯಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪ್ರಯತ್ನಬಲಕ್ಕೆ ಒತ್ತು ನೀಡಿರಿ. ಆಗಾಗ ಕಿರಿಕಿರಿ ತೋರಿ…
ಕನ್ನಡ ಚಿತ್ರಗಳನ್ನು ದೇಶಾದ್ಯಂತ ಎಲ್ಲಭಾಷೆಗಳ ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಭಜರಂಗಿ-2 ಸಿನಿಮಾವನ್ನು ಪಂಚಭಾಷೆಗಳಲ್ಲಿ ತಯಾರಿಸುವ ಪ್ಲಾನ್ ಮಾಡಿದ್ದೇವೆ. ಸೆಪ್ಟೆಂಬರ್ 9ರಿಂದ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕ ಎ ಹರ್ಷ.ಕೆಜಿಎಫ್ ಸಿನಿಮಾದ ಬಂದ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವ ಟ್ರೆಂಡ್ ಸ್ಯಾಂಡಲ್ವುಡ್ನಲ್ಲಿ ಹೆಚ್ಚುತ್ತಿದ್ದು, ಹಿರಿಯ ನಟ ಶಿವರಾಜ್ ಕುಮಾರ್ ಇದೀಗ ಅಂತಹ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಹರ್ಷ ನಿರ್ದೇಶನದ ‘ಭಜರಂಗಿ-2’ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಿಸಲಾಗುತ್ತಿದ್ದು, ಈ…
ನಾವು ಪ್ರತಿದಿನ ನಡೆಯುತ್ತೇವೆ. ಆದರೆ, ಹೀಗೆ ಸುಮ್ಮನೆ ನಡೆಯೋಕೆ ಯಾರಾದ್ರೂ ದುಡ್ಡು ಕೊಡ್ತಾರಾ? ನಾವು ಕೊಡ್ತೀವಿ ಅಂತಿದಾವೆ ಈ ವಾಕಿಂಗ್ ಆ್ಯಪ್ಗಳು. ಮತ್ತೇಕೆ ತಡ? ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ, ವಾಕ್ ಮಾಡೋಕೆ ಶುರು ಹಚ್ಕೊಳ್ಳಿ… ಹಣ ಮತ್ತು ಆರೋಗ್ಯ ಎರಡೂ ಗಳಿಸಿ. ವ್ಯಾಯಾಮ, ವಾಕಿಂಗ್, ರನ್ನಿಂಗ್- ಯಾವುದೇ ಆಗಲಿ, ನಮ್ಮ ಆರೋಗ್ಯಕ್ಕಾಗಿ, ಖುಷಿಗಾಗಿ ಮಾಡುತ್ತೇವೆ ಅಲ್ಲವೇ? ಆದರೆ, ಅದಕ್ಕೂ ಯಾರಾದರೂ ಹಣ ಕೊಡ್ತಾರೆ ಅಂದ್ರೆ? ಡಬಲ್ ಖುಷಿ ಆಗ್ದೇ ಇರುತ್ತಾ? ಇದಕ್ಕಾಗಿ ನೀವು ಹೆಚ್ಚೇನು ಕಷ್ಟ ಪಡಬೇಕಾಗಿಲ್ಲ….
ಪ್ರಕೃತಿಯ ವೈಚಿತ್ರ್ಯಒಮ್ಮೊಮ್ಮೆ ಎಲ್ಲರನ್ನೂ ಬೆರಗಾಗಿಸುತ್ತದೆ. ಬರೀ ಕಲ್ಪನೆಯಲ್ಲಿ ಮಾತ್ರ ಇದ್ದಂತಹ ವಸ್ತುಗಳು, ಜೀವಿಗಳು ಇದ್ದಕ್ಕಿದ್ದಂತೆ ಧುತ್ತನೆ ನಮಗೆದುರಾಗುತ್ತವೆ. ಸದ್ಯ ಚೀನಾದಲ್ಲಿ ಆಗಿರುವುದು ಇದೇ. ಮತ್ಸ್ಯಕನ್ಯೆ ಎಂಬ ಕಲ್ಪನೆ ನಮ್ಮಲ್ಲಿದೆ. ಈ ಹೆಸರು ಹೇಳಿದ ತಕ್ಷಣ ನಮಗೆ ಅರ್ಧ ಮೀನಿನ ದೇಹ, ಅರ್ಧ ಸುಂದರಿಯ ದೇಹ ಕಣ್ಣೆದುರು ಸುಳಿಯುತ್ತದೆ. ನಿಜವಾಗಿಯೂ ಮತ್ಸ್ಯ ಕನ್ಯೆಯನ್ನು ಕಂಡವರಿಲ್ಲ. ಇವೆಲ್ಲ ಬರೀ ನಮ್ಮ ಕಲ್ಪನೆಯ ಪರಿಧಿಯಲ್ಲಿ ಇರುವ ಅಂಶಗಳು. ಆದರೆ,ಕೆಲವೊಮ್ಮೆ ನಮ್ಮ ಕಲ್ಪನೆಯಲ್ಲಿರುವ ವಸ್ತುಗಳೇ ಧುತ್ತನೆ ಪ್ರತ್ಯಕ್ಷವಾಗಿ ನಮ್ಮನ್ನೇ ಒಂದು ಕ್ಷಣ ಆಶ್ಚರ್ಯ…