ನಿಮ್ಮ ಮನೆಗೆ ಧಿಡೀರ್ ಅಂತ ಅತಿಥಿಗಳು ಬಂದರೆ ಇಲ್ಲಿದೆ ನೋಡಿ ಬಿಸಿ ಬಿಸಿ ತುಪ್ಪಾನ್ನ ಮಾಡುವ ವಿಧಾನ

ಬೇಕಾದ ಸಾಮಾಗ್ರಿಗಳು
ಅಕ್ಕಿ – 1 ಕಪ್
ತುಪ್ಪ – 1/2 ಕಪ್
ಈರುಳ್ಳಿ – 1 ದೊಡ್ಡ ಗಾತ್ರ
ಗೋಡಂಬಿ- 5-10 ಪೀಸ್
ಶುಂಟಿ, ಬೆಳುಳ್ಳಿ – 1 ಚಮಚ
ಏಲಕ್ಕಿ, ದಾಲ್ಚಿನಿ – 1
ಒಣ ದ್ರಾಕ್ಷಿ – 5 ಪೀಸ್
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ :
ಅಕ್ಕಿಯನ್ನು ತೊಳೆದು ಅದರ ನೀರನ್ನು ಪೂರ್ತಿಯಾಗಿ ಆರಲು ಬಿಡಿ. ಅಗಲವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ತುಪ್ಪ ಸ್ವಲ್ಪ ಬಿಸಿಯಾದ ಮೇಲೆ ಹೆಚ್ಚಿದ ನೀರುಳ್ಳಿ ಹಾಕಿ, ನೀರುಳ್ಳಿ ಹೋಳುಗಳು ಕಂದು ಬಣ್ಣಕ್ಕೆ ಬಂದ ಕೂಡಲೇ ಅದನ್ನು ಪಾತ್ರೆಯಿಂದ ತೆಗೆದಿಡಿ, ನಂತರ ದ್ರಾಕ್ಷಿ, ಗೋಡಂಬಿ ಹುರಿಯಿರಿ, ಅದೇ ಬಾಣಲೆಗೆ ಶುಂಠಿ, ಬೆಳುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಕಾಯಿಸಿ, ಏಲಕ್ಕಿ, ದಾಲ್ಚಿನಿ ಹಾಕಿ ಹದವಾಗಿ ಹುರಿಯಿರಿ, ನಂತರ ಹುರಿದಿಟ್ಟ ನೀರುಳ್ಳಿ ಹಾಕಿ, ಇದಕ್ಕೆ ಅಕ್ಕಿ ಹಾಕಿ, ನೀರು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿ, ಬೇಯಲು ಪ್ರಾರಂಭವಾದಾಗ ಉಪ್ಪು, ಕೊಂತ್ತಂಬರಿ ಸೊಪ್ಪು ಹಾಕಿ, ಪಾತ್ರೆಯನ್ನು ಮುಚ್ಚಿಡಿ. 10 ನಿಮಿಷಗಳ ನಂತರ ಮುಚ್ಚಳ ತೆರೆದು ನೋಡಿ. ಬಿಸಿ ಬಿಸಿ ರುಚಿಕರವಾದ ತುಪ್ಪಾನ್ನ ಸವಿಯಲು ಸಿದ್ಧ.