ಸುದ್ದಿ

ಸುಮಲತಾ ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ..ಅವರಿಗೆ ಬಿಜೆಪಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಬೆಂಬಲ ಕೂಡ ಇದೆ ಎಂದ ಸಿಎಂ ಕುಮಾರಸ್ವಾಮಿ..!

59

ಸುಮಲತಾ ಅಂಬರೀಷ್ ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ, ಅವರಿಗೆ ಕಾಂಗ್ರೆಸ್, ಬಿಜೆಪಿ ಮತ್ತು ರೈತಸಂಘ ಬೆಂಬಲ ಅವರಿಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಎಂ ಎಚ್.ಡಿ ಕುಮಾರಸ್ವಾಮಿ, ಸುಮಲತಾ ಗೆ ಕೇವಲ ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ಬೆಂಬಲವೂ ಇದೆ,

ಮಂಡ್ಯದಲ್ಲಿ ಜೆಡಿಎಸ್ ಸೋಲಿಸಲು ಎಲ್ಲಾ ರೀತಿಯ ಚಕ್ರವ್ಯೂಹ ಹೆಣೆಯಲಾಗುತ್ತಿದೆ, ಸುಮಲತಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಹೇಳಿದ್ದಾರೆ.ಬಿಜೆಪಿ, ಕಾಂಗ್ರೆಸ್, ರೈತ ಸಂಘ ಎಲ್ಲ ಸೇರಿ ಚಕ್ರವ್ಯೂಹ ರೂಪಿಸಿದ್ದು, ಅದನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಮಂಡ್ಯ ಜನತೆ ನೀಡುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್‍ನನ್ನು ಸೋಲಿಸಲು ರೂಪಿಸಿರುವ ಚಕ್ರವ್ಯೂಹಕ್ಕೆ ಮೇ.23ರಂದು ಚುನಾವಣಾ ಫಲಿತಾಂಶ ಹೊರಬಂದ ನಂತರ ಸೂಕ್ತ ಉತ್ತರ ನೀಡುವುದಾಗಿ ಹೇಳಿದರು.ಕಳೆದ ಮೂರು ತಿಂಗಳಿನಿಂದಲೂ ಮಂಡ್ಯದಲ್ಲಿ ಜೆಡಿಎಸ್ ಮಣಿಸಲು ಕಾರ್ಯತಂತ್ರವನ್ನು ಹೆಣೆಯಲಾಗಿದೆ.

ಆದರೆ ಸ್ಥಳೀಯ ಪರಿಸ್ಥಿತಿಯೇ ಭಿನ್ನವಾಗಿದೆ. ಯಾರು ಸರಿಯಾದ ದುಡಿಮೆ ಮಾಡುತ್ತಾರೆ ಎಂಬುದು ಅಲ್ಲಿನ ಜನರಿಗೆ ಗೊತ್ತಿದೆ. ದುಡಿಮೆ ಮಾಡುವವರನ್ನು ಜನರು ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Health

    ಕಿತ್ತಳೆ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಕಿತ್ತಳೆ ಒಂದು ರೀತಿಯ ಕಡಿಮೆ ಕ್ಯಾಲೋರಿ, ಹೆಚ್ಚು ಪೌಷ್ಟಿಕ ಸಿಟ್ರಸ್ ಹಣ್ಣು. ಆರೋಗ್ಯಕರ ಮತ್ತು ವೈವಿಧ್ಯಮಯ ಆಹಾರದ ಭಾಗವಾಗಿ, ಕಿತ್ತಳೆ ಹಣ್ಣುಗಳು ಬಲವಾದ, ಸ್ಪಷ್ಟವಾದ ಚರ್ಮಕ್ಕೆ ಕೊಡುಗೆ ನೀಡುತ್ತವೆ ಮತ್ತು ವ್ಯಕ್ತಿಯ ಅನೇಕ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣುಗಳು ಅವುಗಳ ನೈಸರ್ಗಿಕ ಮಾಧುರ್ಯ, ಲಭ್ಯವಿರುವ ಹಲವು ವಿಧಗಳು ಮತ್ತು ಬಳಕೆಯ ವೈವಿಧ್ಯತೆಯಿಂದಾಗಿ ಜನಪ್ರಿಯವಾಗಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಅವುಗಳನ್ನು ರಸ ಮತ್ತು ಮಾರ್ಮಲೇಡ್‌ಗಳಲ್ಲಿ ಸೇವಿಸಬಹುದು, ಅವುಗಳನ್ನು ಸಂಪೂರ್ಣವಾಗಿ ತಿನ್ನಬಹುದು, ಅಥವಾ ಕೇಕ್…

  • inspirational, ಇತಿಹಾಸ, ಕರ್ನಾಟಕ, ಜೀವನಶೈಲಿ

    ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ.

    ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ.

  • ಕರ್ನಾಟಕದ ಸಾಧಕರು

    ಸಾಧನೆ ಮಾಡುವವನಿಗೆ ಬಡವ ಎನ್ನುವ ಬವಣೆ ಇರಲೇ ಬಾರದು ಅಂತ ಒಂದು ಸಾಧಕರಲ್ಲಿ ಒಬ್ಬರು ದ.ರಾ.ಬೇಂದ್ರೆ

    “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.

  • ಆರೋಗ್ಯ

    ಕಿಡ್ನಿಯಲ್ಲಿ ಕಲ್ಲಿದ್ದರೆ, ಬೊಜ್ಜು ಹೆಚ್ಚಾಗಿದ್ದರೆ, ಹೆಣ್ಣುಮಕ್ಕಳ ಅರೋಗ್ಯ ಸಮಸ್ಯೆಗಳಿಗೆ ಈ ಧಾನ್ಯ ರಾಮಬಾಣ. ಈ ಅರೋಗ್ಯ ಮಾಹಿತಿ ನೋಡಿ.

    ಬೆಳ್ಳಂಬೆಳಗ್ಗೆ ತಿಂಡಿ ಏನ್ಮಾಡೋದಪ್ಪಾ ಅಂತಾ ಯೋಚಿಸ್ತಿದ್ದೀರಾ? ಈಗ ಸೀಸನ್ ಚೇಂಜ್ ಆಗ್ತಿದೆ. ಕಫ ನೆಗಡಿ ಸಮಸ್ಯೆ ಇದ್ದದ್ದೇ. ಈಗಿನ ಬದಲಾಗುತ್ತಿರುವ ಹವಾಗುಣಕ್ಕೆ ಬೆಳಗಿನ ತಿಂಡಿಗೆ ಇದನ್ನು ಮಾಡಿ ಮನೆಮಂದಿಯ ಆರೋಗ್ಯ ಕಾಪಾಡಿ. ಹುರುಳಿಕಾಳು ಈ ಹವಾಗುಣಕ್ಕೆ ಹೇಳಿಮಾಡಿಸಿದ ಧಾನ್ಯ. ಕಫ ಹೆಚ್ಚಾಗಿ ಮೂಗು ಕಟ್ಟಿ ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ.  ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ….

  • ಆರೋಗ್ಯ

    ಉತ್ತಮ ಆರೋಗ್ಯಕ್ಕೆ ಕಬ್ಬಿನ ಹಾಲು. ಕಬ್ಬಿನ ಹಾಲಿನ ಮಹತ್ವ ನೋಡಿ!

    1. ಕಬ್ಬಿನ ಹಾಲು ದೇಹಕ್ಕೆ ಶಕ್ತಿ ತುಂಬುವುದರ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿ 2. ಕಬ್ಬಿನ ಹಾಲು ಕುಡಿದರೆ ನಿದ್ದೆ ಚೆನ್ನಾಗಿ ಬರುವುದು. ತಾಜಾ ಕಬ್ಬಿನ ರಸವನ್ನು ನಿಯಮಿತವಾಗಿ ಸೇವಿಸಿದರೆ ಇನ್ಸೊಮ್ನಿಯ(ನಿದ್ರೆ ಹೀನತೆ) ಸಮಸ್ಯೆಯೂ ದೂರವಾಗುತ್ತದೆ. 3. ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಶುಗರ್‌ಕೇನ್‌ ಜ್ಯೂಸ್‌ ಬೆಸ್ಟ್‌. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆ ಕೊಬ್ಬು ಕರಗಿಸುವಲ್ಲಿ ಸಹಕಾರಿ. 4. ಕಬ್ಬಿನ ಹಾಲು ಕಾಮಾಲೆ ರೋಗದಿಂದ ಗುಣವಾಗಲು ಉತ್ತಮ ಮನೆಮದ್ದು. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್‌…

  • ವಿಚಿತ್ರ ಆದರೂ ಸತ್ಯ

    ಇವನಿಗೆ 12ಸಾವಿರ ವರ್ಷ ಜೈಲು ಶಿಕ್ಷೆ!ಶಾಕ್ ಆಯ್ತಾ?ಈ ಲೇಖನಿ ಓದಿ…

    ಈತನಿಗೆ 12 ಸಾವಿರ ವರ್ಷ ಜೈಲು ಶಿಕ್ಷೆ!ಏನು ಕಾಮಿಡಿ ಮಾಡುತ್ತಿದ್ದೇವೆ ಅನುಸುತ್ತೆ ಆಲ್ವಾ?ಅನ್ನಿಸಲೇಬೇಕು. ಯಾಕಂದ್ರೆ ಈಗಂತೂ ಒಬ್ಬ ಮನುಷ್ಯ ಬದುಕೋದು 60 ವರ್ಷನಾ 70ವರ್ಷನಾ ಅಂತ ಗ್ಯಾರಂಟಿ ಇಲ್ಲ. ಇನ್ನೂ 12 ಸಾವಿರ ವರ್ಷ ಅಂದ್ರೆ ನಗು ಬರದೆ ಇರುತ್ತಾ!