ಚುನಾವಣೆ

ಕೋಲಾರ ಜಿಲ್ಲೆ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023

65

ಕೋಲಾರ ಜಿಲ್ಲೆಯ 6 ವಿಧಾನ ಸಭಾ ಮತ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆಗಳು ಪೂರ್ಣ; ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ; ನಿಗಾವಹಿಸಲು ವಿವಿಧ ತಂಡಗಳ ರಚನೆ: ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ

ಕೋಲಾರ(ಕರ್ನಾಟಕ ವಾರ್ತೆ)ಮಾ.29:  ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆರು ವಿಧಾನ ಸಭಾ ಮತ ಕ್ಷೇತ್ರಗಳಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಿ, ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು. ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ಧಿಗೊಷ್ಠಿ ಜರುಗಿಸಿ, ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಏಪ್ರೀಲ್ 13 ರಂದು ಜಿಲ್ಲೆಯ ಆರು ವಿಧಾನ ಸಭಾ ಮತ ಕ್ಷೇತ್ರಗಳಿಗೆ ಚುನಾವಣೆ ಜರುಗಿಸಲು ಅಧಿಸೂಚನೆ ಹೊರಡಿಸಲಾಗುತ್ತದೆ. ಏಪ್ರೀಲ್ 20ರ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆಯು ಏಪ್ರೀಲ್ 21 ರಂದು ನಡೆಯಲಿದೆ. ಎಪ್ರಿಲ್ 24 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಮತ್ತು ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಏಣಿಕೆ ಜರುಗಲಿದೆ. ಒಟ್ಟಾರೆ ಮೇ 15 ರಂದು ಎಲ್ಲ ಚುನಾವಣಾ ಪ್ರಕ್ರೀಯೆಗಳು ಮುಕ್ತಾಯವಾಗಲಿವೆ ಎಂದು ಅವರು ಹೇಳಿದರು.

ಮತದಾರರ ಸಂಖ್ಯೆ: ಜಿಲ್ಲೆಯಲ್ಲಿ ಆರು ವಿಧಾನಸಭಾ ಮತಕ್ಷೇತ್ರಗಳಿದ್ದು,  ಒಟ್ಟು ಪುರುಷ 625644 ಮಹಿಳಾ 633192 ಹಾಗೂ ಇತರೆ 159 ಸೇರಿದಂತೆ ಒಟ್ಟು 1258995 ಮತದಾರರಿದ್ದಾರೆ.

ಶ್ರೀನಿವಾಸಪುರ ವಿಧಾನಸಭಾ ಮತ ಕ್ಷೇತ್ರ-144 : ಪುರುಷರು-106785 ಮಹಿಳೆಯರು-108213 ಇತರೆ-7. ಒಟ್ಟು ಮತದಾರರು- 215005

ಮುಳಬಾಗಿಲು ವಿಧಾನಸಭಾ ಮತ ಕ್ಷೇತ್ರ-145( ಪ ಜಾ): ಪುರುಷರು – 106430. ಮಹಿಳೆಯರು–107779 ಇತರೆ-10. ಒಟ್ಟು ಮತದಾರರು-214219

ಕೆ ಜಿ ಎಪ್ ವಿಧಾನಸಭಾ ಮತ ಕ್ಷೇತ್ರ-146( ಪ ಜಾ):  ಪುರುಷರು-98054. ಮಹಿಳೆಯರು-99148. ಇತರೆ-40. ಒಟ್ಟು ಮತದಾರರು– 197242

ಬಂಗಾರಪೇಟೆ  ವಿಧಾನಸಭಾ ಮತ ಕ್ಷೇತ್ರ-147( ಪ ಜಾ):  ಪುರುಷರು-101284. ಮಹಿಳೆಯರು-102028. ಇತರೆ-40. ಒಟ್ಟು ಮತದಾರರು-203352

ಕೋಲಾರ  ವಿಧಾನಸಭಾ ಮತ ಕ್ಷೇತ್ರ 148: ಪುರುಷರು-118159 ಮಹಿಳೆಯರು-120238. ಇತರೆ – 55. ಒಟ್ಟು ಮತದಾರರು–238452

ಮಾಲೂರು  ವಿಧಾನಸಭಾ ಮತ ಕ್ಷೇತ್ರ-149:  ಪುರುಷರು-94932. ಮಹಿಳೆಯರು-95786. ಇತರೆ-7. ಒಟ್ಟು ಮತದಾರರು-190725

ಮತಗಟ್ಟೆಗಳ ಸಂಖ್ಯೆ: ಜಿಲ್ಲೆಯಲ್ಲಿ ಒಟ್ಟು 1590 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ 392 ಸೂಕ್ಷ್ಮ ಮತಗಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನದ ದಿನದಂದು  ವಿಡಿಯೋಗ್ರಾಫಿ, ವೆಬ್‍ಕ್ಯಾಸ್ಟಿಂಗ್ ಮತ್ತು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯಮಾನುಸಾರ ನೇಮಕ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಯುವ ಮತದಾರರು: ಜಿಲ್ಲೆಯಲ್ಲಿ ಪ್ರಸ್ತುತ 2023ರ ವಿಧಾನ ಸಭಾ ಚುನಾವಣೆಗೆ ಒಟ್ಟು 32014 ಯುವ ಮತದಾರರಿದ್ದಾರೆ ಮತ್ತು 80 ವರ್ಷ ಹಾಗೂ ಮೇಲ್ಪಟ್ಟ ಸುಮಾರು 29338 ಹಿರಿಯ ಮತದಾರರಿದ್ದಾರೆ.

ಪ್ರಚಾರ ಸಾಮಗ್ರಿಗಳ ತೆರವು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿವಿಧ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗುತ್ತಿದೆ. ಇವತ್ತಿನ ವರೆಗೆ ಗೊಡೆ ಬರಹ, ಪೋಸ್ಟರ್‍ಗಳು, ಬ್ಯಾನರಗಳು ಹಾಗೂ ಇತರೆ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾ ಚುನಾವಣಾ ಆಯೋಗದಿಂದ ತೆರವುಗೊಳಿಸಲಾಗಿದೆ ಮತ್ತು ಅನುಮತಿ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿ ಸಾರ್ವಜನಿಕ ಸ್ಥಳ ಅಂದಗೆಡಿಸಿದ್ದ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳ್ಳಿಸಲಾಗಿದೆ.

ಚುನಾವಣಾ ನೀತಿ ಸಂಹಿತೆಯು ಇಂದಿನಿಂದ ಜಾರಿಯಾಗಿದ್ದು, ಅನುಮತಿ ಇಲ್ಲದೆ ಯಾವುದೇ ರೀತಿಯ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವಂತಿಲ್ಲ. ನಿಯಮ ಮೀರಿದವರ ವಿರುದ್ಧ ಭಾರತ ಚುನಾವಾಣಾ ಆಯೋಗದ ನಿರ್ದೇಶನದಂತೆ ಮತ್ತು ಜಾರಿಯಲ್ಲಿರುವ ವಿವಿಧ ಕಾನೂನುಗಳಡಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಅವರು ಹೇಳಿದರು.

ಆಯುಧಗಳ ಠೇವಣಿಗೆ ಸೂಚನೆ: ಜಿಲ್ಲೆಯಲ್ಲಿ  ಪರವಾಣಿಗೆ ಹೊಂದಿರುವ ಆಯುಧಗಳನ್ನು ಸ್ಕ್ರೀನಿಂಗ್ ಕಮಿಟಿ ಪರಿಶೀಲನೆಗೆ ಒಳಪಡಿಸಬೇಕು ಮತ್ತು ಚುನಾವಣಾ ಪ್ರಕ್ರೀಯೆ ಸಂಪೂರ್ಣವಾಗಿ ಮುಗಿಯುವವರೆಗೆ ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಹಣ, ವಸ್ತು, ಇತರೆ ಸಾಮಗ್ರಿಗಳ ವಶ: ಸೂಕ್ತ ದಾಖಲೆ ಇಲ್ಲದೆ ಹೊಂದಿದ್ದ ಮತ್ತು ಚುನಾವಣಾ ಕಾರಣಕ್ಕೆ  ಬಳಕೆಯಾಗುವ ಅನುಮಾನದಿಂದ ಕೆಲವು ಕಡೆ ಹಣ, ವಸ್ತು ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 1ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣ, ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.

ಆರು ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿ:

ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರ-144: ನವಲಗುಂದ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಶ್ರೀನಿವಾಸಪುರ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ  ನಂದಿನಿ(9480870001) ಚುಣಾವಣಾಧಿಕಾರಿಯಾಗಿದ್ದಾರೆ.

ಮುಳಬಾಗಿಲು ವಿಧಾನಸಭಾ ಮತಕ್ಷೇತ್ರ-145: ಮುಳಬಾಗಿಲು  ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಮುಳಬಾಗಿಲು  ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು ಉಪನಿರ್ದೇಶಕರು ,ಭೂಮಿ ಭಾಗ್ಯಮ್ಮ(9844410602) ಚುಣಾವಣಾಧಿಕಾರಿಯಾಗಿದ್ದಾರೆ.

ಕೆಜಿಎಫ್ ವಿಧಾನಸಭಾ ಮತಕ್ಷೇತ್ರ-145: ಕೆಜಿಎಫ್ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕೆಜಿಎಫ್ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿನಿರ್ದೇಶಕರಾದ ಮೊಹಮ್ಮದ್ ಅಫೀಕ್ ಉಲ್ಲಾ ಷರೀಫ್ (9845628883) ಚುಣಾವಣಾಧಿಕಾರಿಯಾಗಿದ್ದಾರೆ.

ಬಂಗಾರಪೇಟೆ ವಿಧಾನಸಭಾ ಮತಕ್ಷೇತ್ರ-147: ಬಂಗಾರಪೇಟೆ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಬಂಗಾರಪೇಟೆ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಶೃತಿ ಎಂ ಕೆ(9591056238)ಚುಣಾವಣಾಧಿಕಾರಿಯಾಗಿದ್ದಾರೆ.

ಕೋಲಾರ ವಿಧಾನಸಭಾ ಮತಕ್ಷೇತ್ರ-148: ಕೋಲಾರ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕೋಲಾರ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಕೋಲಾರ ಸಹಾಯಕ ಆಯುಕ್ತರಾದ  ಹೆಚ್ ಎಸ್ ವೆಂಕಟಲಕ್ಷ್ಮೀ (8105595859) ಚುಣಾವಣಾಧಿಕಾರಿಯಾಗಿದ್ದಾರೆ.

ಮಾಲೂರು ವಿಧಾನಸಭಾ ಮತಕ್ಷೇತ್ರ-149: ಮಾಲೂರು ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಮಾಲೂರು ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ತೋಟಗಾರಿಕೆ ಉಪನಿರ್ದೇಶಕರಾದ ಕುಮಾರಸ್ವಾಮಿ(9900590596) ಚುಣಾವಣಾಧಿಕಾರಿಯಾಗಿದ್ದಾರೆ.

ಚುನಾವಣಾಧಿಕಾರಿಗಳು ವಿಧಾನ ಸಭಾ ಮತಕ್ಷೆತ್ರ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ವಾಹನ ಪರವಾಣಿಗೆ ಮುಂತಾದವುಗಳ ಅರ್ಜಿಗಳನ್ನು ಸು-ವಿಧಾ ತಂತ್ರಾಂಶದ ಮೂಲಕ ಸಲ್ಲಿಸಿದ್ದಲ್ಲಿ ಪರವಾನಿಗೆ ನೀಡುವ ಕುರಿತು ಕ್ರಮವಹಿಸಬೇಕು. ಮತ್ತು ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಕುರಿತು ಅರ್ಜಿಗಳಿದ್ದಲ್ಲಿ ಜಿಲ್ಲಾ ಚುನಾವಣಾ ಕಾರ್ಯಾಲಯದಿಂದ ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಾದರಿ ನೀತಿ ಸಂಹಿತೆ ಕುರಿತು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು:

 

  • ಸಾರ್ವಜನಿಕಅನುದಾನದಿಂದವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕುರಿತು ಹಾಗೂ ವಿವಿಧ ಚಟುವಟಿಕೆಗಳನ್ನು ಕೈಗೊಂಡಿರುವ ಕುರಿತು ಅಳವಡಿಸಲಾದ ಜಾಹೀರಾತು ಫಲಕಗಳನ್ನು ತಕ್ಷಣವೇ ತೆರವುಗೊಳಿಸುವುದು.
  • ಕಚೇರಿವೆಬ್‍ಸೈಟ್‍ನಲ್ಲಿನಎಲ್ಲ ರಾಜಕೀಯ ವ್ಯಕ್ತಿಗಳ ಭಾವಚಿತ್ರಗಳನ್ನು ಮತ್ತು ರಾಜಕೀಯ ಕಾರ್ಯ ಚಟುವಟಿಕೆ ತೋರುವಂತಹ ಜಾಹೀರಾತು, ಮಾಹಿತಿಯನ್ನು ತೆಗೆದು ಹಾಕಲು ತಕ್ಷಣವೇ ತೆಗೆದು ಹಾಕುವುದು.
  • ಈಗಾಗಲೇನಿಯೋಜನೆಗೊಂಡಿರುವಮಾದರಿ ನೀತಿ ಸಂಹಿತೆ ಹಾಗೂ ವೆಚ್ಚ ಪರಿಶೀಲನೆಗೆ ಸಂಬಂಧಿಸಿದಂತೆ ರಚಿಸಲಾದ ವಿವಿಧ ತಂಡಗಳು ತಕ್ಷಣವೇ ಕಾರ್ಯ ಪ್ರಾರಂಭಿಸಲು ಸೂಚಿಸಲಾಗಿದೆ. ಎಸ್.ಎಸ್.ಟಿ-25 ಚೆಕ್‍ಪೋಸ್ಟ್‍ಗಳು, ಎಫ್.ಎಸ್.ಟಿ-36 ತಂಡಗಳು, ವಿ.ಎಸ್.ಟಿ-12 ತಂಡಗಳು ವಿ.ವಿ.ಟಿ-6 ತಂಡಗಳು, ಎ.ಟಿ-6 ತಂಡಗಳನ್ನು ರಚಿಸಲಾಗಿದೆ.
  • ಸರ್ಕಾರಿ,ಸಾರ್ವಜನಿಕ,ಖಾಸಗಿ ಸ್ವತ್ತುಗಳ ಮೇಲೆ ರಾಜಕೀಯ ಪಕ್ಷಗಳ ಪ್ರಚಾರ ಕುರಿತಾದ ಪೋಸ್ಟರ್ ಗಳನ್ನು ತಕ್ಷಣವೇ ತೆರವುಗೊಳಿಸುವುದು.
  • ಎಲ್ಲನಾಮನಿರ್ದೇಶಿತಮತ್ತು ರಾಜಕೀಯ ವ್ಯಕ್ತಿಗಳಿಗೆ ನೀಡಿದ ವಾಹನಗಳನ್ನು ತಕ್ಷಣ ಹಿಂಪಡೆಯುವುದು.
  • ಚುನಾವಣಾನಿಯಮಉಲ್ಲಂಘನೆ ಪ್ರಕರಣಗಳ ಕುರಿತು ಸ್ವೀಕೃತವಾಗುವ ದೂರುಗಳ ನಿರ್ವಹಣೆ ಕುರಿತು ವಿಧಾನಸಭಾ ಕ್ಷೇತ್ರವಾರು 24*7 ಮಾದರಿಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
  • ಸಹಾಯವಾಣಿ1950ಮತ್ತು ಸಿ-ವಿಜಿಲ್ ತಂತ್ರಾಂಶದ ಮುಖಾಂತರ ಚುನಾವಣಾ ಸಂಬಂಧಿ ದೂರು ಸಲ್ಲಿಸಿದಲ್ಲಿ ತಕ್ಷಣವೇ ಕ್ರಮವಹಿಸಲಾಗುವುದು.
  • ವಾರ್ತಾಮತ್ತುಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರನ್ನು ಎಂ.ಸಿ.ಎಂ.ಸಿ ತಂಡದ ಕಾರ್ಯವನ್ನು ನಿರ್ವಹಿಸಲು ನೇಮಿಸಿದ್ದು, ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಈಗಾಗಲೇ ನಿಯೋಜನೆಗೊಂಡಿರುವ ಕಂಟ್ರೋಲ್ ರೂಂ. ತಂಡದವರು ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ.
  • ರಾಜಕೀಯಉದ್ದೇಶಕ್ಕಾಗಿಧಾರ್ಮಿಕ ಸ್ಥಳಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ನಿಷೇಧಿಸಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಮಾಧ್ಯಮ ಉಸ್ತುವಾರಿ ಕೇಂದ್ರಕ್ಕೆ ಮೇಲ್ವಿಚಾರಣೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ  ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಮತ್ತು ದೂರು ನಿರ್ವಹಣಾ ತಂಡ(1950)ವನ್ನು ನೇಮಿಸಲಾಗಿದೆ. ಈ ಎರಡು ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತವೆ. ಸಾರ್ವಜನಿಕರು ಅಥವಾ ಯಾರೇ ಆಗಲಿ ಚುನಾವಣಾ ಸಂಬಂಧಿತ ದೂರುಗಳಿದ್ದಲ್ಲಿ ಸು-ವಿಧಾ ತಂತ್ರಾಂಶ ಅಥವಾ 1950 ಸಹಾಯವಾಣಿ ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಂ.ನಾರಾಯಣ ಅಪರ ಜಿಲ್ಲಾಧಿಕಾರಿ ಡಾ.ಸಂಕರಗೌಡ ವಣಿಕ್ಯಾಳ್  ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ ನಾಗವೇಣಿ, ಶಿರಸ್ತೆದಾರ ಮಂಜುಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ! ಏನ್ ಗೊತ್ತಾ?ಮುಂದೆ ಓದಿ…

    ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ

  • ಸುದ್ದಿ

    ವಾಟ್ಸಪ್ ಪಡೆದ ಆದಾಯವೇಷ್ಟು ಅಂತ ಗೊತ್ತಾದರೆ ಶಾಕ್ ಆಗುವುದಂತೂ ಖಂಡಿತಾ ,.!

    ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್‌ ಆ್ಯಪ್‌ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ  6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…

  • ಸುದ್ದಿ

    ಬಿಡುಗಡೆಯಾಯ್ತು BJP ಪಕ್ಷದ ಪ್ರಣಾಳಿಕೆ..ರೈತರಿಗೆ ಪಿಂಚಣಿ ಸೇರಿದಂತೆ ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ.?

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ `ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲ ವರ್ಗದ ಜನರನ್ನು ಖುಷಿಗೊಳಿಸುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಸೇರಿದಂತೆ ಅನೇಕ…

  • ಸುದ್ದಿ

    ಪ್ರತಿಪಕ್ಷದ ನಾಯಕರಾದ ಮೇಲೆ ತಮ್ಮ ವರಸೆಯನ್ನು ಬದಲಾಯಿಸಿಕೊಂಡ ಸಿದ್ದರಾಮಯ್ಯ,.!!

     ಪ್ರತಿಪಕ್ಷದ ನಾಯಕರಾದ ಮೇಲೆ ಸಿದ್ದರಾಮಯ್ಯ ತಮ್ಮ ವರಸೆ ಬದಲಾಯಿಸಿದ್ದಾರೆ. ಎಲ್ಲ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಕಳೆದೆರಡು ದಿನಗಳಲ್ಲಿ ಐದು ಬಾರಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಧಿವೇಶನದಲ್ಲಿ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ರಮೇಶ್‍ಕುಮಾರ್ ಹಾಗೂ ಶಾಸಕರ ಸಲಹೆ ಪಡೆದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನ ಪಡೆಯಲು ಸಿದ್ದರಾಮಯ್ಯನವರು ನಡೆಸಿದ ಪ್ರಯತ್ನದ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಹೈಕಮಾಂಡ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಸಿದ್ದು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಇವರ ಆಪ್ತರು ಹಾಗೂ…

  • ಉಪಯುಕ್ತ ಮಾಹಿತಿ, ಸಂಬಂಧ

    ನೀವು ಯಾವ ವಯಸ್ಸಿನಲ್ಲಿ ಮದುವೆಯಾದ್ರೆ, ನಿಮ್ಗೆ ಆಗುವ ಲಾಭ ಏನು ಗೊತ್ತಾ?ತಿಳಿಯಲು ಈ ಲೇಖನ ಓದಿ..

    ಮದುವೆಯ ಪರ್‌ಫೆಕ್ಟ್‌ ವಯಸ್ಸು ಯಾವುದು ಎಂಬುದರ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುತ್ತದೆ? ಅದಕ್ಕೆ ಸರಿಯಾದ ಉತ್ತರ ಇಲ್ಲಿವರೆಗೆ ಸಿಕ್ಕಿಲ್ಲ. ಕೆಲವೊಂದು ಸರ್ವೆಗಳು ಮದುವೆಯಾಗಲು ಸರಿಯಾದ ವಯಸ್ಸು 29 ಎನ್ನುತ್ತಾರೆ. ಆದರೆ ಒಬ್ಬೊಬ್ಬರ ಮದುವೆ ಒಂದೊಂದು ವಯಸ್ಸಿನಲ್ಲಿ ಆಗುತ್ತದೆ. ಕೆಲವರು 20 ರಿಂದ 30 ವರ್ಷದೊಳಗೆ ಮದುವೆಯಾದರೆ, ಇನ್ನೂ ಕೆಲವರು 30 ರಿಂದ 40 ವರ್ಷದೊಳಗೆ ಮದುವೆಯಾಗುತ್ತಾರೆ.

  • ಉಪಯುಕ್ತ ಮಾಹಿತಿ

    ಯುವತಿಯೊಬ್ಬಳು ಫೇಸ್‍ಬುಕ್ ನಲ್ಲಿ ಚಾಟ್ ಮಾಡಿ ವಾಟ್ಸಪ್ ನಲ್ಲಿ ಸ್ಪೆಷಲ್ ದೋಖಾ ಕೊಟ್ಟಳು..!ತಿಳಿಯಲು ಈ ಲೇಖನ ಓದಿ..

    ಆನ್‍ಲೈನ್ ನಲ್ಲಿ ಹುಡುಗಿ ಸಿಗುತ್ತಾಳೆ ಎಂದು ಹುಡುಗರು ಚಾಟ್ ಮಾಡುತ್ತಾ ಸ್ವಲ್ಪ ಯಾಮಾರಿದ್ರೂ ಲಕ್ಷ ಲಕ್ಷ ಹಣ ದೋಚುವವರು ಇದ್ದಾರೆ. ಇಂತಹ ಆನ್‍ಲೈನ್ ದೋಖಾ ಪ್ರಕರಣಗಳ ಉದಾಹರಣೆಗಳು ಸಾಕಷ್ಟಿದ್ದರೂ ಮತ್ತೆ ಕೆಲವರು ಆನ್‍ಲೈನ್ ನಲ್ಲಿ ಪರಿಚಯವಾದವರಿಂದ ಪದೇ ಪದೇ ಮೋಸ ಹೋಗುತ್ತಿರುತ್ತಾರೆ.