ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಾಂಧಿನಗರ: ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚಂಡಮಾರುತ ವಾಯು ಇದೀಗ ಗುಜರಾತ್ನತ್ತ ಪಯಣಿಸಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ಮಧ್ಯಾಹ್ನದ ಹೊತ್ತಿಗೆ ದಕ್ಷಿಣ ಗುಜರಾತ್ನ ಕರಾವಳಿಗೆ ಅಪ್ಪಳಿಸಲಿದೆ.
ಹವಾಮಾನ ಇಲಾಖೆ ಪ್ರಕಾರ, ವಾಯು ಚಂಡಮಾರುತ ವೆರಾವಲ್ನಿಂದ 180 ಕಿ.ಮೀ ಹಾಗೂ ಪೋರ್ ಬಂದರ್ ನಿಂದ 260 ಕಿ.ಮೀ ದೂರದಲ್ಲಿದೆ. ಪ್ರಸ್ತುತ ವಾಯು ಸೈಕ್ಲೋನ್ ತೀವ್ರ ಸ್ವರೂಪ ಪಡೆದಿದ್ದು, ಗಂಟೆಗೆ 170 ರಿಂದ 185 ಕಿ.ಮೀ. ವೇಗದಲ್ಲಿ ಪೋರ್ ಬಂದರ್ ನತ್ತ ಪಯಣಿಸುತ್ತಿದೆ.
ಮುಂಬೈನಿಂದ ಮುಂದೆ ಸಾಗಿದ ವಾಯು ಚಂಡಮಾರುತ, ದಿಯು-ಸೋಮನಾಥ-ಪೋರಬಂದರ್-ದ್ವಾರಕ ಮೂಲಕ ಸಾಗಿ ಪಾಕಿಸ್ತಾನದ ಕರಾಚಿಯತ್ತ ದುರ್ಬಲ ಆಗಲಿದೆ. ಇದರ ನಡುವೆ ದಿಯು ಹಾಗೂ ಪೋರ್ ಬಂದರ್ ನಡುವೆ ಭಾರೀ ವರ್ಷಧಾರೆಯಾಗಲಿದೆ.
ಬಂಗಾಳಕೊಲ್ಲಿಯ ಫೋನಿಯಿಂದ ಒಡಿಶಾ ಎದುರಿಸಿದ ಸ್ಥಿತಿಯಿಂದ ಗುಜರಾತ್ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ, ಗುಜರಾತ್ನ ಮೋರ್ಬಿ, ಭಾವನಗರ, ಜುನಾಗಢ, ಗಿರ್, ಸೋಮನಾಥ, ಜಾಮ್ನಗರ, ದ್ವಾರಕಾ, ಕಛ್, ಪೋರ್ ಬಂದರ್, ರಾಜಕೋಟ್ ಮತ್ತು ಅಮ್ರೇಲಿಯ 10 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಜನರನ್ನು ಈಗಾಗಲೇ ಸ್ಥಳಾಂತರ ಹಾಗೂ 500 ಗ್ರಾಮಗಳ ತೆರವು ಮಾಡಲಾಗಿದೆ.
ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 52 ತಂಡಗಳು ಗುಜರಾತ್ನಲ್ಲಿ ಬೀಡು ಬಿಟ್ಟಿವೆ. ಜೊತೆಗೆ, ಸೇನಾಪಡೆಯ 10 ತುಕಡಿಗಳು, ಮುಂಬೈ ನೌಕಾನೆಲೆಯಲ್ಲಿ ತುರ್ತು ಸ್ಥಿತಿ ಎದುರಿಸಲು ವೈದ್ಯಕೀಯ ತಂಡಗಳು ಸನ್ನದ್ಧವಾಗಿವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ದುಬೈ ಸ್ಟಾಪ್ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ…
ಬಾಲಿವುಡ್ನ ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ನಿನ್ನೆ ರಾತ್ರಿ 11.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.
ಸೀಬೆ ಹಣ್ಣು “ಬಡವರ ಸೇಬು” ಎಂದರೆ ಅತಿಶಯೋಕ್ತಿಯೇನಲ್ಲ. ಇದರಲ್ಲಿರುವ ಪೌಷ್ಟಿಕಾಂಶ ಗಳನ್ನು ಅವಲೋಕಿಸಿದಾಗ, ಸೇಬಿನ ಗುಣಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಹಣ್ಣಾಗಿದೆ. ಸೀಬೆ ಹಣ್ಣಿನ ತವರು ಅಮೆರಿಕ ಆದರೆ ಇದರ ಪ್ರಸ್ತುತ ಎಲ್ಲಾ ಕಡೆಗಳಲ್ಲೂ ಬೆಳೆಯಲಾಗುತ್ತದೆ. ಸೀಬೆ ಹಣ್ಣಿನ – ಬೇರು, ಎಲೆ, ಹೂವು, ಕಾಯಿ, ಹಣ್ಣು ಇವುಗಳೆಲ್ಲವೂ ಉಪಯುಕ್ತ ಭಾಗಗಳಾಗಿವೆ. ಪೋಷಕಾಂಶಗಳು(100 ಗ್ರಾಂ ಸೀಬೆಹಣ್ಣಿನಲ್ಲಿ ದೊರೆಯುವ ಪೌಷ್ಟಿಕಾಂಶಗಳು ಹೀಗಿವೆ) ತೇವಾಂಶ-85.3ಸಸಾರಜನಕ- 0.1 ಗ್ರಾಂಮೇದಸ್ಸು – 0.2 ಗ್ರಾಂಖನಿಜಾಂಶ – – 0.6 ಗ್ರಾಂಕಾರ್ಬೋಹೈಡ್ರೇಟ್ಸ್…
ಕಳೆದ ಕೆಲ ವರ್ಷಗಳಿಂದ ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್ (ಟ್ರೀ ಮ್ಯಾನ್ ರೋಗ) ಎಂಬ ವಿಚಿತ್ರವಾದ ಚರ್ಮದ ಕಾಯಿಲೆಗೆ ತುತ್ತಾಗಿ ಕೈಯ್ಯಾರೆ ಊಟ ಅಥವಾ ಬೇರೆ ಕೆಲಸ ಮಾಡಲು ಕಷ್ಟ ಪಡುತ್ತಿದ್ದ ಬಾಂಗ್ಲಾದೇಶದ 27 ವರ್ಷದ ಅಬುಲ್ ಬಜಂದಾರ್ಗೆ ಬರೋಬ್ಬರಿ 19 ಶಸ್ತ್ರ ಚಿಕಿತ್ಸೆ ಮಾಡಿದ್ರೂ ತೊಂದರೆ ನಿವಾರಣೆ ಆಗಿಲ್ಲ.
ಸರಿಯಾಗಿ ಮೇವು ಸೇವಿಸದೆ ಸಗಣಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಆರು ವರ್ಷದ ಹಸುವಿನ ಹೊಟ್ಟೆಯಲ್ಲಿ ಆಶ್ಚರ್ಯಕರ ವಸ್ತುಗಳು ಪತ್ತೆಯಾಗಿವೆ.ಪಶುವೈದ್ಯರ ತಂಡವೊಂದು ಹಸುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ ಪಶುವೈದ್ಯ ಹಾಗೂ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಸರ್ಜನ್ ಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಆರು ವರ್ಷದ ಹಸುವಿನ ಹೊಟ್ಟೆಯಿಂದ ಆಹಾರವನ್ನು ಪ್ಯಾಕ್ ಮಾಡಲು ಬಳಸುವ 52 ಕೆಜಿ…